Movie News: ವೀರ್ ಸಾವರ್ಕರ್ ಚಿತ್ರದಲ್ಲಿ ಸಾವರ್ಕರ್ ಪತ್ನಿಯಾಗಿ ನಟಿಸಲು ನಟಿ ಅಂಕಿತಾ ಲೋಖಂಡೆ ಸಂಭಾವನೆಯೇ ಪಡೆದಿಲ್ಲವೆಂದು ಚಿತ್ರತಂಡ ಹೇಳಿದೆ.
ಅಂಕಿತಾ ಲೋಖಂಡೆ ಬಿಗ್‌ಬಾಸ್‌ಗೆ ಬಂದು ಹೆಚ್ಚು ಪ್ರಸಿದ್ದಿ ಪಡೆದಿದ್ದರು. ಯಾಕಂದ್ರೆ ಇವರು ತಮ್ಮ ಪತಿಯೊಂದಿಗೆ ಶೋಗೆ ಬಂದಿದ್ದು, ಇಬ್ಬರು ಪ್ರತಿದಿನ ಪರಸ್ಪರ ಕಿತ್ತಾಡಿಕೊಂಡೇ, ಶೋಗೆ ಟಿಆರ್‌ಪಿ ತಂದುಕೊಟ್ಟಿದ್ದರು. ಚೆನ್ನಾಗಿ ಎಂಟರ್‌ಟೇನ್‌ಮೆಂಟ್ ಕೊಡುವ ಈ ನಟಿಗೆ ಫ್ಯಾನ್ಸ್ ಕೂಡಾ ತುಂಬಾ ಜನರಿದ್ದಾರೆ. ಹಾಗಾಗಿ ಈಕೆಯನ್ನ ಆ ಅಭಿಮಾನಿಗಳೇ, ಬಿಗ್‌ಬಾಸ್ ಫಿನಾಲೆವರೆಗೆ ಕೊಂಡೊಯ್ದಿದ್ದರು. ಆದರೆ ಟ್ರೋಫಿ ಗೆಲ್ಲಲಾಗಲಿಲ್ಲ.
ಇದಾದ ಬಳಿಕ, ಅಂಕಿತಾ ನಟಿಸಿದ್ದ ವೀರ್ ಸಾವರ್ಕರ್ ಚಿತ್ರ ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ನಟಿಸುವುದಕ್ಕಿಂತ ಮುನ್ನ ನಟಿ, ತಾನು ಈ ಸಿನಿಮಾದಲ್ಲಿ ನಟಿಸಬೇಕಂದ್ರೆ, ಒಂದು ಷರತ್ತಿದೆ. ಅದೇನಂದ್ರೆ, ನಾನು ಈ ಸಿನಿಮಾದಲ್ಲಿ ಸಾವರ್ಕರ್ ಪತ್ನಿಯ ಪಾತ್ರ ನಿರ್ವಹಿಸಲು ಸಂಭಾವನೆ ತೆಗೆದುಕೊಳ್ಳುವುದಿಲ್ಲ ಎಂದಿದ್ದರಂತೆ. ಇದಕ್ಕೆ ಒಪ್ಪಿದ ಬಳಿಕ, ಅಂಕಿತಾ ಶೂಟಿಂಗ್‌ಗೆ ಬಂದರು ಎಂದು ವೀರ್ ಸಾವರ್ಕರ್ ಸಿನಿಮಾ ತಂಡ ಹೇಳಿದೆ.
ಇನ್ನು ವೀರ್ ಸಾವರ್ಕರ್ ಪಾತ್ರದಲ್ಲಿ ನಟಿಸಿದ್ದ ರಣ್ದೀಪ್ ಹೂಡಾ, ಪಾತ್ರಕ್ಕಾಗಿ ತೂಕ ಇಳಿಸಿಕೊಂಡಿದ್ದರು. ಈ ಮೂಲಕ ಅವರ ಮೇಲಿನ ಅಭಿಮಾನ ಹೆಚ್ಚಾಗಿ, ಅಭಿಮಾನಿಗಳು ಹೆಚ್ಚಾಗಿದ್ದರು. ಇದೀಗ, ಅಂಕಿತಾ ನಟನೆ ಮತ್ತು ಅವರ ನಿರ್ಧಾರಕ್ಕೂ ಹಲವರು ಫಿದಾ ಆಗಿದ್ದು, ಅಂಕಿತಾ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಿದೆ.
ಮದುವೆಯಾಗಿಲ್ಲ.. ಎಂಗೇಜ್‌ಮೆಂಟ್ ಅಷ್ಟೇ ಆಗಿದ್ದು ಎಂದು ಸ್ಪಷ್ಟನೆ ನೀಡಿದ ನಟಿ ಅದಿತಿ ರಾವ್ ಹೈದರಿ
ಕಾಂಗ್ರೆಸ್ ನಾಯಕಿಯ ವಿವಾದಾತ್ಮಕ ಹೇಳಿಕೆಗೆ ತಿರುಗೇಟು ಕೊಟ್ಟ ಕಂಗನಾ ರಾಣಾವತ್
ಬೆಂಗಳೂರಿನ ನೀರಿನ ಸಮಸ್ಯೆಗೆ ಕನ್ನಡದಲ್ಲೇ ಪರಿಹಾರ ತಿಳಿಸಿದ ಮೆಗಾಸ್ಟಾರ್ ಚಿರಂಜೀವಿ