Spiritual: ಯಾವುದಾದರೂ ಹೆಣ್ಣು ತನ್ನ ಪತಿಯನ್ನ ಓರ್ವ ವೇಶ್ಯೆಗೆ ಅರ್ಪಿಸುವುದನ್ನು ನೀವು ಎಲ್ಲಾದರೂ ಕೇಳಿದ್ದೀರಾ..? ಅಥವಾ ನೋಡಿದ್ದೀರಾ..? ಖಂಡಿತ ಸಾಧ್ಯವಿಲ್ಲ. ಏಕೆಂದರೆ, ಪ್ರತೀ ಹೆಣ್ಣಿಗೂ ತನ್ನ ಪತಿ ಎಂದರೆ, ತನ್ನದಷ್ಟೇ ಸ್ವತ್ತು ಅನ್ನೋ ಭಾವನೆ ಇರುತ್ತದೆ. ಆಕೆ ಅವನನ್ನು ಬೇರೆ ಹೆಣ್ಣಿನೊಂದಿಗೆ ನೋಡಲು ಇಚ್ಛಿಸುವುದಿಲ್ಲ. ಆದರೆ ನಾವಿಂದು ಹೇಳಲು ಹೊರಟಿರುವ ಕಥೆಯಲ್ಲಿ ಪತಿವೃತೆಯೊಬ್ಬಳು ಓರ್ವ ವೇಶ್ಯೆಯ ಬಳಿ ಹೋಗಿ, ತನ್ನ ಪತಿಯ ಜೊತೆ ಮಲಗುವಂತೆ ಕೇಳುತ್ತಾಳೆ. ಹಾಗಾದರೆ ಮುಂದೇನಾಗುತ್ತದೆ ಅನ್ನೋ ಬಗ್ಗೆ ಕಥೆ ಓದಿ..
ಒಂದೂರಲ್ಲಿ ಕೌಶಿಕನೆಂಬ ಬ್ರಾಹ್ಮಣನಿಂದ ಅವನಿಗೆ ವಿವಾಹವಾಗಿತ್ತು. ಸತಿ-ಪತಿ ಇಬ್ಬರೂ ಅನ್ಯೋನ್ಯವಾಗಿದ್ದರು. ಪತ್ನಿಗೆ ಧಾರ್ಮಿಕ ಕಾರ್ಯಗಳಲ್ಲಿ, ಮನೆಕೆಲಸಗಳಲ್ಲಿ ಆಸಕ್ತಿ ಇತ್ತು. ಆಕೆ ಬುದ್ಧಿವಂತಿಕೆಯಿಂದ ಮನೆಗೆಲಸ ನಿಭಾಯಿಸುತ್ತಿದ್ದಳು.
ಆದರೆ ಮದುವೆಯಾಗಿ ಆರೇ ತಿಂಗಳಿಗೆ ಆ ವ್ಯಕ್ತಿಗೆ ರೋಗ ಬರುತ್ತದೆ. ಅವನ ಮೈಮೇಲೆ ಗಾಯಗಳಾಗುತ್ತದೆ. ಅದರಿಂದ ವಾಸನೆ ಬರುತ್ತದೆ. ಹಾಗಂತ ಅವನ ಪತ್ನಿ ಅವನನ್ನು ಬಿಟ್ಟು ಹೋಗುವುದಿಲ್ಲ. ಬದಲಾಗಿ, ಅವನ ಸೇವೆ ಮಾಡುತ್ತಾಳೆ. ಅವನಿಗೆ ಸ್ನಾನ ಮಾಡಿಸುವುದು, ಅವನ ಗಾಯಕ್ಕೆ ಔಷಧಿ ಹಚ್ಚುವುದು. ಮನೆಗೆಲಸವೆಲ್ಲ ಮಾಡುತ್ತಾಳೆ.
ಹೀಗೆ ಒಂದು ದಿನ ಆ ಬ್ರಾಹ್ಮಣ ಮನೆಯ ಮುಂದೆ ಕುಳಿತಿರುತ್ತಾನೆ. ಮತ್ತು ಅವನ ಪತ್ನಿ ಕಸ ಗುಡಿಸುತ್ತಿರುತ್ತಾಳೆ. ಆಗ ಅವನ ಮನೆ ಎದುರಿನಿಂದ ಓರ್ವ ವೇಶ್ಯೆ ಹೋಗುತ್ತಿರುತ್ತಾಳೆ. ಆಕೆ ಸುಂದರವಾಗಿದ್ದ ಕಾರಣ, ಆ ಬ್ರಾಹ್ಮಣನಿಗೆ ಆಕೆಯ ಮೇಲೆ ಮನಸ್ಸಾಗುತ್ತದೆ. ಅವನು ಅವಳದ್ದೇ ಯೋಚನೆಯಲ್ಲಿ ಇರುತ್ತಾನೆ. ಮಲಗಿರುವಾಗ ದುಃಖಿತನಾಗುತ್ತಾನೆ. ಅವನ ಪತ್ನಿ ಅವನಲ್ಲಿ ಕೇಳುತ್ತಾಳೆ. ಏನಾಯ್ತು..? ಯಾಕೆ ನೀವು ಇಷ್ಟು ಬೇಸರದಲ್ಲಿದ್ದೀರಿ..? ಗಾಯದ ನೋವು ಹೆಚ್ಚಾಗಿದೆಯಾ..? ಔಷಧಿ ಹಚ್ಚಲೇ ಎಂದು ಕೇಳುತ್ತಾಳೆ.
ಅದಕ್ಕೆ ಆತ, ಇಲ್ಲ ಹಾಗೇನಿಲ್ಲಾ. ನಾನು ಆಗ ನಮ್ಮ ಮನೆ ಎದುರಿನಿಂದ ಹೋದ ವೇಶ್ಯೆಯ ಬಗ್ಗೆ ಯೋಚಿಸುತ್ತಿದ್ದೇನೆ. ಆಕೆ ನನಗೆ ಸಿಗುವುದಿಲ್ಲವಲ್ಲ ಎಂದು ದುಃಖಿಸುತ್ತಿದ್ದೆ ಎನ್ನುತ್ತಾನೆ. ಅದಕ್ಕೆ ಕೋಪಗೊಳ್ಳದ ಪತಿವೃತೆ, ಮರುದಿನ ಆ ವೇಶ್ಯೆಯ ಮನೆಗೆ ಹೋಗಿ, ಆಕೆಯನ್ನು ತನ್ನ ಮನೆಗೆ ಬರುವಂತೆ. ತನ್ನ ಪತಿಯ ಜೊತೆ ಇರುವಂತೆ ಕೇಳಿಕೊಳ್ಳುತ್ತಾಳೆ. ಆದರೆ ಆ ವೇಶ್ಯೆಗೆ ಆಶ್ಚರ್ಯವಾಗುತ್ತದೆ. ಇವಳೆಂಥಾ ಪತಿವೃತೆ, ಗಂಡನನ್ನು ಇಷ್ಟು ಪ್ರೀತಿಸುವುದೇ. ಓರ್ವ ವೇಶ್ಯೆಯ ಜೊತೆ ಮಲಗುವಷ್ಟು ಎಂದು ಯೋಚಿಸುತ್ತಾಳೆ. ಮತ್ತು ನಾನು ನಿನ್ನ ಮನೆಗೆ ಬರುವುದಿಲ್ಲ. ನಿನ್ನ ಪತಿಯನ್ನು ನೀನೇ ಇಲ್ಲಿ ಕರೆತಾ ಎನ್ನುತ್ತಾಳೆ. ರಾತ್ರಿ ಯಾರಿಗೂ ಕಾಣದಂತೆ ಪತಿನ-ಪತಿಯನ್ನು ವೇಶ್ಯೆಯ ಬಳಿ ಕರೆತರುತ್ತಾಳೆ. ಮುಂದೇನಾಗುತ್ತದೆ ಅನ್ನೋ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ.
ತುಳಸಿದಾಸರ ಪ್ರಕಾರ, ಈ 9 ಜನರೊಂದಿಗೆ ಎಂದಿಗೂ ಶತ್ರುತ್ವ ಕಟ್ಟಿಕೊಳ್ಳಬಾರದಂತೆ.. ಭಾಗ 1
ತುಳಸಿದಾಸರ ಪ್ರಕಾರ, ಈ 9 ಜನರೊಂದಿಗೆ ಎಂದಿಗೂ ಶತ್ರುತ್ವ ಕಟ್ಟಿಕೊಳ್ಳಬಾರದಂತೆ.. ಭಾಗ 2


