Tuesday, April 29, 2025

Latest Posts

ಚಾಣಕ್ಯರ ಪ್ರಕಾರ ನಿಮ್ಮಲ್ಲಿ ಈ 5 ಗುಣಗಳಿದ್ದರೆ ನೀವೇ ಬುದ್ಧಿವಂತರು..

- Advertisement -

ಚಾಣಕ್ಯರು ಹೇಗೆ ಜೀವನ ಮಾಡಬೇಕು..? ಶ್ರೀಮಂತರಾಗಲು ಏನು ಮಾಡಬೇಕು..? ಪತಿ ಪತ್ನಿ ಸಂಬಂಧ ಹೇಗಿರಬೇಕು..? ಹೀಗೆ ಜೀವನಕ್ಕೆ ಬೇಕಾದ ಎಲ್ಲಾ ವಿಷಯಗಳ ಬಗ್ಗೆ ಹೇಳಿದ್ದಾರೆ. ಅದರಲ್ಲೂ ಬುದ್ಧಿವಂತರಿಗಿರಬೇಕಾದ 5 ಗುಣಗಳ ಬಗ್ಗೆಯೂ ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಮೊದಲನೇಯ ಗುಣ, ಹಿರಿಯರಿಗೆ ಗೌರವ ಕೊಡುವ ಗುಣ ನಿಮ್ಮಲ್ಲಿರಬೇಕು. ಉದಾಹರಣೆಗೆ ನಿಮ್ಮ ಮನೆಯ ಹಿರಿಯರು ಯಾವಾಗಲೂ ಕಿರಿಕಿರಿಯ ಮಾತನಾಡುತ್ತಾರೆ. ಆಗ ನೀವು ತಾಳ್ಮೆಗೆಡದೇ, ಅವರೊಂದಿಗೆ ಸರಿಯಾಗಿ ಮಾತನಾಡಬೇಕು. ಅವರಿಗೆ ಗೌರವ ಕೊಡುವುದನ್ನು ಬಿಡಬಾರದು. ಆಗ ನೀವು ಬುದ್ಧಿವಂತರೆನ್ನಿಸಿಕೊಳ್ಳುತ್ತೀರಿ. ನೀವೇನಾದರೂ, ಅವರು ಕಿರಿಕಿರಿ ಮಾತನಾಡುತ್ತಾರೆಂದು, ಎದುರು ಜವಾಬು ಕೊಟ್ಟರೆ, ಅದರಿಂದ ನಿಮ್ಮ ಗೌರವವನ್ನ ನೀವೇ ಕಳೆದುಕೊಂಡ ಹಾಗಾಗತ್ತೆ.

ಎರಡನೇಯ ಗುಣ, ಯಾರಿಗೂ ಪುಕ್ಕಟೆ ಸಲಹೆ ಕೊಡಬೇಡಿ. ನಿಮ್ಮ ಬಳಿ ಯಾರಾದರೂ ಸಲಹೆ ಕೇಳಿಕೊಂಡು ಬಂದರಷ್ಟೇ ನೀವು ಸಣ್ಣ ಸಲಹೆ, ಸರಿಯಾದ ಸಲಹೆಯನ್ನು ಕೊಡಬಹುದು. ಆದರೆ ನಿಮ್ಮ ಬಳಿ ಯಾರಾದರೂ ತಮ್ಮ ಸಮಸ್ಯೆಯನ್ನು ಹೇಳಿಕೊಂಡಲ್ಲಿ, ಆ ಸಮಸ್ಯೆಯನ್ನು ಕೇಳಬೇಕಷ್ಟೇ. ಅದನ್ನು ಬಿಟ್ಟು ಗಂಟೆಗಟ್ಟಲೇ ಅವರಿಗೆ ಪುಕ್ಕಟೆ ಸಲಹೆ ಕೊಡಬೇಡಿ. ಅದರಿಂದ ಅವರಿಗೆ ಕಿರಿಕಿರಿಯಾಗಬಹುದು. ಅಥವಾ ನಿಮ್ಮ ಸಲಹೆಯಿಂದ ಅವರಿಗಿರುವ ಕಷ್ಟ ದುಪ್ಪಟ್ಟಾದರೂ ಅವರು ನಿಮ್ಮನ್ನೇ ದೂರುತ್ತಾರೆ. ಹಾಗಾಗಿ ಯಾರಿಗೂ ನೀವಾಗಿಯೇ ಸಲಹೆ ಕೊಡಬೇಡಿ.

ಮೂರುನೇಯ ಗುಣ, ಎಲ್ಲ ಸಮಯದಲ್ಲೂ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಅರ್ಹತೆ ನಿಮಗಿರಬೇಕು. ಹಾಗಾಗಬೇಕು ಎಂದರೆ, ಥಟ್ ಅಂತಾ ನಿರ್ಧಾರ ತೆಗೆದುಕೊಳ್ಳಬಾರದು. ಬದಲಾಗಿ, ಯೋಚಿಸಿ, ನಿರ್ಧಾರ ತೆಗೆದುಕೊಳ್ಳಬೇಕು. ಯಾವ ನಿರ್ಧಾರ ತೆಗೆದುಕೊಂಡಾಗ, ಯಾವ ಫಲಿತಾಂಶ ಬರುತ್ತದೆ..? ಇದರಿಂದ ಯಾರಿಗಾದರೂ, ಏನಾದರೂ ತೊಂದರೆ ಬರುತ್ತದೆಯೇ..? ಎಂಬುದನ್ನ ಯೋಚಿಸಿ, ನಿರ್ಧಾರ ತೆಗೆದುಕೊಂಡಾಗ, ನೀವು ಬುದ್ಧಿವಂತರೆನ್ನಿಸಿಕೊಳ್ಳುತ್ತೀರಿ.

ನಾಲ್ಕನೇಯ ಗುಣ, ನಿಮ್ಮ ಸುತ್ತಮುತ್ತಲಿರುವ ಜನರಿಗೆ ಗೌರವಿಸುವುದನ್ನ, ಅವರ ಮಾತಿಗೆ ಬೆಲೆ ಕೊಡುವುದನ್ನ ಕಲಿತುಕೊಳ್ಳಿ. ಉದಾಹರಣೆಗೆ ಆಫೀಸಿನಲ್ಲಿರುವ ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಿ. ಅಸೂಯೆ ಪಡುವವರನ್ನ ಕಡೆಗಣಿಸಿ. ಆದರೆ ನೀವು ಯಾರ ಮೇಲೂ ಅಸೂಯೆ ಪಡಬೇಡಿ. ಆಗ ಎಲ್ಲರೂ ನಿಮಗೆ ಸಪೋರ್ಟ್ ಮಾಡುತ್ತಾರೆ. ಮತ್ತು ಈ ಗುಣವೇ ನೀವು ಜೀವನದಲ್ಲಿ ಯಶಸ್ಸು ಪಡೆಯಲು ಅನುಕೂಲವಾಗುತ್ತದೆ.

ಐದನೇಯ ಗುಣ, ನೀವು ಕಲಿಯುವುದನ್ನ ನಿಲ್ಲಿಸಿದರೂ, ಜೀವನ ಕಲಿಸುವುದನ್ನು ನಿಲ್ಲಿಸುವುದಿಲ್ಲ. ಹಾಗಾಗಿ ಆದಷ್ಟು ಎಲ್ಲ ವಿಷಯಗಳಲ್ಲಿ ಜ್ಞಾನ ಪಡೆದುಕೊಳ್ಳುವ ಪ್ರಯತ್ನ ಮಾಡಿ. ನನಗೆಲ್ಲವೂ ಗೊತ್ತು ಎಂಬ ಅಹಂ ಉಳ್ಳವನು, ಎಂದಿಗೂ ಬುದ್ಧಿವಂತನಾಗಲು ಸಾಧ್ಯವಿಲ್ಲ.

ಶ್ರೀಕೃಷ್ಣನಿಗೇಕೆ ಛಪ್ಪನ್ನಾರು ಭೋಜನವನ್ನ ನೈವೇದ್ಯ ಮಾಡಲಾಗತ್ತೆ..?

ಕರ್ಮ ದೊಡ್ಡದೋ..? ಧರ್ಮ ದೊಡ್ಡದೋ..?

ಮಾಡಿದ ಕರ್ಮಾ ಬಿಡೋದಿಲ್ಲಾ ಅಂತಾ ಹೇಳೋದ್ಯಾಕೆ ಗೊತ್ತಾ..?

- Advertisement -

Latest Posts

Don't Miss