Tuesday, November 18, 2025

Latest Posts

ಬೆಳಗಾವಿ ಮಹಾನಗರ ಪಾಲಿಕೆಗೆ ಅಚಾನಕ್ ಆಗಿ ಭೇಟಿ ಕೊಟ್ಟ ಲೋಕಾಯುಕ್ತ ಅಧಿಕಾರಿಗಳು

- Advertisement -

Belagavi News: ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಗೆ ಲೋಕಾಯುಕ್ತ ಅಧಿಕಾರಿಗಳು ಸರ್ಪೈಸ್ ವಿಸಿಟ್ ಕೊಟ್ಟಿದ್ದು, ಕಟ್ಟಡ ಪರವಾನಗಿ ವಿಭಾಗದಲ್ಲಿ ಪರಿಶೀಲನೆ ನಡೆಸಿದ್ದಾರೆ.

ಸಾರ್ವಜನಿಕರು ಭ್ರಷ್ಟಾಚಾರವಾಗುತ್ತಿದೆ ಎಂದು ದೂರು ನೀಡಿದ ಹಿನ್ನೆಲೆ, ಈ ರೀತಿ ಭೇಟಿ ನೀಡಿದ್ದು, ಪಾಲಿಕೆ ಕಚೇರಿಗಳಲ್ಲಿ ಸಾರ್ವಜನಿಕರ ಅರ್ಜಿ ವಿಳಂಬ ಆಗ್ತಿರುವ ಬಗ್ಗೆ ದೂರು ಬಂದಿವೆ ಎಂದು ಹೇಳಲಾಗಿದೆ. ಕಟ್ಟಡ ಪರವಾನಗಿ ವಿಭಾಗದಲ್ಲಿ ಎಸ್ಪಿ ಅವರು ಪಾಲಿಕೆ ಆಯುಕ್ತ ಲೋಕೇಶ್ ಕುಮಾರ್‌ ಅವರನ್ನು ಕರೆಸಿದ್ದು, ವಾಹೀದ್ ಅತ್ತರ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ಈ ವೇಳೆ ಎಸ್ಪಿ ಹಣಮಂತ ರಾಯ್‌ಗೆ 10 ಕ್ಕೂ ಅಧಿಕ ಲೋಕಾಯುಕ್ತ ಅಧಿಕಾರಿಗಳು ‌ಸಾಥ್ ನೀಡಿದ್ದಾರೆ. ಆಡಳಿತ, ಕಂದಾಯ, ಆರೋಗ್ಯ, ತೆರಿಗೆ, ಆಶ್ರಯ, ಲೋಕೋಪಯೋಗಿ, ಪರಿಸರ, ಇಂಜಿನಿಯರಿಂಗ್, ಜನನ-ಮರಣ ಪ್ರಮಾಣ ಪತ್ರ ವಿತರಣೆ ಕೇಂದ್ರ ವಿಭಾಗಕ್ಕೆ ಭೇಟಿ ನೀಡಿ, ಆಯಾ ಶಾಖೆಯ ಸಿಬ್ಬಂದಿ, ಕಚೇರಿ ಕಡತಗಳ ಪರಿಶೀಲನೆ ನಡೆಸಲಾಗಿದೆ.

ಅಕೌಂಟೆಂಟ್ ಸೂಪರಿಡೆಂಟ್ ಸಾವು: ಕಾಂಗ್ರೆಸ್ ಸಚಿವರನ್ನು ವಜಾಗೊಳಿಸಬೇಕೆಂದು ಬಿಜೆಪಿ ಆಗ್ರಹ

Political News: ಸಚಿವ ನಾಗೇಂದ್ರ ವಜಾಕ್ಕೆ ಪಿ.ರಾಜೀವ್ ಒತ್ತಾಯ

ಅಕ್ರಮ ಹೊಟೇಲ್ ವಾರದೊಳಗೆ ತೆರವುಗೊಳಿಸಬೇಕು: ಯಶ್ಪಾಲ್ ಸುವರ್ಣ ಆಗ್ರಹ

- Advertisement -

Latest Posts

Don't Miss