ಹುಟ್ಟುವಾಗ ಬಡವನಾದರೂ ಸರಿ, ಆದರೆ ಸಾಯುವಾಗ ಶ್ರೀಮಂತನಾಗಿ ಸಾಯಬೇಕು ಅಂತಾ ಹೇಳಲಾಗತ್ತೆ. ಹುಟ್ಟುವಾಗಲೂ ದರಿದ್ರನಾಗಿ, ಸಾಯುವಾಗಲೂ ದರಿದ್ರನಾಗಿ ಸತ್ತರೆ, ಆ ಜನ್ಮಕ್ಕೊಂದು ಅರ್ಥವೇ ಇರೋದಿಲ್ಲ. ಹಾಗಾಗಿ ಮನುಷ್ಯ ನಿಯತ್ತಿನಿಂದ ದುಡ್ಡು ಸಂಪಾದಿಸಿ, ಶ್ರೀಮಂತನಾಗಬೇಕು. ಇದು ಎಲ್ಲರ ಆಸೆ ಕೂಡ ಹೌದು. ಆದ್ರೆ ಶ್ರೀಕೃಷ್ಣ 2 ರೀತಿಯ ಜನ ಎಂದಿಗೂ ಉದ್ಧಾರವಾಗುವುದಿಲ್ಲ. ಅವರಿಗೆ ಎಂದಿಗೂ ಅದೃಷ್ಟ ಒಲಿದು ಬರುವುದಿಲ್ಲವೆಂದು ಹೇಳಿದ್ದಾನೆ. ಹಾಗಾದ್ರೆ ಆ 2 ರೀತಿಯ ಜನರ್ಯಾರು ಅನ್ನೋದನ್ನ ನೋಡೋಣ ಬನ್ನಿ..
ಜೀವನದಲ್ಲಿ ಎಂದಿಗೂ ಈ 10 ವಿಷಯಗಳನ್ನು ಮರಿಯಬೇಡಿ ಎನ್ನುತ್ತಾನೆ ರಾವಣ.. ಭಾಗ 2
ಮೊದಲನೇಯವರು ತಪ್ಪು ಜೀವನ ಸಂಗಾತಿ. ಎರಡನೇಯವರು ವಿಶ್ವಾಸಘಾತುಕರು. ಈ 2 ರೀತಿಯ ಜನ ಎಂದಿಗೂ ಉದ್ಧಾರವಾಗುವುದಿಲ್ಲ. ಕೆಲವರು ಮಾತನಾಡುವುದನ್ನು ನಾವು ನೋಡಿದ್ದೇವೆ. ಅವಳು ಅಥವಾ ಅವನು ಮದುವೆಯಾಗುವವರೆಗೂ ಸಂತೋಷವಾಗಿದ್ದರು. ಮದುವೆಯಾದ ಬಳಿಕ ಅವರ ಬಾಳೇ ಹಾಳಾಯಿತು ಎಂದು. ಯಾಕೆ ಹೀಗಾಗುತ್ತದೆ ಎಂದರೆ, ನಿಮ್ಮ ಜೀವನ ಸಂಗಾತಿಯ ಆಯ್ಕೆ ಸರಿಯಾಗಿ ಇರುವುದಿಲ್ಲ. ಈ ಕಾರಣಕ್ಕೆ ಅಷ್ಟು ತೊಂದರೆ ಅನುಭವಿಸುವಂತಾಗುತ್ತದೆ.
ಭಗವಾನ್ ಶ್ರೀಕೃಷ್ಣನ 16 ಸಾವಿರ ಪತ್ನಿಯರ ಅಸಲಿ ಸತ್ಯ ಇದೇ ನೋಡಿ..
ಪತಿಯಾಗಿರಬಹುದು ಅಥವಾ ಪತ್ನಿಯೇ ಆಗಿರಬಹುದು, ತಮ್ಮ ಸಂಗಾತಿಯ ಕಷ್ಟವನ್ನರಿತು ಅದಕ್ಕೆ ಸಾಥ್ ನೀಡಬೇಕು. ಒಬ್ಬರ ಮನಸ್ಸಿಗೆ ನೋವಾಗುವಂತೆ ಇನ್ನೊಬ್ಬರು ಮಾತನಾಡಿದರೆ, ಅಥವಾ ನಡೆದುಕೊಂಡರೆ, ಅಲ್ಲಿಂದಲೇ ಬಿರುಕು ಶುರುವಾಗುತ್ತದೆ. ಜೊತೆಗೆ ಅಹಂ, ಸೇರಿದರಂತೂ ಅಲ್ಲಿ ಯುದ್ಧವೇ ಆಗೋದು. ಆಗಲೇ ಅದೃಷ್ಟ ಕೈಕೊಡೋದು. ಹಾಗಾಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಾಗಲೇ, ಜೀವನ ಸುಖಮಯವಾಗಲು ಸಾಧ್ಯ ಅಂತಾನೇ ಶ್ರೀಕೃಷ್ಣ.
ಜೀವನದಲ್ಲಿ ಎಂದಿಗೂ ಈ 10 ವಿಷಯಗಳನ್ನು ಮರಿಯಬೇಡಿ ಎನ್ನುತ್ತಾನೆ ರಾವಣ.. ಭಾಗ 1
ಇನ್ನು ಎರಡನೇಯದಾಗಿ ವಿಶ್ವಾಸದ್ರೋಹಿ. ಪತಿಗೆ ಪತ್ನಿ, ಅಥವಾ ಪತ್ನಿಗೆ ಪತಿ ವಿಶ್ವಾಸ ದ್ರೋಹ ಮಾಡಿದರೆ, ಅಂಥವರೆಂದಿಗೂ ನೆಮ್ಮದಿಯಾಗಿರಲು ಸಾಧ್ಯವಿಲ್ಲ. ಇದರೊಂದಿಗೆ ಸಂಬಂಧಿಕರಿಗೆ, ಮನೆ ಜನರಿಗೆ, ಸ್ನೇಹಿತರಿಗೆ, ದಣಿಗಳಿಗೆ, ಸಹೋದ್ಯೋಗಿಗಳಿಗೆ, ಬಡವರಿಗೆ, ನಿರ್ಗತಿಕರಿಗೆ ಹೀಗೆ ತಮ್ಮನ್ನು ನಂಬಿದವರಿಗೆ ವಿಶ್ವಾಸದ್ರೋಹ ಮಾಡುವವನು ಕೂಡ, ಎಂದಿಗೂ ಅದೃಷ್ಟವಂತನಾಗಲಾರ.