ಹಿಂದೂ ಧರ್ಮದಲ್ಲಿರುವ ಹಲವು ಪದ್ಧತಿಗಳು, ಹೆಚ್ಚಾಗಿ ಮದುವೆಯಾದ ಮಹಿಳೆಯರಿಗೆ ಅನ್ವಯಿಸುತ್ತದೆ. ವಿವಾಹವಾದ ಬಳಿಕ, ಕಾಲುಂಗುರ, ಬೊಟ್ಟು, ಕರಿಮಣಿ ಸೇರಿ ಹೀಗೆ ಸುಮಾರು ಪದ್ಧತಿಗಳು ವಿವಾಹಿತೆ ಅನುಸರಿಸಬೇಕಾಗುತ್ತದೆ. ಇಂದು ನಾವು ಪತಿ ಹೊರಗೆ ಹೋಗುವಾಗ ಪತ್ನಿಯಾದವಳು ಯಾವ ಕೆಲಸಗಳನ್ನು ಮಾಡಬಾರದು ಅನ್ನೋ ಬಗ್ಗೆ ವಿವರಣೆ ನೀಡಲಿದ್ದೇವೆ.
ಪತಿ ಕೆಲಸಕ್ಕೆ ಹೋದ ತಕ್ಷಣ, ಪಟ ಪಟ ಅಂತ ಕೆಲಸ ಮಾಡಿ ಮುಗಿಸೋಣವೆಂದು ನೀವು ಕಸ ಗುಡಿಸಲು ಪ್ರಾರಂಭಿಸಬೇಡಿ. ಯಾಕಂದ್ರೆ ಮನೆಯಿಂದ ಪತಿಯಷ್ಟೇ ಅಲ್ಲದೇ, ಯಾವ ಸದಸ್ಯ ಹೋದ ಮೇಲೂ, ನೀವು ಮನೆಯಲ್‌ಲಿ, ಅಂಗಳದಲ್ಲಿ ಕಸ ಗುಡಿಸಬಾರದು. ಇದರಿಂದ ಹೊರ ಹೋದವರಿಗೆ ಲಾಭವಾಗುವುದು ತಪ್ಪುತ್ತದೆ. ಆ ಬದಲು ಅವರು ಹೊರಗೆ ಹೋಗುವ ಮೊದಲೇ ಮನೆಯನ್ನು ಕ್ಲೀನ್ ಮಾಡಿ. ಇಲ್ಲವಾದಲ್ಲಿ ಅವರು ಹೊರಗೆ ಹೋಗಿ, ಕೆಲ ಹೊತ್ತಿನ ಬಳಿಕ ಕಸ ಗುಡಿಸಿದರೆ ಒಳ್ಳೆಯದು.
ಇಂದಿನ ಕಾಲದ ಕೆಲವು ಹೆಣ್ಣು ಮಕ್ಕಳು ಗಂಡ ಎದುರಿಗೆ ಇರುವ ಹೊತ್ತಷ್ಟೇ ಟ್ರೆಡಿಷನಲ್ ಆಗಿ ರೆಡಿಯಾಗಿ, ಸಿಂಧೂರ, ಬಳೆ, ತಾಳಿ ಎಲ್ಲ ಧರಿಸುತ್ತಾರೆ. ಗಂಡ ಕೆಲಸಕ್ಕೆ ಹೋದ ಮೇಲೆ ಮಾಡರ್ನ್ ಆಗಿ ರೆಡಿಯಾಗುತ್ತಾರೆ. ಆದ್ರೆ ಹಿಂದೂ ಪದ್ಧತಿ ಪ್ರಕಾರ, ತಾಳಿ, ಬಳೆ, ಸಿಂಧೂರವನ್ನು ಅಳಸಿ ಇರುವುದು ತಪ್ಪು ಎನ್ನಲಾಗಿದೆ. ಇದರಿಂದ ನಿಮ್ಮ ಪತಿಯ ಆಯುಷ್ಯ ಕಡಿಮೆಯಾಗುತ್ತದೆ ಅನ್ನೋ ನಂಬಿಕೆ ಇದೆ.
ಇನ್ನು ಕೊನೆಯದಾಗಿ, ಸಿಂಧೂರ ಮತ್ತು ನಿಮ್ಮ ಬಳೆ ಮತ್ತು ತಾಳಿ ಕೆಳಗೆ ಬೀಳದಂತೆ ನೋಡಿಕೊಳ್ಳಿ. ಅದರಲ್ಲೂ ಮಂಗಳವಾರ ಮತ್ತು ಶುಕ್ರವಾರ, ಸಿಂಧೂರ ಅಳಸಿ ಹೋಗುವುದು. ತಾಳಿ ಕಿತ್ತುವುದು ಅಥವಾ ಬಳೆ ಒಡೆಯುವುದು ಅಪಶಕುನ ಎನ್ನಲಾಗಿದೆ. ಹಾಗಾಗಿ ಈ ವಿಷಯದಲ್ಲಿ ಹುಷಾರಾಗಿರಿ.