Saturday, July 27, 2024

Latest Posts

ಉಕ್ರೇನ್ ಮೇಲೆ ರಷ್ಯಾ ದಾಳಿ: 17 ಮಂದಿಯ ದುರ್ಮರಣ, 60ಕ್ಕೂ ಹೆಚ್ಚು ಜನರಿಗೆ ಗಾಯ..

- Advertisement -

International News: ಕಳೆದ ವರ್ಷ ಶುರುವಾಗಿದ್ದ ರಷ್ಯಾ ಉಕ್ರೇನ್ ಯುದ್ಧ ಇಂದಿಗೂ ನಿಂತಿಲ್ಲ. ಅಲ್ಲಲ್ಲಿ ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡುತ್ತಲೇ ಇದೆ. ಇಂದು ಉಕ್ರೇನ್ ಮೇಲೆ ರಷ್ಯಾ ಮಾಡಿದ ದಾಳಿಯಲ್ಲಿ 17 ಮಮಂದಿ ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

ರಷ್ಯಾ ಉಕ್ರೇನ್‌ನ ಚರ್ನಿಹಿವ್ ಎಂಬ ಸ್ಥಳದಲ್ಲಿ ಕ್ಷಿಪಣಿ ದಾಳಿ ಮಾಡಿದ್ದರ ಪರಿಣಾಮವಾಗಿ 17 ಮಂದಿ ಸಾವನ್ನಪ್ಪಿದ್ದಾರೆ, 60ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಅಲ್ಲಿನ ಕಟ್ಟಡಗಳು ಕೂಡ ಧ್ವಂಸಗೊಂಡಿದೆ. ಅಲ್ಲದೇ, ಗಾಯಗೊಂಡವರಿಗೆ ಚಿಕಿತ್ಸೆಗಾಗಿ ಸರಿಯಾದ ಆಸ್ಪತ್ರೆ ಸಿಗದೇ, ರೋಗಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಏಕೆಂದರೆ, ಆಸ್ಪತ್ರೆಗಳ ಕಟ್ಟಡಗಳು ಕೂಡ ಧ್ವಂಸಗೊಂಡಿದೆ.

ಇನ್ನು ಈ ದಾಳಿಯಾಗಿ ಕೆಲ ಹೊತ್ತಿನ ಬಳಿಕ, ಉಕ್ರೇನ್ ಅಧ್ಯಕ್ಷರು, ಬೆಂಬಲಿತ ದೇಶಗಳಿಗೆ ಶಸ್ತ್ರಾಸ್ತ್ರ ಪೂರೈಕೆಗೆ ಮನವಿ ಮಾಡಿದ್ದಾರೆ. ಇನ್ನು ರಷ್ಯಾ ಮಾಡಿದ ದಾಳಿಯನ್ನು ಎದುರಿಸಲು ಉಕ್ರೇನ್‌ಗೆ ಸಾಧ್ಯವಾಗಲಿಲ್ಲ. ಏಕೆಂದರೆ ತಮ್ಮ ಬಳಿ ಕ್ಷಿಪಣಿ ಇರಲಿಲ್ಲವೆಂದು ಉಕ್ರೇನ್ ಸೇನೆ ಹೇಳಿದೆ. ಉಕ್ರೇನ್ ವಾಯುಸೇನೆ ಪ್ರಬಲವಿಲ್ಲದ ಕಾರಣ, ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಉಕ್ರೇನ್ ನಾಗರಿಕರು ಸಾವನ್ನಪ್ಪಿದ್ದಾರೆ. ಮೂರು ಬಾರಿ ಸ್ಪೋಟ ಸಂಭವಿಸಿದ್ದು, ಮೂಲಸೌಕರ್ಯ, ಆಸ್ಪತ್ರೆಗಳು ಕೂಡ ಧ್ವಂಸವಾಗಿದೆ.

ತನ್ನ ಮಗು ಸೂರ್ಯನ ಕಿರಣವನ್ನಷ್ಟೇ ಸೇವಿಸಬೇಕೆಂದು ತಂದೆಯ ಹಠ: ಮಗು ಸಾವು

ಕೆಮ್ಮು-ಶೀತ ಬಂತೆಂದು ಕೈಗೆ ಸಿಕ್ಕ ಮಾತ್ರೆ ಸೇವಿಸಿದ ಮಹಿಳೆ, ಕಣ್ಣಿಂದ ಬಂತು ರಕ್ತ..!

ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಪಲ್ಲವಿ ಡೆಂಪೋ.. ಈಕೆಯ ಆಸ್ತಿಯೇ 1,400 ಕೋಟಿ..

- Advertisement -

Latest Posts

Don't Miss