Friday, November 22, 2024

Latest Posts

ಗರುಡ ಪುರಾಣದ ಪ್ರಕಾರ ಈ 9 ಕೆಲಸ ಮಾಡುವವರು ಯಾವಾಗಲೂ ಸುಖಿಯಾಗಿರುತ್ತಾರೆ- ಭಾಗ 2

- Advertisement -

ಈ ವಿಷಯಕ್ಕೆ ಸಂಬಂಧಿಸಿದಂತೆ ಮೊದಲ ಭಾಗದಲ್ಲಿ ನಾವು 5 ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ ಇನ್ನುಳಿದ 4 ಕೆಲಸ ಯಾವುದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ..

ಗರುಡ ಪುರಾಣದ ಪ್ರಕಾರ ಈ 9 ಕೆಲಸ ಮಾಡುವವರು ಯಾವಾಗಲೂ ಸುಖಿಯಾಗಿರುತ್ತಾರೆ- ಭಾಗ 1

ಆರನೇಯ ಕೆಲಸ, ತಪಸ್ಸಿನ ಮಹತ್ವ ತಿಳಿಯುವುದು. ಹಿಂದಿನ ಕಾಲದಲ್ಲಿ ದೇವರ ಒಲಿಸಿಕೊಳ್ಳಲು, ವರ ಪಡೆದುಕೊಳ್ಳಲು ತಪಸ್ಸು ಮಾಡುತ್ತಿದ್ದರು. ಇಂದಿನ ಕಾಲದಲ್ಲಿ ದುಡ್ಡಿಗಾಗಿ ಜನ ತಪಸ್ಸು ಮಾಡುತ್ತಾರೆ. ಅರ್ಥಾತ್ ಕಷ್ಟ ಪಟ್ಟು ದುಡಿಯುತ್ತಾರೆ. ಯಾರು ನಿಯತ್ತಾಗಿ, ಕಷ್ಟಪಟ್ಟು ದುಡಿಯುತ್ತಾರೋ, ಅವರ ಬಳಿ ಲಕ್ಷ್ಮೀ ಇರುತ್ತಾಳೆ. ಮತ್ತು ಲಕ್ಷ್ಮೀ ಯಾರ ಬಳಿ ಇರುವಳೋ, ಅವರು ನೆಮ್ಮದಿಯಾಗಿರುತ್ತಾರೆ.

ಏಳನೇಯ ಕೆಲಸ, ಪದ್ಧತಿ ಪ್ರಕಾರ ಮದುವೆಯಾಗುವುದು. ಸನಾತನ ಧರ್ಮದಲ್ಲಿ ಪದ್ಧತಿ ಪ್ರಕಾರವಾಗಿ, ಉತ್ತಮ ಮುಹೂರ್ತದಲ್ಲಿ ಮದುವೆಯಾಗುವವರು, ಜೀವನದಲ್ಲಿ ಸುಖಿಯಾಗಿರುತ್ತಾರೆ. ಜಾತಕ ಸರಿಯಾಗಿದ್ದು, ಎಲ್ಲಾ ಆಚರಣೆಯೊಂದಿಗೆ ಮದುವೆಯಾದರೆ, ಉತ್ತಮ ಸಂತಾನ ಪ್ರಾಪ್ತಿಯಾಗುತ್ತದೆ. ಅಂಥ ಸಂತಾನದಿಂದ ಜೀವನ ಉತ್ತಮವಾಗಿರುತ್ತದೆ.

ಈ 5 ಕೆಲಸ ಮಾಡುವ ಮನುಷ್ಯರು ಪುಣ್ಯವಂತರಂತೆ..

ಎಂಟನೇಯ ಕೆಲಸ, ಇಂದ್ರಿಯವನ್ನು ನಿಯಂತ್ರಿಸುವನು. ಯಾರು ಎಂಥದ್ಧೇ ಸಮಯ ಬಂದಲ್ಲಿ ಇಂದ್ರಿಯವನ್ನು ನಿಯಂತ್ರಿಸುತ್ತಾರೋ, ಅಂಥವರು ಜೀವನದಲ್ಲಿ ಉತ್ತಮವಾಗಿರುತ್ತಾರೆ. ಉದಾಹರಣೆಗೆ ಓರ್ವ ಸುಂದರವಾದ, ಶ್ರೀಮಂತ, ವಿದ್ಯಾವಂತ, ವಿವಾಹಿತ ಪುರುಷ, ಇನ್ನೋರ್ವ ಸುಂದರ ಯುವತಿಯನ್ನು ನೋಡಿ ಇಂದ್ರಿಯ ನಿಗ್ರಹಿಸದಿದ್ದಲ್ಲಿ, ಅವನ ಮರ್ಯಾದೆ ಮಣ್ಣು ಪಾಲಾಗುತ್ತದೆ. ಅವನಿಗೆ ವಿದ್ಯೆ, ಶ್ರೀಮಂತಿಕೆ, ಸೌಂದರ್ಯ ಇವೆಲ್ಲವೂ ಇದ್ದು ಗೌರವವೇ ಇರೋದಿಲ್ಲಾ. ಹಾಗಾಗಿ ಯಾರು ಇಂದ್ರಿಯವನ್ನು ನಿಗ್ರಹಿಸುತ್ತಾರೋ ಅವರು ನೆಮ್ಮದಿಯಾಗಿರುತ್ತಾರೆ.

ಒಂಭತ್ತನೇಯ ಕೆಲಸ, ಯಾವಾಗಲೂ ಸದಾಚಾರದ ಪಾಲನೆ ಮಾಡುವುದು. ಜೀವನದಲ್ಲಿ ಯಾವಾಗಲೂ ಸದಾಚಾರಿಯಾಗಿರಿ. ಹಿರಿಯರನ್ನು ಗೌರವಿಸಿ, ಕಿರಿಯರನ್ನು ಪ್ರೀತಿಸಿ, ಕುಟುಂಬಸ್ಥರನ್ನು ನೆಮ್ಮದಿಯಾಗಿರಿಸಿ. ನಿಯತ್ತಿನಿಂದ ದುಡಿಯಿರಿ. ಕೆಟ್ಟ ಚಟಗಳಿಂದ, ಪರ ಪುರುಷ ಅಥವಾ ಸ್ತ್ರೀಯಿಂದ ದೂರವಿರಿ. ಹೆಣ್ಣು ಮಕ್ಕಳನ್ನು ಗೌರವಿಸಿ. ಇದರಿಂದ ನಿಮಗೆ ನೆಮ್ಮದಿ ಸಿಗುತ್ತದೆ.

- Advertisement -

Latest Posts

Don't Miss