ಕೊಚ್ಚಿ: ಮಲಯಾಳಂ ನಟಿ ಆರ್ಯ ಪಾರ್ವತಿ ಅವರ ತಾಯಿ, ತಮ್ಮ 47ನೇ ವಯಸ್ಸಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ವಿಚಿತ್ರ ಎಂದರೆ, ಅವರ ಅಮ್ಮನಿಗೆ ತಾನು ತಾಯಿಯಾಗುತ್ತಿರುವ ವಿಷಯ ತಿಳಿದಾಗ, ಅದಾಗಲೇ 7 ತಿಂಗಳು ತುಂಬಿತ್ತು. ಆದ್ರೆ ಅವರು ನಟಿಗೆ ವಿಷಯ ತಿಳಿಸಲು ಹಿಂಜರಿದಿದ್ದರಂತೆ. ಎಲ್ಲಿ ಆರ್ಯಾಗೆ ವಿಷಯ ತಿಳಿದು ಬೇಸರವಾಗುತ್ತದೆಯೋ, ಎಂದು ತಿಳಿದು, ಆರ್ಯಾ ಅಪ್ಪ ಅಮ್ಮ ಇಬ್ಬರೂ ಆರ್ಯಾಗೆ ವಿಷಯ ತಿಳಿಸಿರಲಿಲ್ಲವಂತೆ.
ಆದ್ರೆ ಆಕೆ ಊರಿಗೆ ಹೋಗುವ ಸಂದರ್ಭದಲ್ಲಿ ಅವರ ತಂದೆ ಆರ್ಯಾಗೆ ಕಾಲ್ ಮಾಡಿ, ನಿಮ್ಮ ಅಮ್ಮ ಗರ್ಭಿಣಿಯಾಗಿದ್ದಾರೆಂದು ಹೇಳಿದ್ದಾರೆ. ಅಲ್ಲದೇ, ಯಾಕೆ ಇವರಿಗೆ ಮೊದಲೇ ಈ ವಿಷಯ ತಿಳಿಸಲಿಲ್ಲವೆಂದು ಸಹ ಹೇಳಿದ್ದಾರೆ. ಸದ್ಯ ಆರ್ಯಾ ತಂಗಿ ಹುಟ್ಟಿದ ಖುಷಿಯಲ್ಲಿದ್ದಾರೆ. ಈ ಸುದ್ದಿಯ ಬಗ್ಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಹಾಕಿದ್ದಾರೆ. ಕೆಲವರು ಈಕೆಯ ಜೀವನವನ್ನ ರಶ್ಮಿಕಾ ಮಂದಣ್ಣ ಜೀವನಕ್ಕೆ ಹೋಲಿಸಿದ್ದಾರೆ.
ರಶ್ಮಿಕಾ ತಂಗಿ ಕೂಡ ಅವರಿಗಿಂತ ತುಂಬ ಚಿಕ್ಕವರಾಗಿರುವ ಕಾರಣಕ್ಕೆ, ಆರ್ಯಾಳ ಜೀವನವನ್ನ ಕೆಲವರು ರಶ್ಮಿಕಾಗೆ ಹೋಲಿಸಿ ಮಾತನಾಡಿದ್ದಾರೆ. ಇನ್ನು ಕೆಲವರು ಅವರ ಜೀವನ ಅವರಿಷ್ಟ. ಅವರಿಗೆ ಯಾವಾಗ ಬೇಕೋ ಆವಾಗ ಮಗು ಮಾಡಿಕೊಳ್ಳಲಿ.. ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ, ಇನ್ನೊಂದಿಷ್ಟು ಜನ ಆರ್ಯಾಳನ್ನು ಸಪೋರ್ಟ್ ಮಾಡುತ್ತ, ನನಗೂ ಒಬ್ಬಳು ತಂಗಿ ಇದ್ದಾಳೆ. ಆಕೆ ನನಗಿಂತ ತುಂಬಾ ತುಂಬಾ ಚಿಕ್ಕವಳು. ತಂಗಿಗೆ ಅಕ್ಕನ ಜೊತೆ ತಾಯಿಯಾಗಿ ಪ್ರೀತಿ ಕೊಡುವ ಆ ಖುಷಿಯೇ ಬೇರೆ ಎಂದು ಹೇಳಿದ್ದಾರೆ.
ಸ್ಯಾಂಡಲ್‌ವುಡ್ ನಟ ನಟಿಯರು ಯುಗಾದಿ ಹಬ್ಬವನ್ನ ಸೆಲೆಬ್ರೇಟ್ ಮಾಡಿದ್ದು ಹೀಗೆ..
‘ನನ್ನ ಬಗ್ಗೆ ಕೇಳಿದ್ರೆ ಹೇಳ್ತೀನಿ.. ಆದ್ರೆ ಈ ವಿಚಾರದ ಬಗ್ಗೆ ಮಾತನಾಡಲು ನಾನು ಬಹಳ ಚಿಕ್ಕ ವ್ಯಕ್ತಿ..’