ಇಂದು ನಾವು ಅತ್ಯುತ್ತಮ ಲಾಭ ಗಳಿಸಬಹುದಾದ 4 ಉದ್ಯಮಗಳ ಬಗ್ಗೆ ತಿಳಿಸಿಕೊಡುತ್ತೇವೆ.

ಮನೆಯಲ್ಲೇ ಟ್ಯೂಷನ್ ತೆಗೆದುಕೊಳ್ಳಬಹುದು: ನೀವು ಮನೆಯಲ್ಲೇ ಪ್ರೈಮರಿ ಶಾಲೆ ಮಕ್ಕಳಿಗೆ ಟ್ಯೂಷನ್ ತೆಗೆದುಕೊಳ್ಳಬಹುದು. ಇತ್ತೀಚೆಗಂತೂ ನರ್ಸರಿ ಶಾಲೆ ಮಕ್ಕಳಿಗೂ ಟ್ಯೂಷನ್ ಕಳಿಸಲಾಗುತ್ತದೆ. ಆ ರೀತಿ ನೀವೂ ಪುಟ್ಟ ಪುಟ್ಟ ಮಕ್ಕಳಿಗೆ ಟ್ಯೂಷನ್ ತೆಗೆದುಕೊಳ್ಳಬಹುದು.
ಬೇಬಿ ಸಿಟ್ಟಿಂಗ್: ದೊಡ್ಡ ದೊಡ್ಡ ಸಿಟಿಗಳಲ್ಲಿ ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವುದರಿಂದ ಮಕ್ಕಳನ್ನ ನೋಡಿಕೊಳ್ಳಲು ಬೇಬಿ ಸಿಟ್ಟಿಂಗ್ ಮೊರೆ ಹೋಗುತ್ತಾರೆ. ಆದ್ದರಿಂದ ಬೇಬಿ ಸಿಟ್ಟಿಂಗ್ ನಡೆಸುವುದರಿಂದ ಉತ್ತಮ ಲಾಭ ಗಳಿಸಬಹುದು. ಆದ್ರೆ ಮಕ್ಕಳನ್ನ ಕಾಳಜಿಯಿಂದ, ಪ್ರೀತಿಯಿಂದ ನೋಡಿಕೊಳ್ಳುವ ಜವಾಬ್ದಾರಿ ಹೊರಬೇಕು.
X-rox ಅಂಗಡಿ: ಶಾಲಾ ಕಾಲೇಜುಗಳ ಬಳಿ X-rox ಅಂಗಡಿ ಇಟ್ಟರೆ ಒಳ್ಳೆಯ ಲಾಭ ಪಡಿಯಬಹುದು. ಶಾಲಾ ಕಾಲೇಜು ಮಕ್ಕಳಿಗೆ ಪ್ರಾಜೆಕ್ಟ್, ನೋಟ್ಸ್ ಬರಿಯೋದು ಹಲವಾರು ಹೋಮ್ ವರ್ಕ್‌ಗಳನ್ನ ಕೊಡುತ್ತಾರೆ ಈ ವೇಳೆ ನೋಟ್ಸ್ X-rox ಮಾಡಿಸಬೇಕಾಗುತ್ತದೆ. ಈ ಕಾಣಕ್ಕೆ X-rox ಅಂಗಡಿ ಇಟ್ಟರೆ ಒಳ್ಳೆಯ ಲಾಭ ಪಡಿಯಬಹುದು.
ಕುರುಕಲು ತಿಂಡಿಗಳ ಅಂಗಡಿ: ಕಾಲೇಜು ಆಫೀಸುಗಳ ಬಳಿ ಕುರುಕಲ ತಿಂಡಿಗಳ ಅಂಗಡಿ, ಬಜ್ಜಿ ಬೋಂಡಾ ಅಂಗಡಿ, ಬೇಕರಿ, ಐಸ್‌ಕ್ರೀಮ್ ಅಂಗಡಿ ಇಟ್ಟರೆ ಒಳ್ಳೆಯ ಲಾಭ ಪಡಿಯಬಹುದು. ದೂರದೂರದಿಂದ ಮಕ್ಕಳು ಕಾಲೇಜಿಗೆ ಬಂದಿರುತ್ತಾರೆ. ಅಂಥವರು ತಿಂಡಿಗಾಗಿ ಹುಡುಕಾಡುತ್ತಾರೆ. ಹಾಗಾಗಿ ತಿಂಡಿಗಳ ಅಂಗಡಿ ಇಡಬಹುದು. ಆದರೆ ಶುಚಿತ್ವ, ತಿಂಡಿಗಳ ಕ್ವಾಲಿಟಿ ಒಳ್ಳೆಯದಾಗಿರುವುದು ಮುಖ್ಯವಾಗಿರುತ್ತದೆ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ
ಲೋನ್ ಅಪ್ಲೈ ಮಾಡೋದು ಹೇಗೆ..? ಪ್ರಧಾನ ಮಂತ್ರಿ ಆವಾಸ್ ಯೋಜನೆ ಲಾಭ ಪಡೆಯೋದು ಹೀಗೆ..? ಯಾವ ಬ್ಯಾಂಕ್ ಸೇಫ್ ಅಲ್ಲ..? ಎಲ್ಲಾ ರೀತಿಯ ಹಣಕಾಸಿನ ಮಾಹಿತಿಗಾಗಿ ಈ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.. ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ..




