Friday, March 14, 2025

Latest Posts

ನೇಹಾ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ಕೇಸ್: ಕ್ಷುಲ್ಲಕ ವಿಚಾರಕ್ಕೆ ಯುವತಿ ಮೇಲೆ ಹಲ್ಲೆ..

- Advertisement -

Hubli News: ಹುಬ್ಬಳ್ಳಿ: ಕ್ಷುಲಕ ವಿಚಾರಕ್ಕೆ ಯುವತಿಯೊಬ್ಬಳಿಗೆ ಯುವಕನೊರ್ವ ಹಲ್ಲೇ ಮಾಡಿದ ಘಟನೆ ಕೇಶ್ವಾಪುರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಹಾಡುತ್ತಿದೆ.

ಇಲ್ಲಿನ ಪೂರ್ವ ಸಂಚಾರಿ ಪೋಲಿಸ್ ಠಾಣೆಯ ಮುಂಭಾಗದಲ್ಲಿನ ಹಣ್ಣಿನ ಅಂಗಡಿಗೆ ಬಂದಿದ್ದ ಸ್ನೇಹಾ (ಹೆಸರನ್ನು ಬದಲಾವಣೆ ಮಾಡಲಾಗಿದೆ) ಎಂಬ ಯುವತಿ ಹಣ್ಣು ಖರೀದಿಗೆ ಬಂದಿದ್ದ ವೇಳೆ ಅಫ್ತಾಬ್ ಎಂಬ ಯುವಕ ಅವಾಚ್ಯವಾಗಿ ನಿಂದಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಯುವತಿಗೆ ಕುಪಿತಗೊಂಡ ಯುವಕ ಹಲ್ಲೆಗೆ ಮುಂದಾಗಿದ್ದಾನೆ.‌ ಆಗ ಸ್ಥಳದಲ್ಲಿದ್ದ ಜನರು ಹಲ್ಲೇ ಮಾಡುತ್ತಿದ್ದ ಯುವಕನನ್ನು ಹಿಡಿದು ಹೊಡೆದಿದ್ದಾರೆ.

ಬಳಿಕ ಕೇಶ್ವಾಪುರ ಪೋಲಿಸ್ ಠಾಣೆಗೆ ವಿಷಯ ತಿಳಿಸಿ ಯುವತಿ ಹಾಗೂ ಯುವಕನನ್ನು ಕರೆದೊಯ್ದು, ದೂರು ದಾಖಲಿಸಿದ್ದಾರೆ.

ಇನ್ನೊಂದು ಕಡೆಗೆ ಯುವತಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ನಾನು ಮತ್ತೆ ಅಫ್ತಾಬ್ ಸ್ನೇಹಿತರಾಗಿದ್ದೇವು, ಆ ಬಳಿಕ ಕಳೆದ ಕೆಲವು ದಿನಗಳ ಹಿಂದೆ ನಡೆದ ನೇಹ ಪ್ರಕರಣವನ್ನು ನೋಡಿ ನಮ್ಮ ಸ್ನೇಹವನ್ನು ಅಂತ್ಯಗೊಳಿಸಲು ನಿರ್ಧಾರ ಮಾಡಿದ್ದೇವು. ಅದರಂತೆ ಅಫ್ತಾಬ್ ನೀಡಿದ ಗಿಫ್ಟ್’ಗಳನ್ನು ಕೊಟ್ಟು ವಾಪಾಸ್ ಬರುವಾಗ ಅಫ್ತಾಬ್ ಗಿಫ್ಟ್’ಗಳಿಗೆ ಬೆಂಕಿ ಹಚ್ಚಿ ಹಲ್ಲೆ ಮಾಡಿದ್ದಾನೆಂದು ತಿಳಿಸಿದ್ದಾರೆ.

ಸದ್ಯ ಪೋಲಿಸರು ಈ ಕುರಿತು ತನಿಖೆ ನಡೆಸುತ್ತಿದ್ದು, ಇನ್ನಷ್ಟೇ ಘಟನೆಯ ಸತ್ಯಾಸತ್ಯತೆಯನ್ನು ತಿಳಿಸಬೇಕಿದೆ‌.

ಬಿಜೆಪಿ ಸಾವಿನ ಮೇಲೆ ರಾಜಕಾರಣ ಮಾಡುತ್ತಿದ್ದು, ಸಾವನ್ನ ಹಬ್ಬವನ್ನಾಗಿ ನೋಡುತ್ತಿದೆ: ಸಂತೋಷ್ ಲಾಡ್

ನಾಮಪತ್ರ ವಾಪಸ್ ಪಡೆದಿದ್ದೇನೆ, ಆದ್ರೆ ಧರ್ಮಯುದ್ಧದಿಂದ ಹಿಂದೆ ಸರಿಯುವುದಿಲ್ಲ: ದಿಂಗಾಲೇಶ್ವರ

ರಕ್ಷಾ ರಾಮಯ್ಯ ಕುಟುಂಬದ ವಿರುದ್ಧ ಭೂ ಕಬಳಿಕೆ ಆರೋಪ

- Advertisement -

Latest Posts

Don't Miss