Spiritual Story: ಶ್ರೀಕೃಷ್ಣನ ಪ್ರಕಾರ, ಮಾನವರು ಮೂರು ಹಂತದಲ್ಲಿ ಆಹಾರವನ್ನು ಸೇವಿಸುತ್ತಾರೆ. ಆ ಮೂರು ಹಂತಗಳು ಯಾವುದು..? ಶ್ರೀಕೃಷ್ಣನ ಪ್ರಕಾರ, ಮನುಷ್ಯ ಎಂಥ ಆಹಾರ ಸೇವಿಸಬೇಕು ಎಂದು ತಿಳಿಯೋಣ ಬನ್ನಿ..
ಮೊದಲನೇಯದ್ದು ಸಾತ್ವಿಕ ಆಹಾರ. ಸಾತ್ವಿಕ ಆಹಾರ ಅಂದ್ರೆ, ಯಾರಿಗೂ ಹಿಂಸೆ ನೀಡದೇ, ಮಾಡಿದ ಅಡುಗೆ. ತರಕಾರಿ, ಹಣ್ಣು-ಹಂಪಲು, ಸೊಪ್ಪು, ಕಾಳು ಇತ್ಯಾದಿ ಸೇರಿಸಿ ಮಾಡಿದ ಸಪ್ಪೆ ಆಹಾರ. ಅಂಥ ಆಹಾರ ಸೇವನೆಯಿಂದ ನಮ್ಮ ಮನಸ್ಸು ಶಾಂತವಾಗಿರುತ್ತದೆ. ಜ್ಞಾನದಿಂದ ಕೂಡಿರುತ್ತದೆ. ಸಾತ್ವಿಕ ಆಹಾರ ಸೇವನೆಯಿಂದ ನಾವು ತಾಳ್ಮೆಯಿಂದ ಜೀವನ ಮಾಡುತ್ತೇವೆ. ನಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ. ಆಯುಷ್ಯ ಹೆಚ್ಚಾಗುತ್ತದೆ. ಏಕೆಂದರೆ ಇವು ಸುಲಭವಾಗಿ ಜೀರ್ಣವಾಗುತ್ತದೆ. ಶ್ರೀಕೃಷ್ಮನ ಪ್ರಕಾರ ಜನ ಇಂಥ ಆಹಾರಗಳನ್ನು ಸೇವಿಸಬೇಕು. ಇಂಥ ಆಹಾರಗಳನ್ನು ಸೇವಿಸಿದವರಷ್ಟೇ ಉತ್ತಮ ಜೀವನ ಜೀವಿಸಬಲ್ಲರು.
ಎರಡನೇಯದ್ದು ರಾಜಸಿಕ ಆಹಾರ. ರಾಜಸಿಕ ಆಹಾರ ಎಂದರೆ, ಉಪ್ಪು, ಖಾರ, ಹುಳಿ, ಸಿಹಿ ಎಲ್ಲ ರೀತಿ ರುಚಿಯನ್ನು ಹೆಚ್ಚು ಹೊಂದಿರುವ ಆಹಾರ. ಇಂಥ ಆಹಾರ ತಿಂದವರಿಗೆ ರೋಗ ರುಜಿನ ಹೆಚ್ಚು. ಸಿಟ್ಟು, ವೈಷಮ್ಯ ಭಾವನೆ ಹೆಚ್ಚು. ಇಂಥ ಆಹಾರಗಳು ನಮ್ಮ ದೇಹದ ಹಲವು ಭಾಗಗಳಿಗೆ ಹಾನಿಯುಂಟು ಮಾಡುತ್ತದೆ. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನೂ ಕ್ಷೀಣಗೊಳಿಸುತ್ತದೆ. ಹಾಗಾಗಿ ರಾಜಸಿಕ ಆಹಾರ ಸೇವನೆ ಹೆಚ್ಚು ಮಾಡಿದರೆ, ಜೀವನದಲ್ಲಿ ನೆಮ್ಮದಿ ಹಾಳಾಗುತ್ತದೆ.
ಮೂರನೇಯದ್ದು ತಾಮಸಿಕ ಆಹಾರ. ಅಜ್ಞಾನಿಗಳು ತಾಮಸಿಕ ಆಹಾರ ಸೇವನೆ ಮಾಡುತ್ತಾರೆ ಅಂತಾನೆ ಶ್ರೀಕೃಷ್ಣ. ಅಂದ್ರೆ, ಇನ್ನೊಬ್ಬರಿಗೆ ಹಿಂಸೆ ಕೊಟ್ಟು ಸೇವಿಸುವ ಆಹಾರ. ಮದ್ಯ-ಮಾಂಸವನ್ನು ತಾಮಸಿಕ ಆಹಾರ ಎನ್ನಲಾಗುತ್ತದೆ. ಏಕೆಂದರೆ, ಮದ್ಯ ಮಾಂಸ ವಿಷಕಾರಿ ಭೋಜನ, ಇದರಿಂದ ನಮ್ಮ ದೇಹದಲ್ಲಿ ಬರೀ ನಕಾರಾತ್ಮಕತೆ ಹುಟ್ಟಿಕೊಳ್ಳುತ್ತದೆ. ಹಾಗಾಗಿ ಯಾರೂ ಕೂಡ ಹೆಚ್ಚು ತಾಮಸಿಕ ಆಹಾರ ಸೇವನೆ ಮಾಡಬಾರದು.