Friday, October 24, 2025

Latest Posts

ಎಗ್ ಫ್ರೀಜ್ ಮಾಡಿ ಮಗು ಪಡೆಯಲಿದ್ದಾರಂತೆ ನಟಿ ಮೃಣಾಲ್ ಠಾಕೂರ್

- Advertisement -

Movies News: ಮೊದಲು ಸೀತಾರಾಮಂ ಸಿನಿಮಾ ಮೂಲಕ ಹಲವರ ಹೃದಯ ಗೆದ್ದಿದ್ದ ನಟಿ ಮೃಣಾಲ್ ಬಳಿಕ, ಅರ್ದಂಬರ್ಧ ಬಟ್ಟೆ ಧರಿಸಿ, ನೆಟ್ಟಿಗರ ಆಕ್ರೋಶಕ್ಕೆ ಈಡಾಗಿದ್ದರು. ನಮಗೆ ಈ ಮೃಣಾಲ್ ಬೇಡಾ, ಸೀತಾರಾಮಂನ ಸೀತೆ ಬೇಕು ಅಂತಾ ಹೇಳಿದ್ದರು. ಇದಕ್ಕೆ ಉತ್ತರ ಕೊಟ್ಟಿದ್ದ ಮೃಣಾಲ್ ಸೀತಾ ಅನ್ನೋದು ಒಂದು ಪಾತ್ರ ಅಷ್ಟೇ, ನಾನೋರ್ವ ನಟಿ, ನನ್ನಲ್ಲಿ ಗ್ಲಾಮರ್ ಇರುವುದು ತುಂಬಾ ಮುಖ್ಯ. ಅದಕ್ಕಾಗಿ ಮಾಡರ್ನ್ ಬಟ್ಟೆ ಧರಿಸೋದು ಕೂಡ ತುಂಬಾ ಮುಖ್ಯ. ಅಲ್ಲದೇ, ಯಾವ ಬಟ್ಟೆ ಧರಿಸಬೇಕು ಎಂದು ನಾನು ಡಿಸೈಡ್ ಮಾಡುತ್ತೇನೆ ಅಂತಾ ಖಡಾಖಂಡಿತವಾಗಿ ಅಭಿಮಾನಿಗಳಿಗೆ ಹೇಳಿದ್ದರು. ಇದರಿಂದಲೇ ಮೃಣಾಲ್ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿದೆ.

ಇದೀಗ ಮೃಣಾಲ್ ಮತ್ತೊಂದು ವಿಷಯಕ್ಕೆ ಸುದ್ದಿಯಾಗಿದ್ದಾರೆ. ಅದೇನೆಂದರೆ, ಮೃಣಾಲ್ ತಮ್ಮ ಎಗ್‌ನ್ನು ಫ್ರೀಜ್ ಮಾಡಿ, ಮಗು ಪಡೆಯಬೇಕು ಅನ್ನೋ ಯೋಚನೆಯಲ್ಲಿದ್ದಾರಂತೆ. ಮದುವೆ ಮಾಡಿಕೊಂಡು, ಸಂಸಾರ ಮಾಡಿಕೊಂಡಿರುವುದು ಮತ್ತು ನನ್ನ ಪತಿಯಾದವನು ನನ್ನನ್ನು ನನ್ನ ಕೆಲಸವನ್ನು ಗೌರವಿಸಬೇಕು. ಆದರೆ ಅದು ಕಷ್ಟವಾಗಬಹುದು. ಅಲ್ಲದೇ, ನನ್ನ ಸಿನಿಮಾ ಕೇರಿಯರ್ ಬಗ್ಗೆ ನಾನು ಹೆಚ್ಚು ಗಮನ ಕೊಡುತ್ತಿದ್ದು, ಸಂಸಾರ ನಿಭಾಯಿಸಲು ನನಗೆ ಕಷ್‌ಟವಾಗಬಹುದು. ಹಾಾಗಾಗಿ ನಾನು ಎಗ್ ಫ್ರೀಜ್ ಮಾಡಿ, ಮಗು ಮಾಡಿಕೊಳ್ಳಬೇಕು ಎಂಬ ಯೋಚನೆಯಲ್ಲಿದ್ದೇನೆ ಎಂದು ಮೃಣಾಲ್ ಹೇಳಿದ್ದಾರೆ.

ಪದೇ ಪದೇ ಐಶ್ವರ್ಯಾ ರೈ, ಅಮಿತಾಬ್‌ ಬಚ್ಚನ್ ಹೆಸರು ಉಲ್ಲೇಖ: ರಾಹುಲ್ ವಿರುದ್ಧ ಬಿಗ್‌ಬಿ ಫ್ಯಾನ್ಸ್ ಗರಂ

ʼಪೆನ್‌ಡ್ರೈವ್‌ʼ ಸ್ವಾಮಿ ಅವರು ಗ್ಯಾರಂಟಿಗಳನ್ನು ತಡೆಯಲು ಇನ್ನಿಲ್ಲದ ಪ್ರಯತ್ನ ಮಾಡ್ತಿದ್ದಾರೆ: ಡಿಸಿಎಂ ಡಿ.ಕೆ.ಶಿವಕುಮಾರ್

ಪಾಟ್ನಾ ರೈಲ್ವೆ ನಿಲ್ದಾಣದ ಬಳಿ ಹೊಟೇಲ್‌ನಲ್ಲಿ ಅಗ್ನಿ ಅವಘಡ: 6 ಮಂದಿಯ ದುರ್ಮರಣ, ಹಲವರಿಗೆ ಗಾಯ

- Advertisement -

Latest Posts

Don't Miss