Friday, September 20, 2024

Latest Posts

ಆಯುರ್ವೇದದ ಈ ಟಿಪ್ಸ್ ಫಾಲೋ ಮಾಡಿದ್ರೆ ದೇಹದ ಬೊಜ್ಜು ಕಡಿಮೆಯಾಗತ್ತೆ..

- Advertisement -

ಬೊಜ್ಜಿನ ಸಮಸ್ಯೆ ಅನ್ನೋದು ಕಾಮನ್ ಆಗಿ ಬಿಟ್ಟಿದೆ. ಆದ್ರೆ ಇದೇ ಬೊಜ್ಜಿನಿಂದ ಹಲವರಿಗೆ ವಿವಾಹವಾಗುತ್ತಿಲ್ಲ. ಮನೆಯಲ್ಲಿ ಗೌರವ ಸಿಗುತ್ತಿಲ್ಲ. ಕೆಲವರಿಗೆ ತಮ್ಮಿಷ್ಟದ ಕೆಲಸ ಸಿಗುತ್ತಿಲ್ಲ. ಹೀಗೆ ಎಲ್ಲ ಕಡೆಯಲ್ಲೂ ಸಮಸ್ಯೆ ಉಂಟು ಮಾಡುವ ಬೊಜ್ಜು ಕರಗಬೇಕು ಅಂದ್ರೆ, ನೀವು ಆಯುರ್ವೇದದ ಈ ಟಿಪ್ಸ್ ಫಾಲೋ ಮಾಡ್ಬೇಕು. ಹಾಗಾದ್ರೆ ಆ ಟಿಪ್ಸ್ ಯಾವುದು ಅಂತಿ ತಿಳಿಯೋಣ ಬನ್ನಿ..

ನಿಮಗೆ ಬೊಜ್ಜು ಬೆಳೆಯಬಾರದು, ನೀವು ದಪ್ಪಗಾಗಬಾರದು ಅಂದ್ರೆ, ನೀವು ನೀರನ್ನ ಕುಳಿತುಕೊಂಡು, ಸಿಪ್ ಬೈ ಸಿಪ್‌ ಕುಡಿಯಬೇಕು. ಅಂದ್ರೆ ನೀರನ್ನು ಬೇಗ ಬೇಗ ಕುಡಿಯದೇ, ಗುಟುಕರಿಸಿ ಕುಡಿಯಬೇಕು. ನೀವು ಹೀಗೆ ಕುಳಿತುಕೊಂಡು ಸಿಪ್ ಬೈ ಸಿಪ್ ನೀರು ಕುಡಿದರೆ, ನಿಮ್ಮ ದೇಹದ ತೂಕ ನಾರ್ಮಲ್ ಆಗಿರತ್ತೆ. ಇತ್ತ ಬೊಜ್ಜು ಬೆಳೆಯುವುದಿಲ್ಲ, ತೂಕ ಕಡಿಮೆಯೂ ಆಗುವುದಿಲ್ಲ.

ನಿಮಗೆ ಈಗಾಗಲೇ ಬೊಜ್ಜು ಬೆಳೆದಿದ್ದರೆ, ನೀವು ಧ್ಯಾನ, ಯೋಗ, ಡಯಟ್ ಮಾಡುವುದರ ಜೊತೆಗೆ, ಹೀಗೆ ಆರೋಗ್ಯಕರವಾಗಿ ನೀರು ಕುಡಿಯುವುದನ್ನ ಕಲಿತುಕೊಳ್ಳಿ. ಹೀಗೆ ಮಾಡುವುದರಿಂದ 6 ತಿಂಗಳಲ್ಲೇ ನೀವು 10 ಕೆಜಿ ತೂಕವನ್ನು ಕಳೆದುಕೊಳ್ಳಬಹುದು. ಇಷ್ಟೇ ಅಲ್ಲದೇ, ನಿಮಗೆ ಮೂಳೆ ನೋವು, ಕೈ ಕಾಲು ನೋವು, ಸೊಂಟ, ಮಂಡಿ ನೋವೆಲ್ಲ ಇದ್ದಲ್ಲಿ, ಸತತ 7 ದಿನಗಳ ಕಾಲ, ಹೀಗೆ ಕುಳಿತುಕೊಂಡು, ಸಿಪ್ ಬೈ ಸಿಪ್ ನೀರು ಕುಡಿದರೆ, ಶೇ.50ರಷ್ಟು ನೋವು ಕಡಿಮೆಯಾಗತ್ತೆ.

ಈ ರೀತಿ ನೀರು ಕುಡಿಯುವುದನ್ನ ಕಂಟಿನ್ಯೂ ಮಾಡಿದ್ರೆ, ನೀವು ಶಕ್ತಿಯುತರಾಗಿ, ಆರೋಗ್ಯವಂತರಾಗಿ ಇರ್ತೀರಿ. ಅದರಲ್ಲೂ ಬೆಳಿಗ್ಗೆ ಎದ್ದ ಬಳಿಕ, ಖಾಲಿ ಹೊಟ್ಟೆಯಲ್ಲಿ , ಬಾಯಿ ತೊಳೆಯದೇ, ತಾಮ್ರದ ತಂಬಿಗೆಯಲ್ಲಿ ಇರಿಸಿದ ನೀರನ್ನ, ಗುಟುಕರಿಸಿ ಕುಡಿದರೆ, ಗ್ಯಾಸ್ಟ್ರಿಕ್‌, ಹೃದಯದ ಖಾಯಿಲೆ, ಕೈ ಕಾಲು ನೋವು ಸೇರಿ, ಹಲವು ರೋಗಗಳಿಂದ ಮುಕ್ತಿ ಸಿಗುತ್ತದೆ.

ಇಷ್ಟೇ ಅಲ್ಲದೇ, ಕೆಲವರಿಗೆ ಪ್ರತಿದಿನ ತಲೆ ನೋವಾಗತ್ತೆ. ತಲೆ ಚಕ್ರ ಬರತ್ತೆ. ನಿಶ್ಶಕ್ತರಾಗಿರ್ತಾರೆ. ಅಂಥವರು ಕೂಡ ಈ ರೀತಿ ನೀರು ಕುಡಿದರೆ, ಈ ಎಲ್ಲ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಆದರೆ ನೀವು ಕುಡಿಯುವ ನೀರು ಮತ್ತು ಗ್ಲಾಸ್ ಎರಡೂ ಸ್ವಚ್ಛವಾಗಿರಬೇಕು.

ಮಂಡಿ, ಮೊಣಕೈ, ಕಂಕುಳ ಚರ್ಮದ ಬಣ್ಣವನ್ನ ಈ ರೀತಿ ತಿಳಿಯಾಗಿಸಿ..

ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್ ನಿಂದ ಮುಕ್ತಿ ಬೇಕಿದ್ದರೆ ಹೀಗೆ ಮಾಡಿ..

ಆರೋಗ್ಯ, ಸೌಂದರ್ಯ ಮತ್ತು ಕೂದಲು ಚೆನ್ನಾಗಿರಲು ಇದೊಂದೇ ವಸ್ತು ಸಾಕು..

- Advertisement -

Latest Posts

Don't Miss