Sunday, June 1, 2025

Latest Posts

ಮರದ ಜೊತೆ ನಟಿ ನಯನತಾರಾ ಮದುವೆ..!

- Advertisement -

ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ನಯನ ತಾರಾ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರೋದು ಹಳೇ ವಿಚಾರ.  ಇನ್ನು ಈ ಜೋಡಿ ಹಕ್ಕಿಗಳು ಸದ್ಯದಲ್ಲಿ ಸಪ್ತಪದಿ ತುಳಿಯಲಿದ್ದು, ನಟಿ ನಯನ ತಾರಾ ತಮ್ಮ ಪ್ರಿಯಕರ ವಿಘ್ನೇಶ್ ಶಿವನ್ ಮದುವೆಯಾಗೋದಕ್ಕೆ ಕುಜದೋಷ ಅಡ್ಡಿಯಾಗಿದೆ. ಇದಕ್ಕೆ ಜೋತಿಷಿಗಳು ಪರಿಹಾರ ವಿಧಾನ ಹೇಳ್ಕೊಟ್ಟಿದ್ದು, ನಯನ ತಾರಾ ತಮ್ಮ  ಭಾವಿ ಪತಿಯನ್ನ ಮದುವೆಯಾಗೋ ಮುಂಚೆಯೇ ಮದುವೆಯಾಗೋದೊಂದೇ ಪರಿಹಾರ ಅಂತ ಹೇಳಿದ್ದಾರೆ.

ಹಾಗಾದ್ರೆ ವಿಘ್ನೇಶ್ ಶಿವನ್ ಮದ್ಲೆಯಾಗೋ ಮುಂಚೆ ನಯನ್ ತಾರಾ ಯಾರನ್ನ ಮದ್ವೆ ಆಗ್ತಿದ್ದಾರೆ. ಅಂತ ಗೊತ್ತಾದ್ರೆ ನೀವು ಶಾಕ್ ಆಗೋದು ಗ್ಯಾರಂಟಿ.

ಯೆಸ್, ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ಅಂತಾನೇ ಖ್ಯಾತಿ ಪಡೆದಿರೋ ನಯನತಾರಾ ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸಿನ ಉತ್ತುಂಗದಲ್ಲಿರೋ ನಟಿ. ಇನ್ನು ಈ ನಟಿ ತಮ್ಮ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳು ಬೀಳು ಕಂಡಿದ್ದಾರೆ. ಇನ್ನು ಈಕೆಯ ಹೆಸ್ರು ತಮಿಳು ನಟ ಸಿಲಂಬರಸನ್ ಮತ್ತು  ಪ್ರಭುದೇವ ಜೊತೆ ಥಳುಕು ಹಾಕಿಕೊಂಡಿತ್ತು. ಆದ್ರೆ ಈ ಇಬ್ಬರೂ ನಟರೊಂದಿಗೆ ನಯನತಾರಾ ಬ್ರೇಕ್ ಅಪ್ ಮಾಡಿಕೊಂಡ ಬಳಿಕ, ತಮಿಳು ಸಿನಿ ಇಂಡಸ್ಟ್ರಿಯಲ್ಲಿ ನಿರ್ದೇಶಕನಾಗಿರೋ ವಿಘ್ನೇಶ್ ಶಿವನ್ ಜೊತೆ ನಯನ ತಾರಾಗೆ ಪ್ರೇಮಾಂಕುರ ವಾಗುತ್ತೆ. ಇನ್ನು ಇಬ್ಬರೂ ಕೂಡ ಸೀರಿಯಸ್ ರಿಲೇಷನ್ ಶಿಪ್ ನಲ್ಲಿದ್ದು, ಸದ್ಯದಲ್ಲೇ ಮದುವೆಯಾಗಲಿದ್ದಾರೆ.

ಹೌದು, ನಯನ್ ಮತ್ತು ವಿಘ್ನೇಶ್ ಮದ್ವೆಯಾಗೋದೇನೋ ಕನ್ಫರ್ಮ್ ಆಗಿದೆ. ಆದ್ರೆ ಇವರಿಬ್ಬರ ವಿವಾಹಕ್ಕೆ ಸದ್ಯ ಮತ್ತೊಂದು ಅಡ್ಡಿ ಎದುರಾಗಿದೆ. ಅದೇನಪ್ಪಾ ಅಂದ್ರೆ, ನಟಿ ನಯನ ತಾರಾ ಜಾತಕದಲ್ಲಿನ ಕುಜ ದೋಷ. ಯೆಸ್, ನಯನ ತಾರಾ ಜಾತಕದಲ್ಲಿ ಕುಜ ದೋಷವಿದ್ದು, ಆಕೆ ವಿಘ್ನೇಶ್ ಶಿವನ್ ರನ್ನು ಮದ್ವೆಯಾಗೋ ಮೊದಲು ಮತ್ತೊಂದು ಮದ್ವೆಯಾಗಬೇಕು ಅಂತ ಜ್ಯೋತಿಷಿಗಳು ಸಲಹೆ ನೀಡಿದ್ದಾರೆ.

ಹೀಗಾಗಿ ನಯನತಾರಾ ಮೊದಲು ಮರವನ್ನು ಮದ್ವೆಯಾಗಲೇಬೇಕು ಅಂತ ಜ್ಯೋತಿಷಿಗಳು ಕಟ್ಟುನಿಟ್ಟಾಗಿ ಹೇಳಿದ್ದಾರೆ.

ಅಂದಹಾಗೆ, ಸೈರಿಯನ್ ಕ್ರಿಸ್ಟಿಯನ್ ಸಮುದಾಯಕ್ಕೆ ಸೇರಿದ ನಯನ್ ತಾರಾ ಇತ್ತೀಚೆಗಷ್ಟೇ ಹಿಂದೂ ಧರ್ಮಕ್ಕೆ ಕನ್ವರ್ಟ್ ಆಗಿದ್ದಾರೆ. ಹಿಂದೂ ಶಾಸ್ತ್ರ ಸಂಪ್ರದಾಯದ ಮೇಲೆ ಹೆಚ್ಚು ನಂಬಿಕೆ ಇಟ್ಟಿದ್ದಾರೆ.  ಹೀಗಾಗಿ ಜ್ಯೋತಿಷ್ಯರ ಸಲಹೆಯಂತೆ ನಟಿ ಮೊದಲು ಮರವನ್ನೇ ಮದುವೆಯಾಗಲಿದ್ದಾರೆ.

ಸದ್ಯ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿರೋ ನಯನ್ ತಾರ- ವಿಘ್ನೇಶ್ ಶಿವನ್ ಶಿರಡಿ, ಮುಂಬೈ ನ ಸಿದ್ದಿವಿನಾಯಕ ದೇಗುಲ ಸೇರಿದಂತೆ ನಾನಾ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೀತಿದ್ದಾರೆ.

ಇನ್ನು ಕುಜದೋಷವಿರೋ ಕನ್ಯೆಯರು ಮೊದಲು ಮರವನ್ನೇ ಮದ್ವೆಯಾಗಬೇಕು ಅನ್ನೋದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತೆ. ಇನ್ನು ಹೀಗೆ ವಿಶ್ವ ಸುಂದರಿ ಐಶ್ವರ್ಯ ರೈ ಕೂಡ ಅಭಿಷೇಕ್  ಬಚ್ಚನ್ ರನ್ನು ಮದ್ವೆಯಾಗೋ ಮುಂಚೆ ಜ್ಯೋತಿಷ್ಯರ ಸಲಹೆಯಂತೆ ಮೂರು ಮರಗಳನ್ನು ಮದ್ವೆಯಾಗಿದ್ರು.

ಒಟ್ಟಾರೆ ತಮ್ಮ ಜಾತಕದಲ್ಲಿನ ಕುಜದೋಷ ನಿವಾರಣೆಯಾಗೋದಕ್ಕೆ ನಯನತಾರಾ ಮರವನ್ನೇ ಮದ್ವೆಯಾಗ್ತಿದ್ದಾರೆ. ಇನ್ನು  ಮೂರ್ನಾಲ್ಕು ತಿಂಗಳಲ್ಲಿ ನಯನ್ ವಿಘ್ನೇಶ್ ಶಿವನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ ಅಂತ ಹೇಳಲಾಗ್ತಿದೆ.

ಫಿಲಂ ಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss