Monday, December 23, 2024

Latest Posts

ರಾಮಚರಿತ ಮಾನಸದ ಪ್ರಕಾರ ಈ 14 ಜನ ಬದುಕಿದ್ದು ಸತ್ತ ಹಾಗೆ.. ಭಾಗ 2

- Advertisement -

ಇದರ ಮೊದಲ ಭಾಗದಲ್ಲಿ ನಾವು ರಾಮಚರಿತ ಮಾನಸದ ಪ್ರಕಾರ ಯಾವ 7 ಜನ ಬದುಕಿದ್ದು ಸತ್ತ ಹಾಗೆ ಅಂತಾ ಹೇಳಿದ್ದೆವು. ಇಂದು ಅದರ ಮುಂದುವರಿದ ಭಾಗವಾಗಿ, ಉಳಿದ 7 ಜನರ ಬಗ್ಗೆ ಹೇಳಲಿದ್ದೇವೆ.

ಎಂಟನೇಯವರು, ದೇವರನ್ನು ನಂಬದವ. ಕೆಲವರು ದೇವರನ್ನ ನಂಬುವುದಿಲ್ಲ. ಹಾಗಂತ ಅವರೆಲ್ಲ ಕೆಟ್ಟವರು ಅಂತಲ್ಲ. ಆದ್ರೆ ರಾಮ ಚರಿತ ಮಾನಸದ ಪ್ರಕಾರ, ನಾವು ನಮ್ಮ ಜೀವನವನ್ನು ಇಷ್ಟು ಚೆಂದವಾಗಿ, ಸುರಕ್ಷಿತವಾಗಿ ನಡೆಸಲು ಆ ದೇವರ ಕೃಪೆಯೇ ಕಾರಣ. ಹಾಗಾಗಿ ಆ ದೇವರನ್ನ ನಂಬದ ನಾಸ್ತಿಕ, ಬದುಕಿದ್ದು ಸತ್ತಂತೆ ಎನ್ನಲಾಗಿದೆ.

ಒಂಭತ್ತನೇಯವರು, ಧರ್ಮ, ವೇದಗಳ ವಿರೋಧಿ. ಯಾರು ತನ್ನ ಧರ್ಮವನ್ನು ವಿರೋಧಿಸುತ್ತಾರೋ, ಮತ್ತು ಯಾವ ಹಿಂದೂ ವೇದ ಶಾಸ್ತ್ರಗಳನ್ನು ದ್ವೇಷಿಸುತ್ತಾನೋ, ಅವನು ಬದುಕಿದ್ದು ಸತ್ತಂತೆ ಅಂತಾ ಹೇಳಲಾಗಿದೆ.

ಸೀತಾಮಾತೆ ಲಕ್ಷ್ಮಣನನ್ನೇ ನುಂಗಿದ್ದಳಂತೆ.. ಯಾಕೆ ಗೊತ್ತಾ..?

ಹತ್ತನೇಯವರು, ತಮ್ಮನ್ನಷ್ಟೇ ತಾವು ಪ್ರೀತಿಸುವವರು. ಇಂಥವರನ್ನ ಸ್ವಾರ್ಥಿಗಳು ಎನ್ನುತ್ತಾರೆ. ಇವರು ಸಂಬಂಧಕ್ಕೆ ಬೆಲೆ ಕೊಡುವುದಿಲ್ಲ. ಬದಲಾಗಿ ತಮ್ಮನ್ನಷ್ಟೇ ತಾವು ಪ್ರೀತಿಸುತ್ತಾರೆ. ತಾವು ಆರಾಮವಾಗಿ ಇರುವುದಷ್ಟೇ ಇವರಿಗೆ ಮುಖ್ಯ. ಇಂಥವರು ಬೇರೆಯವರಿಗೆ ಎಂದೂ ಪ್ರೀತಿ ಪಾತ್ರರಾಗಲು ಸಾಧ್ಯವಿಲ್ಲ.

ಹನ್ನೊಂದನೇಯವರು, ಬರೀ ಬೇರೆಯವರಿಗೆ ಬೈಯ್ಯುವವನು. ಬೇರೆಯವರ ತಪ್ಪುಗಳನ್ನೇ ಹುಡುಕುವವನು. ಇಂಥವರು ಯಾವಾಗಲೂ ಖುಷಿಯಾಗಿ ಇರಲು ಸಾಧ್ಯವಿಲ್ಲ. ಇವರು ಬೇರೆಯವರ ತಪ್ಪುಗಳನ್ನು, ಬೇರೆಯವರ ಸೌಂದರ್ಯವನ್ನ, ಹೀಯಾಳಿಸುವ ಬುದ್ಧಿಯನ್ನ ಹೊಂದಿರುತ್ತಾರೆ. ಇವರನ್ನ ಇವರು ಶ್ರೇಷ್ಠರು, ಸೌಂದರ್ಯವಂತರು ಎಂಬ ಭ್ರಮೆಯಲ್ಲಿರುತ್ತಾರೆ. ಇಂಥವರು ಇದ್ದೂ ಸತ್ತಂತೆ.

ಹನ್ನೆರಡನೇಯವರು, ಪಾಪ ಮಾಡಿ, ಜೀವನ ಮಾಡುವವನು. ಅಂದರೆ, ಕೊಲೆ, ಸುಲಿಗೆ, ದರೋಡೆ ಮಾಡಿ, ಇನ್ನೊಬ್ಬರಿಗೆ ಮೋಸ ಮಾಡಿ ಬದುವವರು ಕೂಡ ಬದುಕಿತ್ತು, ಸತ್ತಂತೆ. ಇವರು ತಿನ್ನುವ ಆಹಾರ ಪಾಪದ ಅನ್ನವಾಗಿರುತ್ತದೆ. ಅದೇ ಪಾಪದ ಅನ್ನವನ್ನು ಇವರು ಇವರ ಕುಟುಂಬಸ್ಥರಿಗೂ ತಿನ್ನಿಸುತ್ತಾರೆ. ಇವರಿಗೆ ಇನ್ನೊಬ್ಬರ ಕಣ್ಣೀರಿನ ಶಾಪ ತಾಗುತ್ತದೆ. ಹಾಗಾಗಿ ಇಂಥವರು ಬದುಕಿದ್ದು ಸತ್ತಂತೆ.

ಚಾಣಕ್ಯನ ಈ 5 ಮಾತನ್ನ ಜೀವನದಲ್ಲಿ ಅಳವಡಿಸಿಕೊಂಡರೆ, ನೆಮ್ಮದಿಯ ಜೀವನ ನಿಮ್ಮದಾಗುತ್ತದೆ..

ಹದಿಮೂರನೇಯವರು, ಅತ್ಯಂತ ವೃದ್ಧರು. ಈ ಮಾತು ಕೆಲವರಿಗೆ ತಪ್ಪೆನಿಸಬಹುದು. ಆದ್ರೆ ಕೂರಲು, ನಿಲ್ಲಲೂ ಆಗದೇ, ನಡೆಯಲು ಮಲಗಲೂ ಆಗದೇ, ವಿಪರೀತ ಕಷ್ಟ ಪಡುವ ವೃದ್ಧರು, ತಮ್ಮ ಸಾವನ್ನು ತಾವನೇ ಬಯಸುತ್ತಾರೆ. ಅಲ್ಲದೇ ಅವರ ಮನೆಯವರೂ ಕೂಡ, ವೃದ್ಧರ ಕಷ್ಟವನ್ನು ನೋಡಲಾಗದೇ, ನರಳುತ್ತಾರೆ. ಹಾಗಾಗಿ ಅತೀ ಕಷ್ಟವನ್ನು ಅನುಭವಿಸುವ ವೃದ್ಧರು ಬದುಕಿದ್ದು, ಸತ್ತಂತೆ.

ಹದಿನಾಲ್ಕನೇಯವರು, ಯಾವಾಗಲೂ ರೋಗಗ್ರಸ್ತರಾಗಿರುವವರು. ಯಾರು ಯಾವಾಗಲೂ ರೋಗಗ್ರಸ್ತರಾಗಿರುತ್ತಾರೋ, ಅವರು ಬದುಕಿದ್ದು ಸತ್ತಂತೆ. ಯಾಕಂದ್ರೆ ಅವರು ಪ್ರತೀ ಕ್ಷಣವೂ ನೋವನ್ನು ಅನುಭವಿಸುತ್ತಿರುತ್ತಾರೆ. ಅವರು ಜೀವನದ ಯಾವ ಸುಖವನ್ನೂ ಅನುಭವಿಸಲಾಗುವುದಿಲ್ಲ. ಹಾಗಾಗಿ ಇಂಥವರು ಕೂಡ ಬದುಕಿದ್ದು ಸತ್ತಂತೆ.

- Advertisement -

Latest Posts

Don't Miss