ಹೆಚ್ಚು ಮಾತನಾಡದಿದ್ದರೂ, ಎಲ್ಲವನ್ನೂ ಗಮನಿಸುವ ರಾಶಿಯವರು ಇವರು

Horoscope: ನಾವು ಈಗಾಗಲೇ ಒಂದೊಂದು ರಾಶಿಯವರ ಒಂದೊಂದು ಗುಣದ ಬಗ್ಗೆ ಹೇಳಿದ್ದೇವೆ. ಅದೇ ರೀತಿ ಹೆಚ್ಚು ಮಾತನಾಡದಿದ್ದರೂ ಎಲ್ಲವನ್ನೂ ಗಮನಿಸುವ ರಾಶಿಯವರ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.

ಮಿಥುನ: ಮಿಥುನ ರಾಶಿಯವರು ಬಾಲ್ಯದಿಂದಲೇ ಜಾಣರಾಗಿರುತ್ತಾರೆ. ಮಿಥುನ ರಾಶಿಯ ಪುಟ್ಟ ಮಕ್ಕಳನ್ನು ನೀವು ಗಮನಿಸಿ. ಅವರು ಬಾಲ್ಯದಿಂದಲೇ, ಚುರುಕಾಗಿರುತ್ತಾರೆ. ಎಲ್ಲವನ್ನೂ ತೀಕ್ಷ್ಣವಾಗಿ ಗಮನಿಸುತ್ತಾರೆ. ಹಿರಿಯರು ಹೇಳಿದ ಮಾತನ್ನು, ಬೈಗುಳವನ್ನು ಚೆನ್ನಾಗಿ ಕೇಳಿಸಿಕೊಂಡು ರಿಪೀಟ್ ಮಾಡುತ್ತಾರೆ. ಹಾಗಾಗಿ ಈ ರಾಶಿಯವರು ಎಲ್ಲವನ್ನೂ ಗಮನಿಸುತ್ತಾರೆ.

ಕರ್ಕಾಟಕ: ಕರ್ಕಾಟಕ ರಾಶಿಯವರಿಗೆ ಕೋಪ ಹೆಚ್ಚು. ಅದರಂತೆ ತಾಳ್ಮೆ ಕೂಡ ಹೆಚ್ಚು. ಇವರು ಎಲ್ಲರ ಮಾತನ್ನು, ಎಲ್ಲರ ನಡುವಳಿಕೆಯನ್ನು ಗಮನಿಸುತ್ತಾರೆ. ಆದರೆ ಅದನ್ನು ವಿರೋಧಿಸುವುದಿಲ್ಲ. ಜಗಳ ಮಾಡಲು ಹೋಗುವುದಿಲ್ಲ. ಆದರೆ ಇದ್ದರೆ ಕರ್ಕಾಟಕ ರಾಶಿಯವರ ರೀತಿ ಇರಬೇಕು. ಎಲ್ಲವನ್ನೂ ಗಮನಿಸಿ, ಕೊನೆಗೆ ಕೆಟ್ಟದ್ದು ಮಾತನಾಡುವವರನ್ನು, ಕೆಟ್ಟದ್ದು ಬಯಸುವವರನ್ನು, ಅವಮಾನಿಸುವವರನ್ನು ದೇವರೇ ನೀನೇ ನೋಡಿಕೋ ಎಂದು ಬೇಡಿಕೊಂಡು ಬಿಡುತ್ತಾರೆ. ಇದು ಹೇಗೆ ಕೆಲಸ ಮಾಡುತ್ತದೆ ಎಂದರೆ, ಕರ್ಕಾಟಕ ರಾಶಿಯವರು ಎದುರಾಳಿಗಳಿಗೆ ಕೊಡಬಹುದಾದಂಥ ಶಿಕ್ಷೆಗಿಂತ, ಅತೀ ಕೆಟ್ಟ ಶಿಕ್ಷೆ ಸಿಗುವಂತೆ ಮಾಡುತ್ತದೆ. ಹಾಗಾಗಿ ಯಾರಿಗೂ ಶಾಪ ಹಾಕದೇ, ಎಲ್ಲವನ್ನೂ ದೇವರಿಗೆ ಬಿಡುವುದು ಕರ್ಕಾಟಕ ರಾಶಿಯವರ ಗುಣ.

ತುಲಾ: ತುಲಾ ರಾಶಿಯವರು ಮಾತಿನ ಮಲ್ಲರು. ಕೆಲವೊಮ್ಮೆ ಜನ ಇವರ ಮಾತನ್ನು ಸಲೀಸಾಗಿ ತೆಗೆದುಕೊಳ್ಳುತ್ತಾರೆ. ತಮಾಷೆಯ ಸ್ವಭಾವವಾದ್ದರಿಂದ, ಬೈಯ್ಯುವುದು, ಹೀಯಾಳಿಸುವುದು ಸಾಮಾನ್ಯವಾಗಿರುತ್ತದೆ. ಆದರೆ ಇವರು ಯಾವಾಗ, ಇನ್ನೊಬ್ಬರನ್ನು ಸೈಲೆಂಟ್ ಆಗಿ ಗಮನಿಸುತ್ತಾರೋ, ಆಗ ಅವರೊಂದಿಗಿನ ಮಾತು ಮಿತವಾಗುತ್ತಾ ಹೋಗುತ್ತದೆ. ಹಾಗಾಗಿ ತುಲಾ ರಾಶಿಯವರ ತಮಾಷೆಯನ್ನು ಸಾಮಾನ್ಯ ಎಂದು ತಿಳಿಯಬೇಡಿ. ಇವರ ತಮಾಷೆ ನಿಮ್ಮ ಮನಸ್ಸಿಗೆಷ್ಟು ಮುದ ನೀಡುತ್ತದೆಯೋ, ಇವರ ಮೌನ ನಿಮ್ಮ ಜೀವನದ ಖುಷಿಯನ್ನೇ ಕಿತ್ತುಕೊಳ್ಳಬಹುದು.

ವೃಶ್ಚಿಕ: ವೃಶ್ಚಿಕ ರಾಶಿಯವರು ಸದಾ ಗಂಭೀರವಾಗಿ ಇರುವವರು. ಇವರು ಹೆಚ್ಚು ಮಾತನಾಡುವುದಿಲ್ಲ. ದೂರದಿಂದಲೇ ಎಲ್ಲರನ್ನೂ ಗಮನಿಸಿ, ಎಲ್ಲರ ಮಾತನ್ನು ಗಮನಿಸಿ, ಇವರು ಇಂಥವರು ಎಂದು ಹೇಳುತ್ತಾರೆ. ಅಲ್ಲದೇ, ಯಾರಾದರೂ ಮಾತನಾಡುವುದನ್ನು ಗಮನಿಸಿಯೇ, ಇವರು ಕಷ್ಟದಲ್ಲಿರಬಹುದು ಎಂದು ಅಂದಾಜಿಸುವ ಬುದ್ಧ ಇವರಿಗಿರುತ್ತದೆ.

About The Author