Spiritual News: ಕೆಲವರು ವಸ್ತುಗಳು ಮಾರಾಟ ಮಾಡಲು ಯೋಗ್ಯವಾಗಿರುವುದಿಲ್ಲ. ಅಂಥ ವಸ್ತುಗಳನ್ನು ಮಾರಾಟ ಮಾಡಿದ್ದಲ್ಲಿ, ಪಾಪ ತಗುಲುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಆದರೆ ಕೆಲವರು ಬೇರೆ ದಾರಿ ಇಲ್ಲದೇ, ಉತ್ಪತ್ತಿಗಾಗಿ ಅಂಥ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಹಾಗಾದ್ರೆ ಯಾವ ವಸ್ತುಗಳನ್ನು ಮಾರಾಟ ಮಾಡಬಾರದು ಅಂತಾ ತಿಳಿಯೋಣ ಬನ್ನಿ..
ಬೆಲ್ಲ. ಬೆಲ್ಲವನ್ನು ಹಿಂದೂ ಧರ್ಮದಲ್ಲಿ ಸಮೃದ್ಧಿಯ ಸಂಕೇತವೆಂದು ಹೇಳುತ್ತಾರೆ. ಹಾಗಾಗಿಯೇ ಹೆಚ್ಚಿನ ಪೂಜೆಗಳಲ್ಲಿ ಬೆಲ್ಲವನ್ನು ನೈವೇದ್ಯವನ್ನಾಗಿ ಇಡಲಾಗುತ್ತದೆ. ಬೆಲ್ಲವನ್ನನು ಎಂದಿಗೂ ಮಾರಬಾರದಂತೆ. ಬೆಲ್ಲವನ್ನು ದಾನವಾಗಿ ನೀಡಿದರೆ ಉತ್ತಮ ಅಂತಾ ಹೇಳಲಾಗುತ್ತದೆ.
ಇನ್ನು ಗೋವನ್ನು, ಗೋವಿನ ಹಾಲನ್ನು, ಹಾಲಿನಿಂದ ತಯಾರಿಸಿದ ಪದಾರ್ಥವನ್ನು ಮಾರಾಟ ಮಾಡಬಾರದು ಅಂತಾ ಹೇಳಲಾಗಿದೆ. ಏಕೆಂದರೆ, ಗೋವು ತಾಯಿ ಇದ್ದ ಹಾಗೆ. ಹಾಗಾಗಿ ಗೋವಿನ ಮಾರಾಟ ಮಾಡಬಾರದು. ಇನ್ನು ಗೋವಿನ ಹಾಲು ಕರುವಿಗೆ ಮಾತ್ರ ಸಿಗಬೇಕಾಗಿದ್ದು. ಹಾಗಾಗಿ ಅದನ್ನು ಮತ್ತು ಹಾಲಿನಿಂದ ಮಾಡಿದ ಪದಾರ್ಥವನ್ನು ಮಾರಾಟ ಮಾಡಬಾರದು ಅನ್ನೋ ನಿಯಮವಿದೆ.

