ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ..ಚಿತ್ರದ ಪೋಸ್ಟರ್ ರಿಲೀದಾಗಲಿಂದಲೂ ಅಭಿಮಾನಿಗಳಿಗೆ ಕ್ರಾಂತಿ ಚಿತ್ರದ ಮೇಲಿನ ಕುತೂಹಲ ಹೆಚ್ಚಾಯ್ತು..ಅದರಲ್ಲೂ ಟೀಸರ್ ರಿಲೀಸ್ ಬಳಿಕವಂತೂ ಕುತೂಹಲ ಗಗನಕ್ಕೇರಿತು..ಇದೀಗ ಸ್ವತಃ ನಟ ದರ್ಶನ್ ತಮ್ಮ ಸೆಲೆಬ್ರೆಟಿಗಳ ಜೊತೆ ಕ್ರಾಂತಿ ಚಿತ್ರದ ಅಪ್ಡೇಟ್ ನ ಹಂಚಿಕೊಂಡಿದ್ದಾರೆ.
ಪೋಲ್ಯಾಂಡ್‌ನಲ್ಲಿ ಕ್ರಾಂತಿ ಸಿನಿಮಾದ ಶೂಟಿಂಗ್ ನಡೆಯುತ್ತಿರುವ ಬಗ್ಗೆ ನಟ ದರ್ಶನ್ ಟ್ವೀಟ್ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಚಿತ್ರದಲ್ಲಿನ ತಮ್ಮ ಹೊಸ ಲುಕ್ ಫೋಟೊವನ್ನು ಹಂಚಿಕೊಂಡಿರುವ ಅವರು, ‘ಕ್ರಾಂತಿ ಚಿತ್ರದ ಶೂಟಿಂಗ್ ಪೋಲ್ಯಾಂಡ್‌ನಲ್ಲಿ ಬಿರುಸಿನಿಂದ ಸಾಗುತ್ತಿದೆ. ನಲ್ಮೆಯ ಸೆಲೆಬ್ರಿಟಿಗಳು ತೋರುತ್ತಿರುವ ಪ್ರೀತಿಗೆ ನಾ ಸದಾ ಚಿರಋಣಿ‘ ಎಂದು ದರ್ಶನ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ವಿ. ಹರಿಕೃಷ್ಣ ಚಿತ್ರಕ್ಕೆ ಆ್ಯಕ್ಷನ್ ಕಟ್ಹೇಳೋದರ ಜೊತೆಗೆ ಮ್ಯೂಸಿಕ್ಕಂಪೋಸ್ಮಾಡ್ತಿದ್ದಾರೆ. ಇನ್ನು ಸಿನಿಮಾದ ಕೆಲವು ಭಾಗವ ಚಿತ್ರೀಕರಣ ಮಾತ್ರವೇ ಬಾಕಿ ಇದ್ದು, ಸಾಂಗ್ ಚಿತ್ರೀಕರಣಕ್ಕಾಗಿ ಸಿನಿಮಾತಂಡ ಸದ್ಯ ವಿದೇಶಕ್ಕೆ ಹಾರಿದೆ. ಈ ಬಗ್ಗೆ ನಟ ದರ್ಶನ್ ಟ್ವೀಟ್ ಮಾಡಿ ತಿಳಿದ್ದಾರೆ. ದರ್ಶನ್ ಜೊತೆ ಮತ್ತೊಮ್ಮೆ ಇಲ್ಲಿ ಬುಲ್ ಬುಲ್ ಬೆಡಗಿ ರಚಿತಾ ರಾಮ್ ನಾಯಕಿಯಾಗಿ ನಟಿಸಿದ್ದಾರೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಕ್ರಾಂತಿ ತೆರೆಕಾಣಬೇಕಿತ್ತು..ಕೊರೋನಾ ಕಾರಣದಿಂದ ಶೂಟಿಂಗ್ ತಡವಾಯಿತು. ಇದೀಗ ಜುಲೈ ಅಂತ್ಯದೊಳಗೆ ಶೂಟಿಂಗ್ ಮುಗಿದರೆ, ಈ ವರ್ಷಾಂತ್ಯದಲ್ಲಿ ಡಿಬಾಸ್ ಕ್ರಾಂತಿ ಅದ್ಧೂರಿಯಾಗಿ ತೆರೆಕಾಣಲಿದೆ. ಈ ಬಗ್ಗೆ ಸದ್ಯಲ್ಲೇ ಚಿತ್ರತಂಡ ಅಧಿಕೃತ ಮಾಹಿತಿ ನೀಡಲಿದ್ದು, ಟ್ರೈಲರ್ ಕೂಡ ರಿಲೀಸ್ ಬಗ್ಗೆಯೂ ಮಾಹಿತಿ ಹೊರ ಬೀಳಲಿದೆ.