- Advertisement -
www.karnatakatv.net : ಬೆಂಗಳೂರು : ಹಿರಿಯ ನಟ ದೊಡ್ಡಣ್ಣ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ದಿಢೀರನೆ ಅಸ್ಪಸ್ಥಗೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಾಗಿರೊ ದೊಡ್ಡಣ್ಣ ಚಿಕಿತ್ಸೆ ಪಡೀತಿದ್ದಾರೆ.
ಈ ಕುರಿತು ಮಾಹಿತಿ ನೀಡಿರೋ ಜಯದೇವ ಆಸ್ಪತ್ರೆ ವೈದ್ಯ ಮಂಜುನಾಥ್, ದೊಡ್ಡಣ್ಣ ಅವರ ಹೃದಯದ ಬಡಿತ ಕಡಿಮೆ ಇತ್ತು. ಹೃದಯದ ಬಡಿತ ಕಡಿಮೆ ಇದ್ದಾಗ ಪ್ರಜ್ಞೆ ತಪ್ಪುವ ಸಾಧ್ಯತೆ ಇರುತ್ತದೆ ಹೀಗಾಗಿ ಕೃತಕ ಫೇಸ್ ಮೇಕರ್ ಮೂಲಕ ಚಿಕಿತ್ಸೆ ನೀಡ್ತಿದ್ದೇವೆ. ಹೃದಯಾಘಾತದಂತಹ ಸಮಸ್ಯೆ ಏನೂ ಇಲ್ಲ ಅವರು ಈಗ ಆರಾಮಾಗಿ ಇದ್ದಾರೆ. ಇನ್ನೂ ಮೂರು ದಿನಗಳು ಅವರಿಗೆ ಚಿಕಿತ್ಸೆ ಮುಂದುವರಿಯುತ್ತೆ ಅಂತ ಹೇಳಿದ್ದಾರೆ.
ಮೂಲಗಳ ಪ್ರಕಾರ ಸದ್ಯಕ್ಕೆ ನಟ ದೊಡ್ಡಣ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಅಂತ ಹೇಳಲಾಗ್ತಿದೆ.
ಕರ್ನಾಟಕ ಟಿವಿ – ಬೆಂಗಳೂರು
- Advertisement -