Spiritual: ಹೆಣ್ಣಿನ ಜೀವನ ಮದುವೆಯಾಗುವ ತನಕ ಒಂದು ರೀತಿ ಇದ್ದರೆ, ಮದುವೆಯಾದ ಬಳಿಕ ಇನ್ನೊಂದು ರೀತಿ. ಮದುವೆಗೂ ಮುನ್ನ ಅಪ್ಪ ಅಮ್ಮ ಸಲುಗೆ ಕೊಟ್ಟರುತ್ತಾರೆ. ಹಾಗಾಗಿ ಬೇಕಾದ ಹಾಗೆ ಇರಬಹುದು. ಆದರೆ ಮದುವೆಯಾದ ಬಳಿಕ, ಎಲ್ಲ ಕೆಲಸಕ್ಕೂ ಗಂಡ, ಅತ್ತೆ-ಮಾವನ ಅನುಮತಿ ಬೇಕೆ ಬೇಕು. ಅದರಲ್ಲೂ ಚಾಣಕ್ಯರ ಪ್ರಕಾರ, ಪತ್ನಿಯಾದವರು ಕೆಲ ಸ್ಥಳಗಳಿಗೆ ಹೋಗುವಾಗ, ಪತಿಯ ಅನುಮತಿ ಇಲ್ಲದೇ, ಹೋಗಲೇಬಾರದಂತೆ. ಹಾಗಾದ್ರೆ ಎಲ್ಲೆಲ್ಲಿ ಪತ್ನಿ, ಪತಿಯ ಅನುಮತಿ ಇಲ್ಲದೇ ಹೋಗಬಾರದು ಅಂತಾ ತಿಳಿಯೋಣ ಬನ್ನಿ..
ತವರುಮನೆ: ಹೆಣ್ಣಿಗೆ ತನ್ನ ತವರು ಮನೆಗೆ ಹೋಗುವುದೆಂದರೆ ಏನೋ ಖುಷಿ. ಅಲ್ಲಿ ಹೋಗಿ, ಸ್ವಲ್ಪ ದಿನ, ನೆಮ್ಮದಿಯಿಂದ ಇರಬಹುದು. ಆದರೆ ತವರು ಮನೆಗೆ ಹೋಗುವುದಿದ್ದರೂ, ಪತ್ನಿಯಾದವಳು, ಪತಿಯ ಒಪ್ಪಿಗೆ ಮೇರೆಗೆ ಹೋಗಬೇಕಾಗುತ್ತದೆ. ಪತಿಯ ಒಪ್ಪಿಗೆ ಪಡೆಯದೇ, ತವರು ಮನೆಗೆ ಹೋಗುವುದು, ಪತಿಗೆ ಮತ್ತು ತನ್ನ ಅಪ್ಪ ಅಮ್ಮನಿಗೆ ಅವಳು ಅವಮಾನ ಮಾಡಿದಂತಾಗುತ್ತದೆ.
ಕುಡುಕರಿರುವ ದಾರಿ: ಅಂದರೆ ಕುಡುಕರು ಓಡಾಡುವ ದಾರಿ, ಮದ್ಯದ ಅಂಗಡಿ ಇರುವ ದಾರಿಗಳಲ್ಲಿ ಒಂಟಿ ಹೆಣ್ಣು ನಡೆದಾಡಬಾರದು. ಈ ಮಾತಿನ ಅರ್ಥವೇನೆಂದರೆ, ಸಂಜೆ ಬಳಿಕ ಅಥವಾ ರಾತ್ರಿ ಹೊತ್ತು, ಎಲ್ಲಾದರೂ ಹೋಗುವುದಿದ್ದರೆ, ಹೆಣ್ಣಾದವಳು ಪತಿಯೊಂದಿಗೆ ಅಥವಾ ಪತಿಯ ಅನುಮತಿ ಪಡೆದು ಹೊರಹೋಗಬೇಕು ಎನ್ನುತ್ತಾರೆ ಚಾಣಕ್ಯರು. ಏಕೆಂದರೆ, ಕುಡುಕರ ಹಾವಳಿ ಹೆಚ್ಚಾಗುವುದೇ, ಸಂಜೆ ಬಳಿಕ, ರಾತ್ರಿ ಹೊತ್ತು.
ರಾಜ ಅಥವಾ ಅಧಿಕಾರಿಯ ಮನೆ: ಹಿಂದಿನ ಕಾಲದಲ್ಲಿ ರಾಜನ ಅರಮನೆ. ಇಂದಿನ ಕಾಲದಲ್ಲಿ ಅಧಿಕಾರಿ ಅಥವಾ ರಾಜಕಾರಣಿಯ ಮನೆಗೆ ಒಂಟಿ ಹೆಣ್ಣು ಹೋಗಬಾರದು ಎಂದು ಚಾಣಕ್ಯರು ಹೇಳುತ್ತಾರೆ. ಏಕೆಂದರೆ, ಅದು ಹಣವಂತರ ಮನೆಯಾಗಿರುತ್ತದೆ. ಅಲ್ಲಿ ಹಲವು ಪುರುಷರ ಗುಂಪಿರುತ್ತದೆ. ಅಂಥ ಸ್ಥಳಕ್ಕೆ ಪತ್ನಿಯಾದವಳು ಒಬ್ಬಂಟಿಯಾಗಿ ಹೋದರೆ, ಹೆಣ್ಣಿನ ಮಾನಕ್ಕೆ ಹಾನಿಯಾಗಬಹುದು. ಈ ಕಾರಣಕ್ಕೆ ಪತಿಯನ್ನು ಬಿಟ್ಟು ಅಥವಾ ಪತಿಯ ಒಪ್ಪಿಗೆ ಇಲ್ಲದೇ, ಪತ್ನಿ ರಾಜನ ಮನೆಗೆ ಹೋಗಬಾರದು ಅಂತಾರೆ ಚಾಣಕ್ಯರು.
ಇಂಥ ಊಟವನ್ನು ಎಂದಿಗೂ ತಿನ್ನಬೇಡಿ: ಇದು ನಿಮ್ಮ ಅದೃಷ್ಟವನ್ನು ಕಸಿಯುತ್ತದೆ..