Movie News: ಅಯೋಧ್ಯೆ ರಾಮಮಂದಿರ ಉದ್ಘಾಟನೆ ದಿನ ಹಲವು ಗರ್ಭಿಣಿಯರು, ತಮ್ಮ ಮಕ್ಕಳಿಗೆ ಜನ್ಮ ನೀಡಬೇಕು ಎಂದು ಬಯಸಿದ್ದರು. ಅದರಲ್ಲಿ ಹಲವರ ಕನಸು ಈಡೇರಿದೆ. ಅದೇ ರೀತಿ ನಟಿ ಕಾವ್ಯಾ ಗೌಡ ಕೂಡ ಜನವರಿ 22ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಈ ಬಗ್ಗೆ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿರುವ ಕಾವ್ಯಾ ಗೌಡ, ತಾವು ಹೆಣ್ಣು ಮಗುವಿಗೆ ಜನ್ಮ ನೀಡಿರುವುದಾಗಿ, ಸಂತಸ ವ್ಯಕ್ತಪಡಿಸಿದ್ದಾರೆ. ಪ್ಯಾಟೆ ಮಂದಿ ಕಾಡಿಗೆ ಬಂದ್ರು ರಿಯಾಲಿಟಿ ಶೋ ಮೂಲಕ, ಸಿನಿ ದುನಿಯಾಗೆ ಬಂದಿದ್ದ ಕಾವ್ಯಾ ಗೌಡ, ರಾಧಾ ಮಿಸ್ ಎಂದೇ ಫೇಮಸ್ ಆದವರು.
ಬಳಿಕ ಕೆಲ ಆ್ಯಡ್‌ಗಳನ್ನು ಮಾಡಿ, ಉದ್ಯಮಿ ಸೋಮಶೇಖರ್ ಜೊತೆಗೆ 2021ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಬಳಿಕ ಬಣ್ಣದ ಲೋಕದಿಂದ ದೂರ ಉಳಿದಿದ್ದ ಕಾವ್ಯಾ, ಕೆಲ ದಿನಗಳ ಹಿಂದೆ ತಾವು ತಾಯಿಯಾಗುತ್ತಿರುವ ಸಂಬ್ರಮವನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಅಲ್ಲದೇ ರಾಧಿಕಾ ಪಂಡಿತ್ ಜೊತೆ ಒಂದು ಫೋಟೋ ಶೇರ್ ಮಾಡಿದಾಗ, ನೀವು ರಾಧಿಕಾರ ಸಹೋದರಿಯಂತೆ ಕಾಣುತ್ತೀರಿ ಅಂತಾ ಅವರ ಫ್ಯಾನ್ಸ್ ಹೇಳಿದ್ದರು.
ಇದೀಗ ಕಾವ್ಯಾ ಗೌಡ ಜನವರಿ22ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಅವರ ಸಹೋದರಿ ಭವ್ಯ ಕೂಡ ಗರ್ಭಿಣಿಯಾಗಿದ್ದಾರೆ. ಅವರಿಗೆ ಈಗಾಗಲೇ ಹೆಣ್ಣು ಮಗುವಿದ್ದು, ಭವ್ಯಗೌಡ ಎರಡನೇಯ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಅಯೋಧ್ಯೆಯಲ್ಲಿ ಕೇಕ್ ಕತ್ತರಿಸಿ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ ನಟ ನಿಖಿಲ್ ಕುಮಾರ್