Sandalwood News: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಿತ್ರರಂಗದಿಂದ ನಟ ದರ್ಶನ್ ಅಮಾನತಿಗೆ ಆಗ್ರಹಿಸಿ, ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟನೆ ನಡೆದಿದ್ದು, ದರ್ಶನ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ, ದರ್ಶನ್ ಮಾಡಿರುವ ತಪ್ಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಮ್.ಸುರೇಶ್ ಈ ಬಗ್ಗೆ ಮಾತನಾಡಿದ್ದು, ಮನವಿಯನ್ನ ಸ್ವೀಕರಿಸಿದ್ದೇವೆ. ಫಿಲ್ಮ್ ಚೇಂಬರ್ ನಿಷ್ಕ್ರಿಯ ಅನ್ನೋದನ್ನ ಹೇಳಬೇಡಿ. ಕಮೀಷನರ್ ಹೇಳಿದಂತೆ ತನಿಖೆ ನಡೆಯುತ್ತಿದೆ. ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ಆರೋಪಿ ಯಾರು? ಅಪರಾಧಿ ಯಾರು? ಅನ್ನೋದು ಗೊತ್ತಾಗಲಿದೆ. ನಾನೊಬ್ಬನೇ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ. ಈ ಸಂಬಂಧ ಕಲಾವಿದರ ಸಂಘದ ಸಭೆ ಕರೆದು ಚರ್ಚಿಸಿ, ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಸರ್ವ ಸಂಘಟನೆ ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ಮಾತನಾಡಿದ್ದು, ಕೊಲೆ ಆರೋಪ ಎದುರಿಸುತ್ತಿರುವ ದರ್ಶನ್ ಅವರನ್ನ ಅಮಾನತು ಮಾಡಬೇಕು. ವಾಣಿಜ್ಯ ಮಂಡಳಿ ಕೂಡಲೇ ಅಮಾನತು ಮಾಡಬೇಕು. ಪದೇ ಪದೇ ಇದೇ ರೀತಿಯ ಅವರ ವರ್ತನೆ ಸರಿಯಲ್ಲ. ಸಾಕಷ್ಟು ಬಾರಿ ದೂರು ನೀಡಿದ್ದೇವೆ ಕ್ರಮ ತೆಗೆದುಕೊಂಡಿಲ್ಲ. ಅದ್ರೆ ಈ ಬಾರಿ ಕ್ರಮ ತೆಗೆದುಕೊಳ್ಳಬೇಕು. ದರ್ಶನ ಯಾವುದೇ ಸಿನಿಮಾ ಬಿಡುಗಡೆ ಅವಕಾಶ ಮಾಡಿಕೊಡಬಾರದು. ದರ್ಶನ ಮೇಲೆ ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಫಿಲ್ಮ್ ಛೇಂಬರ್‌ಗೆ ಆಗ್ರಹಿಸಿದ್ದಾರೆ.
ಪತ್ನಿ ಈ ಕೆಲಸ ಮಾಡುವುದಿಲ್ಲವೆಂದು ಡಿವೋರ್ಸ್ ಕೇಳಿದ ಪತಿ: ಈ ರೀತಿ ತೀರ್ಪು ನೀಡಿದ ಕೋರ್ಟ್