ಈ ಪ್ರಪಂಚದಲ್ಲಿ ಪವಿತ್ರವಾದ ಸಂಬಂಧ ಅಂದ್ರೆ ತಾಯಿ ಮಗುವಿನ ಸಂಬಂಧ. ಆದ್ರೆ ಇದೋ ರೀತಿ ಪವಿತ್ರವಾದ ಸಂಬಂಧ ಅಂದ್ರೆ ಪತಿ- ಪತ್ನಿ ಸಂಬಂಧ. ಯಾಕಂದ್ರೆ ಒಂದು ಕುಟುಂಬ ತಯಾರಾಗೋದೇ, ಪತಿ- ಪತ್ನಿಯಿಂದ. ಅಂಥ ಸುಂದರ ಸಂಬಂಧ ಸುಂದದರವಾಗಿಯೇ ಇರಬೇಕು ಅಂದ್ರೆ ಪತಿಯಾದವನು, ಪತ್ನಿಗೆ ಕೆಲ ವಿಷಯಗಳನ್ನು ಹೇಳಬಾರದು. ಇದು ಪತ್ನಿಯರಿಗೂ ಅನ್ವಯಿಸುತ್ತದೆ. ಹಾಗಾದ್ರೆ ಪತಿ ಪತ್ನಿಗೆ ಹೇಳಬಾರದ ಕೆಲ ಸಿಕ್ರೇಟ್‌ಗಳ ಬಗ್ಗೆ ತಿಳಿಯೋಣ ಬನ್ನಿ..
ಈ 4 ಸ್ಥಳದಲ್ಲಿ ದುಡ್ಡು ಖರ್ಚು ಮಾಡೋಕ್ಕೆ ಕಂಜೂಸುತನ ಮಾಡಬೇಡಿ..
ಮೊದಲನೇಯ ವಿಷಯ, ನಿಮಗೆ ಯಾರಾದರೂ ಅವಮಾನ ಮಾಡಿದ್ದರೆ, ಅದನ್ನು ಪತ್ನಿಯಲ್ಲಿ ಹೇಳಬೇಡಿ. ಚಾಣಕ್ಯರ ಪ್ರಕಾರ, ಓರ್ವ ಪುರುಷನಿಗೆ ಏನಾದರೂ ಅವಮಾನವಾಗಿದ್ದರೆ, ಅದನ್ನು ಅವನು ತನ್ನೊಳಗೆ ಇಟ್ಟುಕೊಳ್ಳಬೇಕೇ ಹೊರತು, ಪತ್ನಿಯಲ್ಲಿ ಹೇಳಿಕೊಳ್ಳಬಾರದು. ಯಾಕಂದ್ರೆ ಪತ್ನಿಯಾದಳು ಮುಂದೊಂದು ದಿನ ಸಿಟ್ಟು ಬಂದಾಗ ಅಥವಾ ತಮಾಷೆಗೆ ನಿಮಗೆ ಆ ಅವಮಾನವನ್ನು ನೆನಪಿಸಿ, ಹಂಗಿಸಬಹುದು. ಎಲ್ಲ ಪತ್ನಿಯರು ಈ ರೀತಿ ಇಲ್ಲವಾದರೂ, ಹಲವರ ಸ್ವಭಾವ ಇದೇ ರೀತಿ ಇರುತ್ತದೆ ಅನ್ನೋದು ಚಾಣಕ್ಯರ ಅಂಬೋಣ.
ಎರಡನೇಯ ವಿಷಯ, ನಿಮ್ಮಲ್ಲಿರುವ ದೌರ್ಬಲ್ಯವನ್ನು ನಿಮ್ಮ ಪತ್ನಿಯಲ್ಲಿ ನೀವು ಹೇಳಬಾರದು ಅಂತಾರೆ ಚಾಣಕ್ಯರು. ಯಾಕಂದ್ರೆ ಕೆಲ ಪತ್ನಿಯರು ತಮ್ಮ ಕೆಲಸವಾಗಬೇಕು ಅಂದ್ರೆ, ಪತಿಯ ದೌರ್ಬಲ್ಯವನ್ನ ಪದೇ ಪದೇ ಹೇಳಿ, ತಮ್ಮ ಕೆಲಸ ಮಾಡಿಸಿಕೊಳ್ಳುತ್ತಾರೆ. ಅಲ್ಲದೇ, ಕೋಪ ಬಂದಾಗ, ಜಗಳವಾದಾಗ, ನಿಮ್ಮ ದೌರ್ಬಲ್ಯದ ಬಗ್ಗೆ ಹಂಗಿಸಿ, ನಿಮ್ಮ ಮನಸ್ಸನ್ನೂ ನೋಯಿಸಬಹುದು. ಹಾಗಾಗಿ ನಿಮ್ಮ ದೌರ್ಬಲ್ಯವನ್ನೂ ಯಾರಲ್ಲಿಯೂ ಹೇಳಬೇಡಿ.
ಯಾರ ಶಾಪದಿಂದಾಗಿ ಕೃಷ್ಣನ ಗೆಳೆಯ ಸುಧಾಮ ಬಡವನಾದ ಗೊತ್ತಾ..?
ಮೂರನೇಯ ವಿಷಯ, ನಿಮ್ಮ ಸ್ಯಾಲರಿಯನ್ನು ನೀವು ಯಾರಿಗೂ ಹೇಳಬಾರದು. ಯಾಕಂದ್ರೆ ನಿಮ್ಮನ್ನು ನಿಜವಾಗ್ಲೂ ಪ್ರೀತಿಸುವ ಪತ್ನಿ, ನಿಮ್ಮ ಸ್ಯಾಲರಿ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅವಳಿಗೆ ಐಷಾರಾಮಿ ಜೀವನ ಬೇಕಾಾದ್ದಲ್ಲಿ, ಅವಳೂ ಕೂಡ ನಿಮ್ಮ ಕಷ್ಟಕ್ಕೆ ಸಾಥ್ ಕೊಟ್ಟು ದುಡಿಯುತ್ತಾಳೆ. ಹಾಗಾಗಿ ನಿಮ್ಮ ಸ್ಯಾಲರಿಯಲ್ಲಿ ಯಾರಲ್ಲಿಯೂ ಹೇಳಬೇಡಿ. ನಿಮ್ಮ ಪತ್ನಿ ನಿಮ್ಮ ಸ್ಯಾಲರಿ ಬಗ್ಗೆ ತಿಳಿದುಕೊಂಡರೆ, ಒಂದು ಅವಳು ನಿಮ್ಮ ಸಂಬಳವನ್ನ ಯಥೇಚ್ಛವಾಗಿ ಖರ್ಚು ಮಾಡಬಹುದು. ಅಥವಾ ನಿಮಗೆ ಅವಶ್ಯಕ ವಸ್ತುಗಳಿಗಾಗಿಯೂ ಖರ್ಚು ಮಾಡಲು ಬಿಡುವುದಿಲ್ಲ. ಹಾಗಾಗಿ ನಿಮ್ಮ ಸಂಬಳ ನಿಮಗಷ್ಟೇ ಗೊತ್ತಿರಲಿ, ಜೊತೆಗೆ ನಿಮಗೆ ಭವಿಷ್ಯಕ್ಕಾಗಿ ಹಣ ಕೂಡಿಡುವ ಬುದ್ಧಿಯೂ ಇರಲಿ.