ನಟ ಪ್ರಮೋದ್ ಶೆಟ್ಟಿ ಕರ್ನಾಟಕ ಟಿವಿ ಜೊತೆ ಸಾಕಷ್ಟು ಮಾತನಾಡಿದ್ದು, ತಮ್ಮ ಸಿನಿಮಾ ವಿಷಯಗಳ ಬಗ್ಗೆ ತುಂಬಾ ವಿಷಯಗಳನ್ನ ಹೇಳಿಕೊಂಡಿದ್ದಾರೆ. ಇಂದು ಪ್ರಮೋದ್ ಸ್ಯಾಂಡಲ್‌ವುಡ್ ನಟರ ಬಗ್ಗೆಯೂ ಮಾತನಾಡಿದ್ದು, ಅಪ್ಪು ಸರ್ ಜೊತೆ ನಟಿಸಲಿಕ್ಕೆ ಆಗಲಿಲ್ಲವಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಥಾಸಂಗಮ ಸಿನಿಮಾ ಆಡಿಯೋ ರಿಲೀಸ್ ದಿನ ಅವರನ್ನ ಕೊನೆಯದಾಗಿ ನಾನು ಭೇಟಿಯಾಗಿದ್ದು, ಆವಾಗ ಅವರು ನಾವಿಬ್ಬರು ಖಂಡಿತ ಜೊತೆಗೆ ನಟಿಸೋಣ ಎಂದು ಹೇಳಿದ್ದರು. ಆದ್ರೆ ನನಗೆ ಅವಕಾಶ ಸಿಕ್ಕರೂ ಕೂಡ, ಅವರೊಂದಿಗೆ ನಾನು ನಚಿಸಲು ಆಗಲಿಲ್ಲ. ನನಗೆ ಅವರೊಂದಿಗೆ ನಟಿಸಲು ಯೊಗ್ಯತೆ ಇಲ್ಲ ಎಂದು ಪ್ರಮೋದ್ ಶೆಟ್ಟಿ ಬೇಸರ ಪಟ್ಟಿದ್ದಾರೆ. ಅಲ್ಲದೇ ನಾನು ಅಪ್ಪು ಸರ್ ಸಾವಿನ ಸುದ್ದಿಯನ್ನ ನಂಬೇ ಇರಲಿಲ್ಲ. ಆ ಮಾತು ಕೇಳಿ ಸಿಟ್ಟು ಬಂದಿತ್ತು. ನಂತರ ಆ ಸುದ್ದಿ ನಿಜವೆಂದು ಗೊತ್ತಾದಾಗ ತುಂಬಾ ಬೇಜಾರಾಗಿತ್ತು.
ನಾನು ಯಾರ ಅಂತ್ಯಕ್ರಿಯೆಗೂ ಅಷ್ಟು ದಿನ ಕಾದಿರಲಿಲ್ಲ.ಮೂರು ಮೂರು ಬಾರಿ ಹೋಗಿ, ಅಪ್ಪು ಸರ್‌ನ ನೋಡಿ, ಕೊನೆಗೆ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದೆ. ನಾನು ಮನೆಗೆ ಬಂದು ರೂಮನ್ನ ಲಾಕ್ ಮಾಡಿ, ಅಳ್ತಾ ಇದ್ದೆ. ನಂತರ ನನ್ನ ಪತ್ನಿ ನನ್ನನ್ನು ಸಮಾಧಾನ ಮಾಡಿದ್ಲು. ಆಗ ಆಕೆಯ ಕಣ್ಣಲ್ಲೂ ನೀರಿತ್ತು. ನನ್ನ ಅಮ್ಮ ಕಾಲ್ ಮಾಡಿ, ಮನೆಯವ್ರೇ ಯಾರೋ ಹೋದ್ರೂ ಅನ್ನುವಷ್ಟು ಬೇಸರವಾಗ್ತಿದೆ ಅಂತಾ ಹೇಳಿದ್ರು ಅನ್ನೋದನ್ನ ನೆನೆದು ಬೇಸರ ಪಟ್ಟಿದ್ದಾರೆ ಪ್ರಮೋದ್.
ಇನ್ನು ಶಿವಣ್ಣನ ಬಗ್ಗೆ ಮಾತನಾಡಿದಾಗ, ನಾವು ಈಗಲೇ ಸುಸ್ತು ಅಂತಾ ಕೂರ್ತೇವೆ. ಆದ್ರೆ ಶಿವಣ್ಣ ಅಷ್ಟು ವಯಸ್ಸಾದ್ರೂ ಎನರ್ಜಿಟಿಕ್ ಆಗಿ ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸ್ತಾರೆ. ಅವರೊಂದಿಗೆ ಸಿನಿಮಾದಲ್ಲಿ ನಟಿಸೋಕ್ಕೆ ಚಾನ್ಸ್ ಸಿಗತ್ತಾ ಅಂತಾ ಕಾಯ್ತಾ ಇದ್ದೀನಿ. ಸಿಕ್ರೆ ಗ್ಯಾರಂಟಿ ಆ್ಯಕ್ಟ್ ಮಾಡ್ತೀನಿ ಅಂದಿದ್ದಾರೆ ಪ್ರಮೋದ್.
ಡಿ ಬಾಸ್ ಬಗ್ಗೆ ಕೇಳಿದಾಗ, ಹರಿಕಥೆ ಅಲ್ಲ ಗಿರಿಕಥೆ ಸಿನಿಮಾ ಶೂಟಿಂಗ್‌ಗಾಗಿ ನಾವು ಮೈಸೂರಿಗೆ ಹೋದಾಗ, ಅವರನ್ನು ಭೇಟಿ ಮಾಡಿದ್ದೆ. ನಾನು ರಿಷಬ್ ಅವರಲ್ಲಿಗೆ ಹೋಗಿದ್ವಿ. ಅವರನ್ನ ನಾವು ಮೊದಲ ಬಾರಿ ಭೇಟಿಯಾಗಿದ್ದೀವಿ ಅಂತಾ ಅನ್ನಿಸಲೇ ಇಲ್ಲ. ಅಷ್ಟು ಚಂದವಾಗಿ ಅವರು ನಮ್ಮನ್ನ ಟ್ರೀಟ್ ಮಾಡಿದ್ರು. ತಾವೇ ನಮಗೆ ನಾನ್‌ವೆಜ್ ಅಡುಗೆ ಬಡಿಸಿದ್ರು. ಅಲ್ಲದೇ ನಿಮಗೆ ಬಿರಿಯಾನಿ ಇಷ್ಟವಾಯ್ತಾ ಶೆಟ್ರೆ, ಅಂತಾ ಕೇಳಿ, ಅವರ ಹುಡುಗನನ್ನು ಕರೆದು, ಇವರ ಸೆಟ್‌ನಲ್ಲಿ ಎಷ್ಟು ಜನ ಇದ್ದಾರೆ, ಅಷ್ಟು ಜನಕ್ಕೆ ಬಿರಿಯಾನಿ, ಮಟನ್, ಕಬಾಬ್ ಕಳಿಸಿಕೊಡಿ ಅಂತಾ ಹೇಳಿದ್ರಂತೆ.
ಇನ್ನು ಸುದೀಪ್ ಬಗ್ಗೆ ಮಾತನಾಡಿದಾಗ, ಅವರ ಆ್ಯಟಿಟ್ಯೂಡ್ ಕಂಡ್ರೆ ಖುಷಿಯಾಗತ್ತೆ. ಅದನ್ನ ನಾವು ಅಳವಡಿಸಿಕೊಳ್ಳಬೇಕು ಅಂತಾ ಅನ್ನಿಸುತ್ತೆ. ನಾವು ಅವರನ್ನ ಚೆನ್ನೈನಲ್ಲಿ ಭೇಟಿಯಾಗಿದ್ವಿ, ಅವರು ನೀವು ನಮ್ಮ ಗೆಸ್ಟ್ ನೀವು ಏಳ್ಬಾರ್ದು. ನಾನೇ ನಿಮ್ಮ ಆತಿಥ್ಯ ಮಾಡ್ತೀನಿ ಅಂತಾ ಹೇಳಿ, ಬರ್ಗರ್ ತಟ್ಟೆ ತಂದಿಟ್ಟರಂತೆ. ಅಷ್ಟು ಸಿಂಪಲ್ ಅವ್ರು. ಅಲ್ಲದೇ ಹೊಸಬರನ್ನ ತುಂಬಾ ಸಪೋರ್ಟ್ ಮಾಡ್ತಾರೆ ಅಂತಾರೆ ಪ್ರಮೋದ್.