Sunday, December 22, 2024

Latest Posts

ಚಾಣಕ್ಯರ ಪ್ರಕಾರ ಕತ್ತೆಯಿಂದ ನಾವು ಈ ವಿಷಯಗಳನ್ನು ಕಲಿತುಕೊಳ್ಳಬೇಕಂತೆ.. ಭಾಗ 1

- Advertisement -

Spiritual: ಚಾಣಕ್ಯರು ಜೀವನಕ್ಕೆ ಬೇಕಾದ ಹಲವಾರು ವಿಚಾರಗಳನ್ನು ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಯಾವ ರೀತಿಯ ಪುರುಷನನ್ನು ಸ್ತ್ರೀ ವರಿಸಬೇಕು. ಎಂಥ ಗುಣವುಳ್ಳ ಹೆಣ್ಣನ್ನು ಪುರುಷ ವಿವಾಹವಾಗಬೇಕು. ವಿದ್ಯೆ ಕಲಿಯುವಾಗ, ನಾವು ಹೇಗಿರಬೇಕು. ದುಡ್ಡು ಸಂಪಾದಿಸಬೇಕಾದಲ್ಲಿ ನಮ್ಮ ಜೀವನ ಶೈಲಿ ಹೇಗಿರಬೇಕು ಎಂಬ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಇದರ ಜೊತೆಗೆ ಕತ್ತೆಯಿಂದ ಕೂಡ ಮನುಷ್ಯ ಕೆಲ ವಿಷಯಗಳನ್ನು ಕಲಿಯಬೇಕಂತೆ. ಹಾಗಾದ್ರೆ ಕತ್ತೆಯಿಂದ ಮನುಷ್ಯ ಕಲಿಯಬೇಕಾದ ಗುಣಗಳೇನು ಅಂತಾ ತಿಳಿಯೋಣ ಬನ್ನಿ..

ಒಂದು ಕಾಡಲ್ಲಿ ಮೂರು ಜನ ಸ್ನೇಹಿತರಿದ್ದರು. ಕತ್ತೆ, ಸರ್ಪ, ಆಮೆ. ಸರ್ಪದ ಹೆಸರು ಸಹಸ್ರಬುದ್ಧಿ. ಯಾಕಂದ್ರೆ ಸರ್ಪದ ಪ್ರಕಾರ, ಅದಕ್ಕೆ ಸಾವಿರ ಬುದ್ಧಿ ಇತ್ತಂತೆ. ಆಮೆಯ ಹೆಸರು ಸದ್ಬುದ್ಧಿಯಾಗಿತ್ತು. ಯಾಕಂದ್ರೆ ಆಮೆ ತನ್ನ ಬಳಿ 100 ಬುದ್ಧಿ ಇದೆ ಎಂದು ತಿಳಿದಿತ್ತು. ಕತ್ತೆಯ ಹೆಸರು ಏಕ್ಬುದ್ಧಿಯಾಗಿತ್ತು. ಯಾಕಂದ್ರೆ ಕತ್ತೆಯ ಪ್ರಕಾರ ಅದಕ್ಕೆ ಒಂದೇ ಒಂದು ಬುದ್ಧಿ ಇತ್ತು.

ಒಮ್ಮೆ ಕಾಡಿನಲ್ಲಿ ಸಣ್ಣ ಬೆಂಕಿ ಕಿಡಿ ತಗುಲಿ, ಬೆಂಕಿ ಹತ್ತಿತು. ಆಗ ಕತ್ತೆ, ಆಮೆ ಮತ್ತು ಸರ್ಪದ ಬಳಿ ಬಂದು, ಕಾಡಿನಲ್ಲಿ ಸಣ್ಣ ಕಿಡಿ ತಗುಲಿ ಬೆಂಕಿ ಹತ್ತಿದೆ. ಅದು ಇಡೀ ಕಾಡಿಗೆ ತಗಲುವ ಮುನ್ನ ನಾವು ಜೀವ ಉಳಿಸಿಕೊಳ್ಳಲು, ಈ ಕಾಡಿನಿಂದ ಹೊರಗೆ ಹೋಗಬೇಕು ಎನ್ನುತ್ತದೆ. ಅದಕ್ಕೆ ಸರ್ಪ, ನನಗೆ ಯಾವ ಆಪತ್ತೂ ಬರಲು ಸಾಧ್ಯವಿಲ್ಲ. ನನಗೆ ಸಹಸ್ರಬುದ್ಧಿ ಇದೆ. ನಾನು ಅದನ್ನೆಲ್ಲ ಉಪಯೋಗಿಸಿ, ನನ್ನ ಜೀವ ಉಳಿಸಿಕೊಳ್ಳುತ್ತೇನೆ ಎನ್ನುತ್ತದೆ. ಅದೇ ಆಮೆ, ನನ್ನ ಬಳಿ 100 ಬುದ್ಧಿ ಇದೆ ನಾನೂ ಬದುಕಬಲ್ಲೆ ಎನ್ನುತ್ತದೆ.

ಅಲ್ಲದೇ, ನೀನು ನಿನ್ನ ಪ್ರಾಣ ಕಾಪಾಡಿಕೊಳ್ಳುವ ಬಗ್ಗೆ ಯೋಚಿಸು ಎಂದು ಇಬ್ಬರೂ ಕತ್ತೆಗೆ ಹೀಯಾಳಿಸುತ್ತಾರೆ. ಸಣ್ಣಗೆ ಹೊತ್ತಿದ್ದ ಬೆಂಕಿ, ಕಾಡಿಗೆ ಪಸರಿಸುತ್ತದೆ. ಸರ್ಪ ದೊಡ್ಡ ಮರದ ಕೊಂಬೆಯ ಮೇಲೆ ಹೋಗಿ ಕುಳಿತುಕೊಳ್ಳುತ್ತದೆ. ಮತ್ತು ಆಮೆ ಸಗಣಿಯ ಒಳಹೊಕ್ಕು ಕೂರುತ್ತದೆ. ಯಾಕಂದ್ರೆ ಹೀಗೆ ಮಾಡಿದ್ರೆ ತಮ್ಮ ಪ್ರಾಣ ಉಳಿಯುತ್ತದೆ ಅನ್ನೋದು ಅವರ ಭ್ರಮೆಯಾಗಿತ್ತು. ಇತ್ತ ಕತ್ತೆ, ಕಾಡಿನಿಂದ ಹೊರಗೆ ಹೋಗಿ, ತನ್ನ ಪ್ರಾಣ ಉಳಿಸಿಕೊಂಡಿತ್ತು. ಕಾಡ್ಗಿಚ್ಚೆಲ್ಲ ಕಡಿಮೆಯಾದ ಬಳಿಕ, ಮತ್ತೆ ಕಾಡಿಗೆ ಬಂದ ಕತ್ತೆ, ಸರ್ಪ ಮತ್ತು ಆಮೆಯನ್ನು ಹುಡುಕಿತು. ಅವೆರಡೂ, ಸುಟ್ಟು ಬೂದಿಯಾಗಿತ್ತು. ಇದಕ್ಕೆ ಅವರೆಡರ ಅತೀಯಾದ ಆತ್ಮವಿಶ್ವಾಸವೇ ಕಾರಣವಾಗಿತ್ತು. ಹಾಗಾಗಿ ಮನುಷ್ಯನಾದವನಿಗೆ ಯಾವಾಗ ಸಮಸ್ಯೆ ಬರುತ್ತದೆಯೋ, ಅದೇ ಕ್ಷಣಕ್ಕೆ ಅವನು ಅದರಿಂದ ತಪ್ಪಿಸಿಕೊಳ್ಳುವ ದಾರಿ ಹುಡುಕಿಕೊಳ್ಳಬೇಕು. ಅದನ್ನು ಬಿಟ್ಟು, ಸಮಸ್ಯೆ ಇದ್ದರೂ ಅದನ್ನು ನಿರ್ಲಕ್ಷಿಸಿ, ಅದು ದೊಡ್ಡ ದಾಗುವುದನ್ನು ಬಿಟ್ಟು, ಕೊನೆಗೆ ಸರ್ಪ ಮತ್ತು ಆಮೆಯ ಹಾಗೆ ಸುಟ್ಟು ಹೋಗಬಾರದು.

ಸಾಲ, ರೋಗ, ಶತ್ರು ಮತ್ತು ಬೆಂಕಿಯ ಕಿಡಿ, ಇವೆಲ್ಲ ಸಮಸ್ಯೆ ಶುರುವಾದಾಗಲೇ ಅದಕ್ಕೆ ಪರಿಹಾರ ಹುಡುಕಿಬಿಡಬೇಕು ಎನ್ನುವುದು ಚಾಣಕ್ಯರ ಮಾತು. ಸಾಲವಿದ್ದಾಗ, ಬೇಗ ದುಡಿದು, ಅದನ್ನು ತೀರಿಸಬೇಕು. ಶತ್ರು ಹುಟ್ಟಿಕೊಂಡಾಗಲೇ, ಅವನಿಗೆ ಬುದ್ಧಿ ಕಲಿಸಬೇಕು. ಬೆಂಕಿಯ ಕಿಡಿ ಹೊತ್ತಿದಾಗ, ಅಲ್ಲೇ ಅದನ್ನು ಆರಿಸಬೇಕು. ರೋಗ ಶುರುವಾದಾಗಲೇ, ಚಿಕಿತ್ಸೆ ಪಡೆದು, ರೋಗ ನಿವಾರಣೆ ಮಾಡಬೇಕು ಎನ್ನುವುದು ಚಾಣಕ್ಯರ ಮಾತು. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನ ಮುಂದಿನ ಭಾಗದಲ್ಲಿ ತಿಳಿಯೋಣ..

ಶಬರಿಮಲೆಯ ಅಯ್ಯಪ್ಪ ದೇವಸ್ಥಾನದಲ್ಲಿರುವ 18 ಮೆಟ್ಟಿಲಿನ ಅರ್ಥವೇನು..?

ಪುಣ್ಯಕ್ಷೇತ್ರವಾದ ಗಯಾದಲ್ಲಿ ಜನ ಪಿತೃಗಳ ಪಿಂಡಪ್ರಧಾನ ಮಾಡುವುದೇಕೆ..? ಭಾಗ-2

ಪುಣ್ಯಕ್ಷೇತ್ರವಾದ ಗಯಾದಲ್ಲಿ ಜನ ಪಿತೃಗಳ ಪಿಂಡಪ್ರಧಾನ ಮಾಡುವುದೇಕೆ..? ಭಾಗ-1

- Advertisement -

Latest Posts

Don't Miss