ಸಾಯಿಬಾಬಾ ದೇವರೇ ಅಲ್ಲವೆಂದು ಹೇಳಿಕೆ ಕೊಟ್ಟಿದ್ದ,, ಬಾಗೇಶ್ವರ ಧಾಮದ ಸ್ವಯಂಘೋಷಿತ ದೇವಮಾನವ ಧಿರೇಂದ್ರ ಕೃಷ್ಣರ ವಿರುದ್ಧ ಕೇಸ್ ದಾಖಲಿಸಲಾಗಿದೆ.
‘’ ಜನರು ದೇವರ ಮೇಲೆ ನಂಬಿಕೆ ಇಟ್ಟಿದ್ದಾರೆ. ಆದರೆ ನಾವು ಆ ನಂಬಿಕೆಗೆ ಧಕ್ಕೆ ತರುವ ಕೆಲಸ ಮಾಡುವುದಿಲ್ಲ. ಸಾಯಿಬಾಬಾರನ್ನು ಸಂತರು ಅಥವಾ ಫಕೀರರು ಆಗಿರಬಹುದು. ಆದ್ರೆ ದೇವರಾಗಲು ಸಾಧ್ಯವಿಲ್ಲ ಎಂದಿದ್ದಾರೆ.
ಮಧ್ಯಪ್ರದೇಶದ ಜಬಲ್ ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧಿರೇಂದ್ರ ಶಾಸ್ತ್ರಿ ಪ್ರವಚನ ಕೊಡುತ್ತಿದ್ದರು. ಈ ವೇಳೆ ಅವರ ಭಕ್ತರೊಬ್ಬರಲ್ಲಿ ಈ ರೀತಿಯಾಗಿ ಪ್ರಶ್ನಿಸಿದರು, ‘’ನಮ್ಮ ದೇಶದಲ್ಲಿ ಹಲವಾರು ಜನ ಸಾಯಿಬಾಬಾರ ಭಕ್ತರಾಗಿದ್ದಾರೆ. ಆದರೆ ಸನಾತನ ಧರ್ಮದಲ್ಲಿ ಸಾಯಿಬಾಬಾರ ಪೂಜೆಯನ್ನು ಒಪ್ಪುವುದಿಲ್ಲ. ಆದರೆ ಸಾಯಿಬಾಬಾರ ಪೂಜೆಯನ್ನ ಸನಾತನ ಧರ್ಮದ ಪ್ರಕಾರವೇ ಮಾಡಲಾಗತ್ತೆ. ಈ ಬಗ್ಗೆ ಇನ್ನೂ ಮಾಹಿತಿ ಕೊಡಿ ‘’ ಎಂದು ಕೇಳಿದ್ದಾರೆ.
ಇದಕ್ಕೆ ಉತ್ತರಿಸುವಾಗ ಧಿರೇಂದ್ರ ಶಾಸ್ತ್ರಿ, ‘’ಸಾಯಿಬಾಬಾ ದೇವರಲ್ಲ. ನಾನು ಸಾಯಿಬಾಬಾರನ್ನು ದೇವರೆಂದು ಒಪ್ಪುವುದಿಲ್ಲ. ನಮ್ಮ ದೇಶದಲ್ಲಿ ಶಂಕರಾಚಾರ್ಯರು ಸಾಯಿಬಾಬಾಗೆ ದೇವರ ಸ್ಥಾನ ನೀಡಿಲ್ಲ. ಎಂದು ಹೇಳಿದ್ದಾರೆ. ಮತ್ತು ಎಲ್ಲ ಸನಾತನ ಧರ್ಮದವರು ಶಂಕರಾಚಾರ್ಯರ ಮಾತು ಕೇಳಬೇಕು. ಯಾಕಂದ್ರೆ ಅವರು ನಮ್ಮ ಧರ್ಮದ ಪ್ರಧಾನ ಮಂತ್ರಿಗಳಾಗಿದ್ದಾರೆ ‘’ ಎಂದು ಧಿರೇಂದ್ರ ಹೇಳಿದ್ದಾರೆ.
ಇದೆಲ್ಲ ಹೇಳಿದ್ದು ಯಾರ ಮನಸ್ಸಿಗೂ ನೋವುಂಟು ಮಾಡಿಲ್ಲ. ಆದ್ರೆ ಇದಾದ ಬಳಿಕ ಧಿರೇಂದ್ರ ಒಂದು ಮಾತು ಹೇಳಿದರು. ಅದೇನಂದ್ರೆ, ‘’ಹುಲಿಯ ಚರ್ಮವನ್ನು ಧರಿಸಿ ಯಾರೂ ಹುಲಿಯಾಗಲು ಸಾಧ್ಯವಿಲ್ಲ. ದೇವರು ದೇವರೇ, ಸಂತ ಸಂತನೇ’’ ಎಂದು ಹೇಳಿದ್ದಾರೆ.