Thursday, February 6, 2025

Latest Posts

ಊಟಕ್ಕಾಗಿ ಮತದಾನವನ್ನೇ ನಿಲ್ಲಿಸಿದ ಚುನಾವಣಾ ಸಿಬ್ಬಂದಿ: ಮತದಾರರು ಆಕ್ರೋಶ

- Advertisement -

Dharwad News: ಧಾರವಾಡ: ಧಾರವಾಡ ಲೋಕಸಭೆ ಕ್ಷೇತ್ರದ ಮತಗಟ್ಟೆಯಲ್ಲಿ ಊಟಕ್ಕಾಗಿ ಮತದಾನವನ್ನೇ (voting) ನಿಲ್ಲಿಸುವ ಮೂಲಕ ಸಿಬ್ಬಂದಿ‌ಗಳು ಎಡವಟ್ಟು ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ನಗರದ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯಲ್ಲಿನ ಮತಗಟ್ಟೆ ನಂ. 180ರಲ್ಲಿ ಮತದಾರರನ್ನು ನಿಲ್ಲಿಸಿ ಊಟದ ವಿರಾಮ ತೆಗೆದುಕೊಂಡಿದ್ದಾರೆ.

ಮತದಾರರನ್ನು ಕ್ಯೂ ನಿಲ್ಲಿಸಿ ಮತಗಟ್ಟೆ ಬಾಗಿಲು ಹಾಕಿ ಊಟಕ್ಕೆ ಕುಳಿತುಕೊಂಡಿದ್ದಾರೆ. ಸಿಬ್ಬಂದಿ ಊಟ ಮುಗಿಯುವವರೆಗೆ ಮತದಾರರು ಕಾಯುತ್ತಾ ನಿಂತಿದ್ದಾರೆ. ಮತದಾನ ನಿಲ್ಲಿಸಿದ್ದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ನಿಯಮ ಬಾಹಿರ ಕ್ರಮ. ಸಂಬಂಧಿಸಿದವರ ಮೇಲೆ ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ. ಸುಮಾರ 20 ನಿಮಿಷ ಮತದಾನ ನಿಲ್ಲಿಸಲಾಗಿದೆ. ಹೀಗಾಗಿ 20 ನಿಮಿಷ ಹೆಚ್ಚುವರಿ ವೇಳೆ ನೀಡಲು ಆಗ್ರಹಿಸಲಾಗಿದೆ.

ಕುಮಾರಸ್ವಾಮಿ ಸುದ್ದಿಗೋಷ್ಠಿ: ಸರ್ಕಾರಕ್ಕೆ ಬೇಕಾಗಿರುವುದು ಬರೀ ಪ್ರಚಾರವೆಂದು ಆರೋಪ

Prajwal Pen drive case: ಒಂದು ಸಿದ್ದರಾಮಯ್ಯ ಇನ್ನೊಂದು ಶಿವಕುಮಾರ್ ಇನ್ವಿಸ್ಟಿಗೇಶನ್ ಟೀಂ: ಹೆಚ್ಡಿಕೆ

ನವೀನ್ ಗೌಡ ಮಾತನಾಡಿದ ಆಡಿಯೋ, ಜಮೀರ್ ಜೊತೆಗಿರುವ ಫೋಟೋ ರಿಲೀಸ್ ಮಾಡಿದ ಕುಮಾರಸ್ವಾಮಿ

- Advertisement -

Latest Posts

Don't Miss