ಬೆಂಗಳೂರು: ಸರ್ಕಾರಿ ಶಾಲೆಯೊಂದನ್ನು ದತ್ತು ಪಡೆದುಕೊಳ್ಳೋ ಮೂಲಕ ಡೈನಮಿಕ್ ಪ್ರಿನ್ಸ್ ನಟ ಪ್ರಜ್ವಲ್ ದೇವರಾಜ್ ತಮ್ಮ ಹುಟ್ಟು ಹಬ್ಬವನ್ನು ಅರ್ಥಗರ್ಭಿತವಾಗಿ ಆಚರಿಸಿಕೊಂಡಿದ್ದಾರೆ.
ಸರ್ಕಾರಿ ಶಾಲೆಯೊಂದನ್ನು ದತ್ತು ಪೆಡಯೋದಕ್ಕೆ ಸಂಸ್ಥೆಯೊಂದರ ಜೊತೆ ಕೈಜೋಡಿಸಿದ್ದೇನೆ ಅಂತ ಹೇಳಿದ್ದ ಪ್ರಜ್ವಲ್ ತಾವು ಹೇಳಿದಂತೆಯೇ ಉತ್ತರ ಕರ್ನಾಟಕದ ಶಾಲೆಯೊಂದನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡಲಿದ್ದಾರೆ. ಈ ಮೂಲಕ ಪ್ರಜ್ವಲ್ ಸಮಾಜದತ್ತ ತಮ್ಮ ಕಾಳಜಿ ತೋರುತ್ತಾ ತಮ್ಮ 32ನೇ ಹುಟ್ಟಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಮ್ಮ ಹುಡ್ಗ ಪ್ರಜ್ಜು ಒಂದು ಕನ್ನಡ ಸರ್ಕಾರಿ ಶಾಲೆಯನ್ನು ದತ್ತು ಪಡೆದಿರುವ ಸುದ್ಧಿ ಕೇಳಿ ತುಂಬಾನೇ ಖುಷಿಯಾಯ್ತು. ಇಂಥ ಸಾಮಾಜಿಕ ಕಳಕಳಿಯ ಕೆಲಸಗಳಲ್ಲಿ ಹೀಗೆ ಸದಾ ಮುಂಚೂಣಿಯಲ್ಲಿರಲಿ ಎಂದು ಹಾರೈಸುತ್ತೇನೆ ಅಂತ ಟ್ವೀಟ್ ಮಾಡಿದ್ದಾರೆ.
ಮತ್ತೆ ಸುದ್ದಿಯಾದ್ರು ಪ್ರಕಾಶ್ ರಾಜ್..! ಮಿಸ್ ಮಾಡದೇ ಈ ವಿಡಿಯೋ ನೋಡಿ