Spiritual: ಪತಿವೃತೆ ಪತಿಯನ್ನು ಕರೆದುಕೊಂಡು, ವೇಶ್ಯೆಯ ಬಳಿ ಹೋಗುವಾಗ, ಕಾಡಿನಲ್ಲಿ ಓರ್ವ ಋಷಿಯ ಮೇಲೆ ಕಳ್ಳತನದ ಆರೋಪ ಮಾಡಿ, ನೇಣಿಗೇರಿಸಲಾಗಿದ್ದು. ಆದರೆ ಅವರಿನ್ನು ಸಾವನ್ನಪ್ಪಿರಲಿಲ್ಲ. ಅವರ ಕುತ್ತಿಗೆಗೆ ಹಗ್ಗ ಕಟ್ಟಿದ ಕಾರಣ, ಅವರಿಗೆ ನೋವಾಗುತ್ತಿತ್ತು. ಈ ಬ್ರಾಹ್ಮಣ ಮತ್ತು ಅವನ ಪತ್ನಿ ಅದೇ ದಾರಿಯಿಂದ ಹೋಗುವಾಗ, ಬ್ರಾಹ್ಮಣ ಆ ಹಗ್ಗವನ್ನು ತುಳಿಯುತ್ತಾನೆ. ಆಗ ಋಷಿಯ ನೋವು ಇನ್ನಷ್ಟು ಹೆಚ್ಚಾಗುತ್ತದೆ.
ಆಗ ಅವರು ಹೀಗೆ ಶಾಪ ನೀಡುತ್ತಾರೆ. ಈ ಹಗ್ಗವನ್ನು ತುಳಿದು, ನನ್ನ ನೋವು ಹೆಚ್ಚು ಮಾಡಿದವರು ಸೂರ್ಯೋದಯದ ಒಳಗೆ ಸತ್ತುಹೋಗಲಿ ಎಂದು ಶಾಪ ನೀಡುತ್ತಾರೆ. ಆದರೆ ಆ ಬ್ರಾಹ್ಮಣನ ಪತ್ನಿ, ಸ್ವಾಮೀ ನೀವೇನೂ ಯೋಚನೆ ಮಾಡಬೇಡಿ. ನಾನು ಪತಿವೃತೆಯೇ ಆದಲ್ಲಿ, ನಿಮ್ಮನ್ನು ಬಿಟ್ಟು ಬೇರೆ ಪುರುಷನನ್ನು ಕಣ್ಣೆತ್ತಿ ನೋಡದಿದ್ದಲ್ಲಿ, ನಾನು ಮನಸ್ಸು ಮಾಡುವವರೆಗೂ ಸೂರ್ಯೋದಯವೇ ಆಗುವುದಿಲ್ಲ. ನಿಮ್ಮ ಮರಣವೂ ಆಗುವುದಿಲ್ಲವೆನ್ನುತ್ತಾಳೆ.
ಈಕೆಯ ಮಾತನ್ನು ಕೇಳಿ ದೇವತೆಗಳು ದಂಗಾಗುತ್ತಾರೆ. ಈಕೆ ಪತಿವೃತಾ ಶಿರೋಮಣಿ. ಪರ ಪುರುಷನನ್ನು ಕಣ್ಣೆತ್ತಿ ನೋಡಿದವಳಲ್ಲ. ಎಂಥ ಪರಿಸ್ಥಿತಿಯಲ್ಲೂ ಗಂಡನ ಕೈ ಬಿಡಲಿಲ್ಲ. ಇಂಥವಳು ಈ ರೀತಿ ಹೇಳಿದರೆ ಲೋಕದ ಪರಿಸ್ಥಿತಿ ಏನು..? ಎಂಬ ಯೋಚನೆ ದೇವತೆಗಳಿಗಾಯಿತು. ಆಗ ದೇವತೆಗಳೆಲ್ಲ ಈ ಬ್ರಾಹ್ಮಣ ದಂಪತಿಯ ಮುಂದೆ ಪ್ರತ್ಯಕ್ಷರಾದರು. ಮತ್ತು ತಾನು ಈಗ ಹೇಳಿದ ಮಾತನ್ನು ಹಿಂಪಡೆಯಲು ಮನವಿ ಮಾಡಿದರು.
ಆದರೆ ಅದಕ್ಕೆ ಆ ಮಹಿಳೆ ಒಪ್ಪಲಿಲ್ಲ. ನಾನು ಕೊಟ್ಟ ಮಾತನ್ನು ವಾಪಸ್ ಪಡೆದರೆ, ನನ್ನ ಪತಿಯ ಜೀವ ಹೋಗುತ್ತದೆ. ಹಾಗಾಗಿ ನಾನು ನನ್ನ ಮಾತನ್ನು ಹಿಂಪಡೆಯುವುದಿಲ್ಲ ಎಂದು ಹಠ ಮಾಡುತ್ತಾಳೆ. ಆಗ ದೇವತೆಗಳೆಲ್ಲ ಸೇರಿ, ಪತಿವೃತೆ ಅನುಸೂಯಳನ್ನು ಕರೆಸುತ್ತಾರೆ. ನಾನು ನಿನ್ನ ಪತಿಯ ಆರೋಗ್ಯ ಸರಿ ಮಾಡುವುದಲ್ಲದೇ, ನಿನ್ನ ಪತಿಯ ಆಯಸ್ಸನ್ನೂ ಹೆಚ್ಚು ಮಾಡುತ್ತೇನೆ. ಆದರೆ ಅದಕ್ಕೂ ಮುನ್ನ ನೀ ಹೇಳಿದ ಮಾತನ್ನು ಹಿಂಪಡೆದುಕೋ ಎಂದು ಅನುಸೂಯಾ ಹೇಳುತ್ತಾಳೆ.
ಆಕೆಯ ಮಾತನ್ನು ಕೇಳಿ, ಈ ಪತಿವೃತೆ ತನ್ನ ಮಾತನ್ನು ವಾಪಸ್ ತೆಗೆದುಕೊಳ್ಳುತ್ತಾಳೆ. ಮತ್ತು ಸೂರ್ಯೋದಯವಾಗಿ ಬೆಳಕಾಗುತ್ತದೆ. ಪತಿಯ ಆರೋಗ್ಯ ಮತ್ತು ಆಯಸ್ಸು ಎರಡೂ ಹೆಚ್ಚುತ್ತದೆ. ಪತಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಅವನು ಪತ್ನಿಯನ್ನು ಕರೆದುಕೊಂಡು ಮನೆಗೆ ಹೋಗುತ್ತಾನೆ.
ತುಳಸಿದಾಸರ ಪ್ರಕಾರ, ಈ 9 ಜನರೊಂದಿಗೆ ಎಂದಿಗೂ ಶತ್ರುತ್ವ ಕಟ್ಟಿಕೊಳ್ಳಬಾರದಂತೆ.. ಭಾಗ 1
ತುಳಸಿದಾಸರ ಪ್ರಕಾರ, ಈ 9 ಜನರೊಂದಿಗೆ ಎಂದಿಗೂ ಶತ್ರುತ್ವ ಕಟ್ಟಿಕೊಳ್ಳಬಾರದಂತೆ.. ಭಾಗ 2