Horoscope: ಈ ರಾಶಿಯ ಪುರುಷರು ಉತ್ತಮ ಪತಿಯಾಗಬಲ್ಲರು

Horoscope: ಹೆಣ್ಣು ಮಕ್ಕಳ ನಿಜವಾದ ಜೀವನ ಶುರುವಾಗೋದೇ ಮದುವೆಯ ಬಳಿಕ. ಮದುವೆಗೂ ಮುನ್ನ ಅಪ್ಪ ಅಮ್ಮನ ಮುದ್ದಿನ ಮಗಳಾಗಿ ಸಕಲ ಸೌಲಭ್ಯಗಳ ಜತೆ ಬೆಳೆಯುವ ಮಗಳು ಮದುವೆಯಾದ ಬಳಿಕ ನಿಜವಾದ ಜೀವನ ನೋಡುತ್ತಾಳೆ. ಅಲ್ಲಿ ಎದುರಾಗುವ ಚಾಲೆಂಜ್, ವ್ಯಂಗ್ಯದ ಮಾತು, ಕೀಳುತನ ಎಲ್ಲವೂ ಆಕೆ ಸಹಿಸಿ ಜೀವನ ನಡೆಸಬೇಕಾಗುತ್ತದೆ. ಅಂಥ ಸಮಯದಲ್ಲಿ ಸಾಥ್ ನೀಡಬೇಕಾದವನು ಗಂಡ. ಹಾಗಾದ್ರೆ ಯಾವ ರಾಶಿಯ ಗಂಡಸರು ಅತೀ ಉತ್ತಮ ಪತಿಯಾಗುತ್ತಾರೆ ಅಂತಾ ತಿಳಿಯೋಣ ಬನ್ನಿ..

ಕರ್ಕ: ಕರ್ಕ ರಾಶಿಯ ಪುರುಷರೇ ಆಗಲಿ ಮಹಿಳೆಯರೇ ಆಗಲಿ, ತಮ್ಮ ಜೀವನ ಸಂಗಾತಿಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಪತ್ನಿಯ ಆರೋಗ್ಯದ ವಿಷಯದಲ್ಲಿ, ಹಣದ ವಿಷಯದಲ್ಲಿ ಅಥವಾ ಯಾವುದೇ ವಿಚಾರದಲ್ಲಿ ಪತ್ನಿಗೆ ಸಂಪೂರ್ಣ ಬೆಂಬಲ ನೀಡುತ್ತಾರೆ. ಜೀವನ ಸಂಗಾತಿಗೆ ಗೌರವ ಸಿಗದಿದ್ದರೆ ಅಂಥ ಸ್ಥಾನದಲ್ಲಿ ತಾವೂ ಇರುವುದಿಲ್ಲ ಎನ್ನುವ ಸ್ವಭಾವ ಇವರದ್ದು.

ಮೀನ: ಮೀನ ರಾಶಿಯವರು ಶಾಂತ ಸ್ವಭಾವದವರು. ಇವರು ತಮ್ಮ ಜೀವನ ಸಂಗಾತಿಯನ್ನು ಸದಾಕಾಲ ನೆಮ್ಮದಿಯಿಂದ ಇರಿಸಲು ಪ್ರ.ತ್ನಿಸುವರು. ಅಲ್ಲದೇ ಪ್ರೀತಿ, ಕಾಳಜಿಯಿಂದ ಇಡುತ್ತಾರೆ. ಸಂಗಾತಿಯ ಮುಖದಲ್ಲಿ ನಗು ಕಾಣಲು ಏನು ಬೇಕಾದರೂ ಮಾಡಲು ಈ ರಾಶಿಯವರು ಸಿದ್ಧರಿರುತ್ತಾರೆ.

ಕನ್ಯಾ: ಕನ್ಯಾ ರಾಶಿಯವರು ಬುದ್ಧಿವಂತರಾಗಿರುತ್ತಾರೆ. ಅವರ ಮಾತು ನೇರವಾಗಿದ್ದರೂ, ಆ ಮಾತಿನಿಂದಲೇ ಜೀವನ ಸಂಗಾತಿಯನ್ನು ಸಮಸ್ಯೆಗಳಿಂದ ಅವರು ತಪ್ಪಿಸುತ್ತಾರೆ.

ತುಲಾ: ತುಲಾ ರಾಶಿಯವರು ತಮ್ಮ ಪ್ರೀತಿಯನ್ನು ತೋರಿಸುವುದಿಲ್ಲವಾದರೂ, ಜೀವನ ಸಂಗಾತಿಯ ಬಗ್ಗೆ ಹೆಚ್ಚು ಕಾಳಜಿ ಇರುತ್ತದೆ. ಅವರು ಜೀವನ ಸಂಗಾತಿಯ ಖುಷಿಗಾಗಿ ತಮ್ಮ ಕೈಲಾದ ಪ್ರಯತ್ನ ಮಾಡುತ್ತಾರೆ.

About The Author