Tuesday, October 7, 2025

Latest Posts

ಜೀವನದಲ್ಲಿರಬೇಕಂತೆ ಈ 6 ಸುಖ.. ಇದಿಲ್ಲದಿದ್ದರೆ ಜೀವನವೇ ನಶ್ವರ..

- Advertisement -

ವಿದುರನ ಪ್ರಕಾರ ಜೀವನದಲ್ಲಿ 6 ಸುಖಗಳಿರಬೇಕಂತೆ. ಈ 6 ಸುಖಗಳು ಯಾವ ಮನುಷ್ಯನ ಜೀವನದಲ್ಲಿರುತ್ತದೆಯೋ, ಆ ಮನುಷ್ಯ ಖುಷಿ ಖುಷಿಯಾಗಿ ನೆಮ್ಮದಿಯಾಗಿ ಇರುತ್ತಾನಂತೆ. ಹಾಗಾದ್ರೆ ಯಾವುದು ಆ 6 ಸುಖಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಮೊದಲನೇಯದ್ದು ನಿರೋಗಿಯಾಗಿರುವುದು. ಉದಾಹರಣೆಗೆ ನಿಮ್ಮ ಬಳಿ ದುಡ್ಡಿದೆ, ನಿಮ್ಮನ್ನು ಪ್ರೀತಿಸುವ ಜನರಿದ್ದಾರೆ. ಆದ್ರೆ ನೀವು ಅನಾರೋಗ್ಯಕ್ಕೀಡಾಗಿದ್ದೀರಿ. ನೀವು ಆ ದುಡ್ಡನ್ನು ಅನುಭವಿಸಲು ಸಾಧ್ಯವಿಲ್ಲ. ನಿಮ್ಮ ಪ್ರೀತಿಪಾತ್ರರ ಜೊತೆ ಸಮಯ ಕಳಿಯಲು ಸಾಧ್ಯವಾಗುವುದಿಲ್ಲ. ಹೀಗಿದ್ದಾಗ, ನಿಮ್ಮ ಬಳಿ ದುಡ್ಡಿದದ್ದು, ಪ್ರೀತಿಪಾತ್ರರಿದ್ದು ಏನುಪಯೋಗ..? ನಿಮ್ಮಿಷ್ಟದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ನಿಮ್ಮಿಷ್ಟದ ತಿಂಡಿ ತಿನ್ನಲು ಸಾಧ್ಯವಿಲ್ಲದಿದ್ದರೆ ಏನುಪಯೋಗ..? ಹಾಗಾಗಿ ಆರೋಗ್ಯವೇ ಭಾಗ್ಯ ಎನ್ನುವಂತೆ, ನಿರೋಗಿಯಾಗಿರುವುದೇ ಜೀವನದ ಮೊದಲ ಸುಖ.

ಎರಡನೇಯದ್ದು ಸಾಲ ಪಡಿಯದೇ ಜೀವಿಸುವುದು. ಸಾಲ ಪಡೆದವನಿಗೆ ಸಾಲಗಾರರ ಕಾಟವಿರುತ್ತದೆ. ಅಲ್ಲದೇ ಸಾಲದಿಂದ ಜೀವನ ಮಾಡುವವನಿಗೆ ಈ ಜಗತ್ತಿನಲ್ಲಿ ಎಂದಿಗೂ ಗೌರವ ಸಿಗುವುದಿಲ್ಲ. ಇನ್ನು ಸರಿಯಾಗಿ, ನಿಯತ್ತಾಗಿ ದುಡಿಯುವವನು ಎಂದಿಗೂ ಸಾಲ ಮಾಡುವುದಿಲ್ಲ. ಬದಲಾಗಿ ದುಷ್ಚಟ ಇರುವವರೇ ಹೆಚ್ಚಾಗಿ ಸಾಲ ಮಾಡುತ್ತಾರೆ. ಹಾಗಾಗಿ ದುಷ್ಚಟಕ್ಕೆ ಬಲಿಯಾಗಿ, ಸಾಲದಲ್ಲಿ ಬೀಳದಿರುವುದೇ ಎರಡನೇಯ ಸುಖ.

ಮೂರನೇಯದ್ದು ವಿದೇಶದಲ್ಲಿ ಇಲ್ಲದಿರುವುದು. ಕೆಲವರ ಪ್ರಕಾರ ವಿದೇಶದಲ್ಲಿ ಇರುವುದು, ಗೌರವದ ವಿಷಯ. ಅಹಂ ವಿಷಯ. ಆದ್ರೆ ವಿದುರನ ಪ್ರಕಾರ ವಿದೇಶದಲ್ಲಿರುವುದು ಸತ್ಯ ಸುಖವೇ ಅಲ್ಲ. ಯಾಕಂದ್ರೆ ನೀವು ವಿದೇಶಕ್ಕೆ ಹೋದ ಬಳಿಕ, ಮೊದಲು ಮನೆ ಹುಡುಕಲು ಕಷ್ಟ ಪಡಬೇಕಾಗುತ್ತದೆ. ನಂತರ ನಿಮಗೆ ಹೊಂದುವ ರೀತಿಯ ಊಟ ಹುಡುಕಬೇಕು. ನೀವು ಅಲ್ಲಿ ಮಾಡುವ ಕೆಲಸವೂ ನಿಮಗೆ ನೆಮ್ಮದಿ ಕೊಡುವ ರೀತಿ ಇರಬೇಕು. ಇನ್ನು ಅಲ್ಲಿನ ಭಾಷೆ ಕಲಿಯಲು ಕೂಡ ನೀವು ಕಷ್ಟಪಡಬೇಕು. ಆದ್ರೆ ಸ್ವದೇಶದಲ್ಲಿ ಇದ್ಯಾವುದರ ಕೊರತೆ ಇರುವುದಿಲ್ಲ. ವಿದೇಶದಲ್ಲಿ ಈ ವಿಷಯಕ್ಕೆ ಆಗುವಷ್ಟು ಕಷ್ಟ, ಸ್ವದೇಶದಲ್ಲಿ ಆಗುವುದಿಲ್ಲ ಎನ್ನುತ್ತಾರೆ ವಿದುರ.

ನಾಲ್ಕನೇಯದ್ದು ಉತ್ತಮ ಮನುಷ್ಯರೊಡನೆ ಇರುವುದು. ನಾವು ಎಷ್ಟು ಒಳ್ಳೆಯ ಮಾತನಾಡುವ, ಒಳ್ಳೆಯ ಸ್ವಭಾವದ ಜನರೊಡನೆ ಇರುತ್ತೆವೋ, ಅಷ್ಟು ನಮ್ಮ ಜೀವನವೂ ಉತ್ತಮವಾಗಿರುತ್ತದೆ. ಸಜ್ಜನರ ಸಂಗ ಹೆಜ್ಜೇನು ಸವಿದಂತೆ ಅನ್ನೋ ಮಾತಿನಂತೆ, ನಾವು ಸಜ್ಜನರ ಸಂಗ ಮಾಡಬೇಕು ಎನ್ನುತ್ತಾರೆ ವಿದುರ.

ಐದನೇಯದ್ದು ನಿಮ್ಮಿಚ್ಛೆಯ ಕೆಲಸ ಮಾಡುವುದು. ಕೆಲವರಿಗೆ ಸಂಗೀತ ಇಷ್ಟವಿರುತ್ತದೆ, ಇನ್ನು ಕೆಲವರಿಗೆ ನಟನೆ, ಡಾನ್ಸ್, ಇತ್ಯಾದಿ ಇಷ್ಟವಿರುತ್ತದೆ. ಆದ್ರೆ ಅವರು ಆ ಫೀಲ್ಡ್‌ನಲ್ಲಿ ಮುಂದುವರಿಯಲು ಸಾಧ್ಯವಾಗುವುದಿಲ್ಲ. ಕಾರಣ, ಮನೆಭಾರ. ಮನೆ ಮಂದಿಯನ್ನು ಸಾಕುವ ಜವಬ್ದಾರಿ ಅವರಿಗಿದ್ದು, ಅವರು ಬೇರೊಂದು ಕೆಲಸ ಹುಡುಕಿ, ದುಡಿಯಬೇಕಾಗುತ್ತದೆ. ಹಾಗಾಗಿ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗುವುದಿಲ್ಲ. ಆದ್ರೆ ವಿದುರನ ಪ್ರಕಾರ, ನೀವು ನಮಗಿಷ್ಟವಾದ ಕೆಲಸವನ್ನೇ ಮಾಡಬೇಕು. ಮತ್ತು ಅದರಲ್ಲಿ ಯಶಸ್ಸು ಕಾಣಲು, ಎಷ್ಟು ಕಷ್ಟ ಪಡಬೇಕೋ, ಅಷ್ಟು ಕಷ್ಟ ಪಡಲೇಬೇಕು.

ಆರನೇಯದ್ದು ಜೀವನದಲ್ಲಿ ಯಾವುದರ ಬಗ್ಗೆ ಹೆದರಿಕೆ ಇಲ್ಲದಿರುವುದು. ನಾವು ಜೀವನದಲ್ಲಿ ಯಾರನ್ನೂ ಹೆದರಬಾರದು ಅಂತಾರೆ ವಿದುರ. ನಾವು ಸುಳ್ಳು ಹೇಳದೇ, ತಪ್ಪು ಕೆಲಸ ಮಾಡದೇ, ಸತ್ಯದ ದಾರಿಯಲ್ಲಿ ನಡೆದರೆ, ನಾವು ಯಾರಿಗೂ ಹೆದರುವ ಅಗತ್ಯವಿರುವುದಿಲ್ಲ. ಹಾಗಾಗಿ ಎಂದಿಗೂ ಯಾರಿಗೂ ಹೆದರದಂಥ ಕೆಲಸ ಮಾಡಿ ಅಂತಾರೆ ವಿದುರ.

- Advertisement -

Latest Posts

Don't Miss