Friday, November 22, 2024

Latest Posts

ತುಳಸಿದಾಸರ ಪ್ರಕಾರ, ಈ 9 ಜನರೊಂದಿಗೆ ಎಂದಿಗೂ ಶತ್ರುತ್ವ ಕಟ್ಟಿಕೊಳ್ಳಬಾರದಂತೆ.. ಭಾಗ 2

- Advertisement -

Spiritual: ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು, ತುಳಸಿದಾಸರ ಪ್ರಕಾರ, ಯಾವ 9 ಜನರ ಬಳಿ ದ್ವೇಷ ಸಾಧಿಸಬಾರದು ಅನ್ನೋದರಲ್ಲಿ 5 ಜನರ ಬಗ್ಗೆ ತಿಳಿಸಿದ್ದೆವು. ಈಗ ಅದರ ಮುಂದುವರಿದ ಭಾಗದಲ್ಲಿ ಇನ್ನುಳಿದ 4 ಜನರ ಬಗ್ಗೆ ತಿಳಿಯೋಣ..

ಶ್ರೀಮಂತರೊಂದಿಗೆ. ಈಗಿನ ಕಾಲದಲ್ಲಿ ದುಡ್ಡಿದ್ದರೆ, ಸರ್ಕಾರವನ್ನು, ಪೊಲೀಸರನ್ನು, ನ್ಯಾಯವನ್ನೂ ಖರೀದಿಸಬಹುದು. ಇವೆಲ್ಲವೂ ಜನಸಾಮಾನ್ಯರ ಪರವಾಗಿ ಇರಬೇಕಾದವುಗಳು. ಆದರೆ ಇಂದಿನ ಕಾಲದಲ್ಲಿ ಇವುಗಳನ್ನು ದುಡ್ಡಿನಿಂದ ಖರೀದಿಸಿ, ಬಡವರಿಗೆ ಸಂತ್ರಸ್ತರಿಗೆ ಮೋಸ ಮಾಡಲಾಗುತ್ತಿದೆ. ಹಾಗಾಗಿ ಶ್ರೀಮಂತರೊಂದಿಗೆ ದ್ವೇಷ ಮಾಡಿ ಪ್ರಯೋಜನವಿಲ್ಲ.

ವೈದ್ಯರೊಂದಿಗೆ. ವೈದ್ಯರಿಗೆ ಯಾವ ಔಷಧಿಯನ್ನು ಕೊಟ್ಟರೆ ನಿಮ್ಮ ಆರೋಗ್ಯ ಸರಿಯಾಗತ್ತೆ. ಯಾವ ಔಷಧಿ ಕೊಟ್ಟರೆ, ನಿಮ್ಮ ಆರೋಗ್ಯ ಹಾಳಾಗತ್ತೆ ಅನ್ನೋದು ವೈದ್ಯರಿಗೆ ಗೊತ್ತಿರುತ್ತದೆ. ಹಾಗಾಗಿ ಅವರ ಬಳಿ ಎಂದಿಗೂ ದ್ವೇಷ ಸಾಧಿಸಬಾರದು ಎನ್ನುತ್ತಾರೆ ತುಳಸಿದಾಸರು.

ಚಾಡಿಕೋರರೊಂದಿಗೆ. ಅಲ್ಲಿಂದ ಇಲ್ಲಿ, ಇಲ್ಲಿಂದ ಅಲ್ಲಿ ಚಾಡಿ ಹೇಳುವವರ ಬಳಿ ಎಂದಿಗೂ ದ್ವೇಷ ಸಾಧಿಸಬಾರದಂತೆ. ಅಂಥವರ ಸಹವಾಸವೇ ಬಿಟ್ಟುಬಿಡಬೇಕೆ ಹೊರತು, ದ್ವೇಷ ಸಾಧಿಸಬಾರದು. ಏಕೆಂದರೆ, ಅವನು ಇತರರ ಬಳಿ ನಿಮ್ಮ ಬಗ್ಗೆ ಇಲ್ಲಸಲ್ಲದ್ದನ್ನ ಹೇಳಿ, ನಿಮ್ಮ ಮರ್ಯಾದೆ ತೆಗೆಯಬಹುದು. ಅಥವಾ ಸಂಬಂಧ ಕೆಡಿಸಬಹುದು.

ಅಡುಗೆ ಮಾಡುವವರೊಂದಿಗೆ. ರಕ್ತ ಸಂಬಂಧಿಕರು ಬಿಟ್ಟು ನಿಮ್ಮ ಬಳಿ ಬೇರೆ ಅಡುಗೆಯವರಿದ್ದರೆ, ನೀವು ಅವರನ್ನು ಪ್ರೀತಿಯಿಂದ ಕಾಣಬೇಕು ಎನ್ನುತ್ತಾರೆ ತುಳಸಿದಾಸರು. ಏಕೆಂದರೆ, ಇವರ ಬಳಿ ದ್ವೇಷ ಸಾಧಿಸಿದ್ದಲ್ಲಿ, ನಿಮ್ಮ ಊಟದಲ್ಲಿ ಏನಾದರು ಬೆರೆಸಿ, ನಿಮ್ಮ ಆರೋಗ್ಯ ಹಾಳು ಮಾಡುವ ಸಾಧ್ಯತೆ ಇರುತ್ತದೆ. ಹಾಗಂತ ಎಲ್ಲರೂ ಅದೇ ರೀತಿ ಇರುವುದಿಲ್ಲ. ಆದರೂ ನೀವು ಅವರೊಂದಿಗೆ ಪ್ರೀತಿಯಿಂದ ಇರುವುದು ಉಚಿತ.

ಶಾಂತ ಸ್ವರೂಪಿ ಸೀತಾದೇವಿ ರಣಚಂಡಿ ಅವತಾರ ತಾಳಲು ಕಾರಣವೇನು..?

ನೀವು ಶ್ರೀಮಂತರಾಗಬೇಕು ಎಂದಲ್ಲಿ, ವಿದುರನ ಈ ಮಾತು ಕೇಳಿ..

ಮುಟ್ಟಾದ ಮೂರು ದಿನಗಳವರೆಗೂ ಹೆಣ್ಣು ಮಕ್ಕಳು ತಲೆ ಸ್ನಾನ ಮಾಡಬಾರದು.. ಯಾಕೆ ಗೊತ್ತಾ..?

- Advertisement -

Latest Posts

Don't Miss