Sunday, September 8, 2024

Latest Posts

ಮನುಷ್ಯನಲ್ಲಿ ಈ 8 ಗುಣಗಳಿರಬೇಕಂತೆ… ಆಗಲೇ ಮನುಷ್ಯ ಪರಿಪೂರ್ಣನಂತೆ- ಭಾಗ 1

- Advertisement -

ಪ್ರೀತಿ, ಕಾಳಜಿ, ದ್ವೇಷ, ಅಸೂಯೆ, ಸಿಟ್ಟು, ಇತ್ಯಾದಿ ಗುಣಗಳನ್ನ ಮೈತುಂಬಿಕೊಂಡಿರುವನೇ ಮನುಷ್ಯ. ಓರ್ವ ಮನುಷ್ಯ ಅಂದ ಮೇಲೆ ಅವನಲ್ಲಿ ಇಂಥ ಹತ್ತಾರು ಗುಣಗಳಿರುತ್ತದೆ. ಅವನಲ್ಲಿ ಇಂಥ ಗುಣಗಳೇ ಇಲ್ಲವಾದಲ್ಲಿ ಅವನು ಪರಿಪೂರ್ಣ ಮನುಷ್ಯನಾಗಲು ಸಾಧ್ಯವೇ ಇಲ್ಲ. ಯಾಕಂದ್ರೆ ಓರ್ವ ಮನುಷ್ಯನಲ್ಲಿ ಬರೀ ಕರುಣೆ ಕಾಳಜಿಯ ಗುಣಗಳು, ಬರೀ ಸಿಟ್ಟು ದ್ವೇಷಗಳೇ ತುಂಬಿರಲು ಸಾಧ್ಯವಿಲ್ಲ. ಅವನು ಎಲ್ಲ ಗುಣಗಳ ಮಿಶ್ರಣವಾಗಿರಬೇಕು. ಹಾಗಾದ್ರೆ ಮನುಷ್ಯನಲ್ಲಿ ಇರಲೇಬೇಕಾದ 8 ಗುಣಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಮೊದಲನೇಯ ಗುಣ ಬುದ್ಧಿಮತ್ತೆ. ಅಂದ್ರೆ ಕಾಮನ್ ಸೆನ್ಸ್. ವಿದುರನ ಪ್ರಕಾರ ಯಾವ ಮನುಷ್ಯನಲ್ಲಿ ಪ್ರಪಂಚದಲ್ಲಿರುವ ಎಲ್ಲ ವಿಷಯಗಳ ಬಗ್ಗೆ ಕಾಮನ್ ಸೆನ್ಸ್ ಇರುತ್ತದೆಯೋ, ಅವನು ವಿಶ್ವದ ಅತ್ಯಂತ ಬಲಿಷ್ಠ ವ್ಯಕ್ತಿ ಎಂದರ್ಥ. ಯಾಕಂದ್ರೆ, ಕಾಮನ್ ಸೆನ್ಸ್ ಇದ್ದವನು, ಸೋಲನ್ನು ಕಾಣಲು ಸಾಧ್ಯವೇ ಇಲ್ಲ. ಅವನು ಬುದ್ಧಿವಂತನಾಗಿರುತ್ತಾನೆ. ಅಂಥವರಿಗೆ ಯಶಸ್ಸು ಸಿಗೋದು ಖಚಿತ.

ಎರಡನೇಯ ಗುಣ ಸಂಭಾವಿತರಾಗಿರುವುದು. ಬರೀ ನೋಡಲಷ್ಟೇ ಅಲ್ಲ, ಗುಣದಲ್ಲೂ ಯಾರು ಸಂಭಾವಿತರಾಗಿರ್ತಾರೋ, ಅವರು ಎಂದಿಗೂ ಎಲ್ಲರ ಅಚ್ಚುಮೆಚ್ಚಿನ ಮತ್ತು ನೆಮ್ಮದಿಯ ಮನುಷ್ಯರಾಗಿರ್ತಾರೆ. ಯಾಕಂದ್ರೆ ಸಂಭಾವಿತರಾದವರು ಯಾರ ಸುದ್ದಿಗು ಹೋಗುವುದಿಲ್ಲ. ತಾವಾಯಿತು ತಮ್ಮ ಕೆಲಸವಾಯಿತು ಎಂದು ಇರುತ್ತಾರೆ. ಹಾಗಾಗಿ ಇಂಥವರು ಎಲ್ಲರಿಗೂ ಇಷ್ಟವಾಗುತ್ತಾರೆ.

ಮೂರನೇಯ ಗುಣ ಇಂದ್ರಿಯ ನಿಗ್ರಹ. ನಮ್ಮ ಇಂದ್ರಿಯಗಳು ನಮ್ಮ ನಿಗ್ರಹದಲ್ಲಿರಬೇಕೇ ಹೊರತು, ನಾವು ಅವುಗಳ ನಿಗ್ರಹದಲ್ಲಲ್ಲ. ಇಂದ್ರಿಯಗಳು ನಮ್ಮ ನಿಗ್ರಹದಲ್ಲಿದ್ದಷ್ಟು, ನಾವುಎಲ್ಲ ರೀತಿಯಿಂದಲೂ ಸೇಫ್ ಆಗಿರುತ್ತೇವೆ. ಉದಾಹರಣೆಗೆ ಓರ್ವ ದೊಡ್ಡ ವ್ಯಕ್ತಿ ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಿರುತ್ತಾನೆ. ಆದ್ರೆ ಅವನು ಇಂದ್ರಿಯ ನಿಗ್ರಹವನ್ನು ಕಳೆದುಕೊಂಡು, ವೇಶ್ಯೆಯೊಂದಿಗೆ ಸಂಪರ್ಕ ಬೆಳೆಸಿ, ಸಮಾಜದಲ್ಲಿ ತಲೆ ತಗ್ಗಿಸುವ ಕೆಲಸ ಮಾಡುತ್ತಾನೆ. ಆದ್ದರಿಂದಲೇ, ಇಂದ್ರಿಯ ನಿಗ್ರಹದಲ್ಲಿರಬೇಕು ಎನ್ನುತ್ತಾರೆ ವಿದುರ.

ನಾಲ್ಕನೇಯ ಗುಣ ಶಾಸ್ತ್ರಜ್ಞಾನ. ನಾವು ಹುಟ್ಟಿದಾಗಿನಿಂದ ಸಾಯುವವರೆಗೂ ಜೀವನದಲ್ಲಿ ಕಲಿಯುವುದು ಸುಮಾರಷ್ಟಿರುತ್ತದೆ. ನನಗೆ ಎಲ್ಲಾ ಗೊತ್ತು ಎಂದು ಮೆರೆಯುವವನಿಗೆ ಯಶಸ್ಸು ಎಂದಿಗೂ ಸಿಗುವುದಿಲ್ಲ. ಹಾಗಾಗಿ ಎಲ್ಲ ವಿಷಯಗಳ ಬಗ್ಗೆ ತಿಳಿದುಕೊಳ್ಳಲು, ಆಸಕ್ತಿ ಇದ್ದವನು. ಆ ಬಗ್ಗೆ ತಿಳಿದುಕೊಳ್ಳುವವನು . ಅಂಥವನಿಗೆ ಶಾಸ್ತ್ರ ಜ್ಞಾನ ಇರುತ್ತದೆ.

ಇನ್ನುಳಿದ ಗುಣಗಳ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ..

- Advertisement -

Latest Posts

Don't Miss