Friday, November 22, 2024

Latest Posts

ಆಪತ್ಪಾಂಧವ ಈಶ್ವರ್ ಮಲ್ಪೆ ಜೀವನದ ಕಥೆ: ವಿಶೇಷ ಸಂದರ್ಶನ

- Advertisement -

Special Story: ಮನೆಯಲ್ಲಿ ಬೆಟ್ಟದಷ್ಟು ತೊಂದರೆ ಇದ್ದರೂ ಕೂಡ, ಇನ್ನೊಬ್ಬರ ಕಷ್ಟಕ್ಕೆ ಹೆಗಲು ಕೊಡುವವರು ನಿಜವಾಗಲೂ ದೇವರಿಗೆ ಸಮ. ಮನೆಯಲ್ಲಿರುವ ಸಮಸ್ಯೆಗಳನ್ನು ಎದುರಿಸಿ, ಈ ಕಡೆ ಜನರ ಕಷ್ಟಕ್ಕೂ ಸ್ಪಂದಿಸುವವರಲ್ಲಿ, ಈಶ್ವರ್ ಮಲ್ಪೆ ಕೂಡ ಒಬ್ಬರು.

ಈಶ್ವರ್ ಮಲ್ಪೆ ಅನ್ನೋ ಹೆಸರು ಮಂಗಳೂರು, ಉಡುಪಿ, ಕುಂದಾಪುರದಲ್ಲಿ ತುಂಬಾ ಫೇಮಸ್‌. ಸಮುದ್ರದಲ್ಲಿ ಮುಳುಗಿದ್ದ ಎಷ್ಟೋ ಜನರ ಮೃತದೇಹವನ್ನು ಹೊರತೆಗೆದು, ಕೆಲವರನ್ನು ಬದುಕಿಸಿದ ಖ್ಯಾತಿ ಇವರಿಗೆ ಸಲ್ಲುತ್ತದೆ.

ಈಶ್ವರ್ ಮಲ್ಪೆ ಅವರಿಗೆ ಮದುವೆಯಾಗಿ, ಇಬ್ಬರು ಮಕ್ಕಳಿದ್ದಾರೆ. ಒಂದು ಗಂಡು ಮಗು, ಇನ್ನೊಂದು ಹೆಣ್ಣು ಮಗು. ಮಕ್ಕಳಿಬ್ಬರು ಶಾಲೆಗೆ ಹೋಗುವ ವಯಸ್ಸಿನವರು. ಆದರೆ ಮಗನಿಗೆ ಅಂಗವೈಕಲ್ಯ. ಆದರೂ ಕೂಡ ಬೇರೆಯವರಿಗೆ ಸಹಾಯ ಮಾಡಲು, ಈಶ್ವರ್ ಮಲ್ಪೆ ಎಂದಿಗೂ ಹಿಂದೆ ಸರಿದಿಲ್ಲ.

ಎಷ್ಟೋ ಜನರ ಪ್ರಾಣ ಉಳಿಸಿದ್ದಲ್ಲದೇ, ಸಮುದ್ರದಲ್ಲಿ ಮುಳುಗಿ ಸತ್ತವರ, ಮೃತದೇಹವನ್ನು ಹುಡುಕಿ ತೆಗೆದು, ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ. ಅಷ್ಟೇ ಅಲ್ಲದೇ, ಹಣ ಸಂಗ್ರಹಿಸಿ, ಇನ್ನೊಬ್ಬರ ಕಷ್ಟಕ್ಕೆ ಪರಿಹಾರ ಒದಗಿಸಿದ್ದಾರೆ. ಬರೀ 8ನೇ ತರಗತಿ ಓದಿರುವ ಈಶ್ವರ್ ಮಲ್ಪೆ, ಸಮಾಜ ಸೇವೆ ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ.

8 ತರಗತಿ ಮುಗಿದ ಬಳಿಕ, ಮನೆಯಲ್ಲೇ ಚಿಕ್ಕ ಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಬಳಿಕ ಮೀನು ಹಿಡಿಯಲು ನದಿ, ಸಮುದ್ರಕ್ಕೆ ಹೋಗುವುದು. ಈಜಾಡುವುದೆಲ್ಲ ಇವರಿಗೆ ಬರುತ್ತಿತ್ತು. ಇನ್ನು ಆ ಸಮಮಯದಲ್ಲಿ ಮನೆಯಲ್ಲಿ ಬಡತನ. ಅಲ್ಲದೇ, ಅಮ್ಮನಿಗೆ ಕ್ಯಾನ್ಸರ್. ದುಡಿದ ದುಡ್ಡೆಲ್ಲ ಅಮ್ಮನ ಔಷಧಿ ಖರ್ಚಿಗೆ ಹೋಗುತ್ತಿತ್ತು.

ಅಕ್ಕನಿಗೆ ಮದುವೆ ಮಾಡಿದ್ದು, ಈಶ್ವರ್ ಮತ್ತು ಅವರ ತಮ್ಮ ಮನೆಯ ಜವಾಬ್ದಾರಿ ಹೊತ್ತಿದ್ದರು. 20 ವರ್ಷದಿಂದ ಈಶ್ವರ್ ಈ ಕೆಲಸದಲ್ಲಿ ತೊಡಗಿದ್ದು, ಈಶ್ವರ್ ಎಷ್ಟು ಆಳಕ್ಕೆ ಬೇಕಾದ್ರೂ ಹೋಗುತ್ತಾರೆ. ಈಶ್ವರ್ ಮಲ್ಪೆ ಅವರ ಜೀವನ ಶೈಲಿ ಹೇಗಿದೆ..? ಅವರ ಕುಟುಂಬಸ್ಥರು ಎಂಥ ಕಷ್ಟದಲ್ಲಿದ್ದಾರೆ..? ಅವರಿಗೆ ನೀವು ಹೇಗೆ ಧನ ಸಹಾಯ ಮಾಡಬಹುದು ಅಂತಾ ತಿಳಿಯಬೇಕಿದ್ದಲ್ಲಿ ಈ ವೀಡಿಯೋ ನೋಡಿ.

- Advertisement -

Latest Posts

Don't Miss