ತಂದೆಯೇ ಮಗುವನ್ನು ಗೋಡೆಗೆ ಎಸಿದಿದ್ದ ಪ್ರಕರಣ – ಚಿಕಿತ್ಸೆ ಫಲಿಸದೇ ಮಗು ಸಾವು

Hubli News: ಹುಬ್ಬಳ್ಳಿ: ಅಳುತ್ತದೆ ಎಂದು ಮಗುವನ್ನು ಗೋಡೆಗೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಫಲಿಸದೆ ಮಗು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ.

ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ನಡೆದಿದ್ದ ಘಟನೆ ಇದಾಗಿದೆ. ಮಗು ಅಳುತ್ತಿದ್ದರಿಂದ ನಿದ್ದೆಗೆ ಭಂಗ ಬರುತ್ತಿದೆ ಅಂತ ಪಾಪಿ ತಂದೆ ಶಂಭುಲಿಂಗಯ್ಯ ಶಾಪುರಮಠ ಕೋಪಗೊಂಡಿದ್ದ. ಬಳಿಕ ಒಂದು ವರ್ಷದ ಶ್ರೇಯಾ ಎಂಬುವ ಮಗುವನ್ನು ಗೋಡೆಗೆ ಎಸಿದಿದ್ದ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ.

ಮಗುವಿನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಪಾಪಿ ತಂದೆಗೆ ಕಠಿಣ ಶಿಕ್ಷೆ ವಿಧಿಸುವಂತೆ ಪತ್ನಿಯ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಆರ್ಸಿಬಿ ಆಟಗಾರ್ತಿಗೆ ಪ್ರಪೋಸ್ ಮಾಡಿದ ಅಭಿಮಾನಿ..

ಮೆಟ್ರೋ ನಿಲ್ದಾಣದಲ್ಲಿ ರೈಲಿನ ಮುಂದೆ ಜಿಗಿದು ವ್ಯಕ್ತಿ ಆತ್ಮಹತ್ಯೆ

ಮದುವೆಯಾದ್ರಾ ಕಾರ್ತಿಕ್ ಮತ್ತು ನಮೃತಾ..? ಇಲ್ಲಿದೆ ನೋಡಿ ರಿಯಾಲಿಟಿ..

About The Author