- Advertisement -
Bollywood News: ಟೆಸ್ಲಾ ಓನರ್ ಆಗಿರುವ ಪ್ರಪಂಚ ನಂಬರ್ 1 ಶ್ರೀಮಂತ ಎಲಾನ್ ಮಸ್ಕ್ ತಾಯಿಯೊಂದಿಗೆ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಮುಂಬೈನಲ್ಲಿರುವ ಪ್ರಸಿದ್ಧ ಸಿದ್ಧಿವಿನಾಯಕ ಮಂದಿರಕ್ಕೆ ಭೇಟಿ ನೀಡಿದ್ದಾರೆ.
ಎಲಾನ್ ಮಸ್ಕ್ ತಾಾಯಿ ಮಾಯೆ ಮಸ್ಕ್ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿರುವ ಜಾಕ್ವೆಲಿನ್ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಾಯೆ ಮಸ್ಕ್ ತಮ್ಮ ಪುಸ್ತಕವೊಂದನ್ನು ಲಾಂಚ್ ಮಾಡಲು ಬಯಸಿದ್ದು, ಈ ಕಾರಣಕ್ಕಾಗಿ ದೇವರ ಆಶೀರ್ವಾದ ಪಡೆಯಲು ಬಂದಿದ್ದರು.
ಈಗ ಕೆಲ ದಿನಗಳ ಹಿಂದಷ್ಟೇ ಜಾಕ್ವೆಲಿನ್ ಫರ್ನಾಂಡೀಸ್ ಅವರ ಅಮ್ಮ ಅನಾರೋಗ್ಯ ಕಾರಣದಿಂದ ನಿಧನರಾದರು. ಅಲ್ಲದೇ, ಬಾಯ್‌ಫ್ರೆಂಡ್ ಕಾರಣದಿಂದ ಹಲವುಬಾಾರಿ ವಿಚಾರಣೆಯನ್ನೂ ಅವರು ಎದುರಿಸಬೇಕಾಯಿತು. ಈ ನೋವನ್ನು ಮರೆಯಲು ಜಾಕ್ವೆಲಿನ್ ಹೀಗೆ ಆಪ್ತರೊಂದಿಗೆ ಸಮಯ ಕಳೆಯುತ್ತಿದ್ದಾರೆ.
- Advertisement -