Recipe: ಒಡೆದ ಹಾಲಿನಿಂದ ರಸಮಲಾಯಿ ತಯಾರಿಸಬಹುದು ಎಂಬುದು ಎಲ್ಲರಿಗೂ ಗೊತ್ತು. ಆದರೆ, ಬ್ರೆಡ್‌ನಿಂದಲೂ ರಸಮಲಾಯಿಯನ್ನು ಈಸಿಯಾಗಿ ತಯಾರಿಸಬಹುದು. ಅದು ಹೇಗೆ ಅಂತಾ ತಿಳಿಯೋಣ ಬನ್ನಿ..
1 ಲೀಟರ್ ಗಟ್ಟಿ ಹಾಲನ್ನು ಕಾಯಿಸಿ, ಅದು ಅರ್ಧದಷ್ಟಾಗುವವರೆಗೂ ಚೆನ್ನಾಗಿ ಕುದಿಸಬೇಕು. ಈಗ ಇದಕ್ಕೆ 4ಟೇಬಲ್ ಸ್ಪೂನ್ ಸಕ್ಕರೆ, ಸಣ್ಣಗೆ ಕತ್ತರಿಸಿದ, ಹತ್ತರಿಂದ ಹನ್ನೆರಡು ಗೋಡಂಬಿ, ಬಾದಾಮಿ, ಪಿಸ್ತಾ, ಚಿಟಿಕೆ ಏಲಕ್ಕಿ ಪುಡಿ, ಚಿಟಿಕೆ ಕೇಸರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. 5 ನಿಮಿಷ ಕೈಯಾಡಿಸಬೇಕು. ಬಳಿಕ ಗ್ಯಾಸ್ ಆಫ್ ಮಾಡಿ, ಇದನ್ನು ತಣಿಯಲು ಬಿಡಿ.
ಈಗ ಬ್ರೆಡ್ ತೆಗೆದುಕೊಂಡು ಅದನ್ನು ನಿಮಗೆ ಯಾವ ಶೇಪ್ ಬೇಕೋ, ಆ ಶೇಪ್‌ನಲ್ಲಿ ತುಂಡರಿಸಿ. ಈಗ ಒಂದು ಬೌಲ್‌ಗೆ ನೀವು ಆಗಲೇ ರೆಡಿ ಮಾಡಿಕೊಂಡ ರಸಮಲಾಯಿ ಮಿಶ್ರಣ ಹಾಕಿ, ಅದರಲ್ಲಿ ಈ ಬ್ರೆಡ್ ಸ್ಲೈಸ್ ಅದ್ದಿಡಿ. ಅರ್ಧ ಗಂಟೆ ಬಿಟ್ಟು, ರೆಫ್ರಿಜರೇಟರ್‌ನಲ್ಲಿ ಇಡಿ. 1 ಗಂಟೆ ಬಳಿಕ ಬ್ರೆಡ್ ರಸಮಲಾಯಿ ರೆಡಿಯಾಗುತ್ತದೆ.
ಹೆಚ್ಚು ಹೊತ್ತು ಫೋನ್ ಬಳಸುತ್ತಿದ್ದಲ್ಲಿ, ನೀವು ಈ ಗಂಭೀರ ಸಮಸ್ಯೆಗೆ ತುತ್ತಾಗುತ್ತೀರಿ ಹುಷಾರ್..
ಪಾನೀಪುರಿ ಸ್ಟಾಲ್ ಇಡಲು ಇಷ್ಟಪಡುವವರಿಗೆ ಇಲ್ಲಿದೆ ನೋಡಿ ಬ್ಯುಸಿನೆಸ್ ಟಿಪ್ಸ್..
ಚಿಪ್ಸ್ ಬ್ಯುಸಿನೆಸ್ ಮಾಡಬೇಕೆಂದಿದ್ದೀರಾ..? ಹಾಗಾದ್ರೆ ಇಲ್ಲಿದೆ ನೋಡಿ ಟಿಪ್ಸ್..

