Movie News: ಹಿಂದೂ, ಕ್ರಿಶ್ಚಿಯನ್ ಧರ್ಮದ ಪ್ರಕಾರ ವಿವಾಹವಾಗಿರುವ ಬಾಲಿವುಡ್ ನಟ ಅಮೀರ್ ಖಾನ್ ಮಗಳು ಇರಾ ಖಾನ್, ಮದುವೆ ರಿಸೆಪ್ಶನ್ ನಿನ್ನೆ ಮುಂಬೈನ ಬಾಂದ್ರಾದಲ್ಲಿ ನಡೆಯಿತು.
ಅಮೀರ್ ಖಾನ್ ಮತ್ತು ಅವರ ಮೊದಲ ಪತ್ನಿ ರೀನಾ ದತ್ತಾ ಮಗಳಾಗಿರುವ ಇರಾ ಖಾನ್, ನುಪೂರ್ ಶಿಖರೆ ಎಂಬುವವರನ್ನು ಲವ್ ಮಾಡಿ ಮದುವೆಯಾಗಿದ್ದಾರೆ. ಇವರ ರಿಸೆಪ್ಶನ್ ಕಾರ್ಯಕ್ರಮ ನಿನ್ನೆ ಮುಂಬೈನ ಬಾಂದ್ರಾದಲ್ಲಿ ನಡೆದಿದ್ದು, ಹಲವು ಬಾಲಿವುಡ್ ತಾರೆಗಳು, ಕ್ರಿಕೇಟ್ ತಾರೆಯರು, ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಈ ಕಾರ್ಯಕ್ರಮಕ್ಕೆ ಕಂಗನಾ ರಾಣಾವತ್ ಕೂಡ, ಚೆಂದದ ಘಾಗ್ರಾ ಛೋಲಿ ಧರಿಸಿ ಹಾಜರಾಗಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಫೋಟೋ ಕ್ಲಿಕ್ಕಿಸಲು ಬಂದಿದ್ದ ಪಾಪರಾಜಿಗಳು, ಕಂಗನಾರನ್ನು ನೋಡಿ, ಜೈ ಶ್ರೀರಾಮ್ ಎಂದು ವಿಶ್ ಮಾಡಿದ್ದು, ಇದಕ್ಕೆ ಪ್ರೀತಿಯಿಂದ ಪ್ರತಿಕ್ರಿಯಿಸಿರುವ ಕಂಗನಾ, ಜೈ ಶ್ರೀರಾಮ್ ಎಂದಿದ್ದಾರೆ. ಅಲ್ಲದೇ ನೀವೆಲ್ಲ ಅಯೋಧ್ಯಾಗೆ ಬರಲಿದ್ದೀರಾ ಎಂದು ಪಾಪರಾಜಿಗಳಿಗೆ ಕಂಗನಾ ಪ್ರಶ್ನಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಖಾಸಗಿ ವೀಡಿಯೋ ಲೀಕ್ ಪ್ರಕರಣ: ನಟಿ ರಾಖಿ ಸಾವಂತ್ ಜಾಮೀನು ಅರ್ಜಿ ರದ್ದು..
ಕಂಗನಾ ಜೊತೆ ಕಾಣಿಸಿಕೊಂಡ ವ್ಯಕ್ತಿ ಯಾರು..? ಪ್ರಶ್ನಿಸುತ್ತಿದ್ದಾರೆ ನೆಟ್ಟಿಗರು..