Tuesday, July 16, 2024

Latest Posts

ನಟಿ ರಚಿತಾ ರಾಮ್ ಮೇಲೆ ಉಪ್ಪಿ ಪತ್ನಿ ಪ್ರಿಯಾಂಕ ಸಿಟ್ಟು…!

- Advertisement -

ಮುಂದಿನ ವಾರ ತೆರೆ ಕಾಣಲಿರೋ ಉಪೇಂದ್ರ ನಟನೆಯ ಐಲವ್ ಯೂ ಚಿತ್ರ ಇದೀಗ ವಿವಾದಕ್ಕೆ ಕಾರಣವಾಗಿದೆ. ಚಿತ್ರದಲ್ಲಿನ ರೊಮ್ಯಾಂಟಿಕ್  ಹಾಡಿಗೆ ಸಂಬಂಧಿಸಿದಂತೆ ಚಿತ್ರದ ನಾಯಕಿ ರಚಿತಾ ರಾಮ್ ಮೇಲೆ ನಟ ಉಪೇಂದ್ರ ಪತ್ನಿ ಪ್ರಿಯಾಂಕ ಸಿಟ್ಟಾಗಿದ್ದಾರೆ.

ಆರ್ ಚಂದ್ರು ನಿರ್ದೇಶನದಲ್ಲಿ ಮೂಡಿಬರುತ್ತಿರೋ ಈ ಚಿತ್ರದ ಹಾಡೊಂದರಲ್ಲಿ ಉಪೇಂದ್ರ ಮತ್ತು ನಟಿ ರಚಿತಾ ರಾಮ್ ರೊಮ್ಯಾನ್ಸ್ ಮಾಡೋ ದೃಶ್ಯಗಳಿವೆ. ಈ ಕುರಿತಂತೆ ಸಂದರ್ಶನಗಳನ್ನು ನೀಡಿದ್ದ ರಚಿತಾ ರಾಮ್, ಈ ಹಾಡು ಉಪೇಂದ್ರರವರೇ ನಿರ್ದೇಶನ ಮಾಡಿದ್ರಿಂದ ಯಾವುದೇ ಮುಜುಗರವಿಲ್ಲದೆ ನಾನು ನಟಿಸೋದಕ್ಕೆ ಕಾರಣವಾಯ್ತು ಅಂತ ಹೇಳಿಕೊಂಡಿದ್ರು. ರಚಿತಾ ನೀಡಿದ್ದ ಈ ಹೇಳಿಕೆ ಉಪೇಂದ್ರ ಪತ್ನಿ ಪ್ರಿಯಾಂಕಾರ ಪಿತ್ತ ನೆತ್ತಿಗೇರಿಸಿದೆ.

ಚಿತ್ರದ ನಿರ್ದೇಶಕ ಚಂದ್ರು, ಕೊರಿಯೋಗ್ರಫರ್ ಚಿನ್ನಿ ಪ್ರಕಾಶ್. ಹೀಗಿರೋವಾಗ ರಚಿತಾ ರಾಮ್ ಪದೇ ಪದೇ ಯಾಕೆ ಉಪೇಂದ್ರ ಈ ಹಾಡನ್ನು ನಿರ್ದೇಶಿಸಿದ್ದಾರೆ ಅಂತ ಯಾಕೆ ಹೇಳಬೇಕು ಅಂತ ಸಿಟ್ಟಾಗಿದ್ದಾರೆ. ಅಲ್ಲದೆ ಚಿತ್ರದಲ್ಲಿ ಹೇಗೆ ನಟಿಸಿದ್ದಾರೆ, ಅವರ ಪಾತ್ರದ ಬಗ್ಗೆ ಬೇಕಾದ್ರೆ ಏನಾದ್ರೂ ಹೇಳಿಕೊಳ್ಳಲಿ ಆದ್ರೆ ರಚಿತಾ ಪದೇ ಪದೇ ಪತಿಯ ಹೆಸರು ಯಾಕೆ ಪ್ರಸ್ತಾಪ ಮಾಡಬೇಕು ಅಂತ ಪ್ರಿಯಾಂಕಾ ಗರಂ ಆಗಿದ್ದಾರೆ.

ಅಲ್ಲದೆ ಪ್ರಿಯಾಂಕಾಗೆ ಇದು ಕೌಟುಂಬಿಕ ಚಿತ್ರ ಅಂತ ಹೇಳಲಾಗಿತ್ತಂತೆ. ಆದ್ರೆ ಏಕಾಏಕಿ ಚಿತ್ರದ ಟ್ರೇಲರ್ ನೋಡಿದ ಮೇಲೆ ಮಾತ್ರ ಪ್ರಿಯಾಂಕಾಗೆ ರೊಮ್ಯಾಂಟಿಕ್ ಸೀನ್ ಇದೆ ಅಂತ ಗೊತ್ತಾಯ್ತಂತೆ ಇದು ಪ್ರಿಯಾಂಕ ಸಿಟ್ಟಿಗೆ ಮುಖ್ಯ ಕಾರಣವಾಗಿದೆ.

ಪ್ರಿಯಾಂಕಾ ಆಕ್ರೋಶಕ್ಕೆ ರಚಿತಾ ಕೊಟ್ಟ ಉತ್ತರವೇನು?? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=EEZWkVDPFlI

- Advertisement -

Latest Posts

Don't Miss