Health Tips: ಮಹಿಳೆಯರಿಗೆ 30 ದಾಟಿದ ಬಳಿಕ, ನಿಧಾನವಾಗಿ ಮೈ ಕೈ ನೋವು ಶುರುವಾಗುತ್ತದೆ. ಸೊಂಟ, ಬೆನ್ನು, ಕೈ ಕಾಲು ನೋವಿನ ಜೊತೆಗೆ, ನಡೆದಾಡಲು ಕಷ್ಟ ಕೊಡುವಂಥ ಹಿಮ್ಮಡಿ ನೋವು ಇರುತ್ತದೆ. ಇಂಥ ಹಿಮ್ಮಡಿ ನೋವು 5ರಿಂದ 6 ದಿನಗಳಲ್ಲಿ ಹೋಗಬೇಕು ಅಂದ್ರೆ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಕೊಂಚ ಪಚ್ಚಕರ್ಪೂರ, ಶುದ್ಧ ತುಪ್ಪ ಮತ್ತು ಅರಿಶಿನ ಇವಿಷ್ಟನ್ನು ಮಿಕ್ಸ್ ಮಾಡಿ, ರಾತ್ರಿ ಮಲಗುವ ಮುನ್ನ ಹಿಮ್ಮಡಿಗೆ ಹಚ್ಚಬೇಕು. ಎರಡನೇಯದಾಗಿ ಜೇನುಮೇಣದ ಜೊತೆ ಅರಿಶಿನ ಮಿಕ್ಸ್ ಮಾಡಿ, ಹಿಮ್ಮಡಿಗೆ ಹಚ್ಚಿಕೊಳ್ಳಬೇಕು. ಈವೆರಡರಲ್ಲಿ ಒಂದನ್ನು ಪ್ರತಿದಿನ ಮಾಡುತ್ತ ಬಂದರೆ, ನಿಮ್ಮ ಕಾಲ ಹಿಮ್ಮಡಿಯಲ್ಲಿರುವ ಗಾಯ ಮಾಸುತ್ತದೆ. ಹಿಮ್ಮಡಿ ಸಾಫ್ಟ್ ಆಗುತ್ತದೆ.
ಆದರೆ ಅದನ್ನು ಮುನ್ನ ಕಾಲನ್ನು ಕ್ಲೀನ್ ಆಗಿ ತೊಳೆದುಕೊಳ್ಳಬೇಕು. ಬಳಿಕ ಟವೆಲ್‌ನಿಂದ ಒರೆಸಿ, ಸ್ವಚ್ಛಗೊಳಿಸಿ, ಈ ಮನೆಮದ್ದನ್ನು ಹಚ್ಚಬೇಕು. ಒಂದು ವಾರ ನೀವು ಈ ರೆಮಿಡಿ ಬಳಸಿದರೆ, ನಿಮ್ಮ ಹಿಮ್ಮಡಿಯಲ್ಲಾಗುವ ಬದಲಾವಣೆಯನ್ನು ನೀವೇ ಗಮನಿಸಬಹುದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.