Wednesday, September 11, 2024

Latest Posts

‘ಮಾಸ್ಕ್ ಹಾಕೋಂಡ್ರು ಜನ ನನ್ನನ್ನು ಕಂಡು ಹಿಡಿತಾರೆ ಅನ್ನೋದೇ ಖುಷಿ’

- Advertisement -

ನಟಿ ಪಾಯಲ್ ಚಂಗಪ್ಪಾ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಾವು ಹೇಗೆ ಸಿನಿಮಾ ಇಂಡಸ್ಟ್ರಿಗೆ ಬಂದಿದ್ದು ಅನ್ನೋ ಬಗ್ಗೆ ಹೇಳಿದ್ದಾರೆ. ಅಲ್ಲದೇ ಫ್ಯಾನ್ಸ್ ಕಡೆಯಿಂದ ಹೇಗೆ ರೆಸ್ಪಾನ್ಸ್ ಬರತ್ತೆ ಅನ್ನೋ ಬಗ್ಗೆಯೂ ಪಾಯಲ್ ಮಾತನಾಡಿದ್ದಾರೆ.

ಚಿಕ್ಕ ವಯಸ್ಸಿನಿಂದಲೂ ಪಾಯಲ್‌ಗೆ ಆ್ಯಕ್ಟಿಂಗ್, ಡಾನ್ಸ್‌ನಲ್ಲಿ ಇಂಟ್ರೆಸ್ಟ್ ಇತ್ತು. ಪಾಯಲ್ ಕಾಲೇಜು ಕಲಿತಿರುವಾಗ, ಮನೆ ಪಕ್ಕದಲ್ಲೇ ಮೊದಲ ಬಾರಿ, ಒಂದು ಮೂವಿಗಾಗಿ ಆಡಿಶನ್ ಕೊಡಲು ಹೋಗಿದ್ದರು. ಅಲ್ಲಿ ಅವರ ಫೋಟೋವನ್ನ ಕೊಟ್ಟು ಬಂದಿದ್ದರು. ನಂತರ ಅದೇ ಸ್ಥಳಕ್ಕೆ ಅಮೃತಾಂಜನ್ ಟೀಂ ಬಂದು ನನ್ನ ಫೋಟೋವನ್ನ ನೋಡಿ, ನನ್ನನ್ನು ಸೆಲೆಕ್ಟ್ ಮಾಡಿದ್ದರು. ಅದಾದ ಬಳಿಕ ನಾನು ಅಮೃತಾಂಜನ್ ಸಿನಿಮಾಗೆ ಸೆಲೆಕ್ಟ್ ಆಗಿದ್ದು ಅಂತಾರೆ ಪಾಯಲ್.

ಇನ್ನು ನಾನು ಸುಮಾರು ಕಡೆ ಫಂಕ್ಷನ್‌ಗೆ ಹೋದಾಗ, ಹೊರಗಡೆ ತಿರುಗಾಡೋಕ್ಕೆ ಹೋದಾಗ, ಹಲವರು ನನ್ನನ್ನು ಕಂಡು ಹಿಡಿದು ಮಾತಾಡಿಸ್ತಾರೆ. ನಾನು ಒಂದು ಫಂಕ್ಷನ್‌ಗೆ ಹೋದಾಗ, ಅಲ್ಲಿ ಟೈಮ್ ಇಲ್ಲದಿದ್ದರೂ, ಅಡಿಗೆ ಭಟ್ಟರು ನನ್ನ ಬಳಿ ಬಂದು ಮಾತನಾಡಿಸಿ, ಫೋಟೋ ತೆಗಿಸಿಕೊಂಡು ಹೋಗ್ತಾರೆ.

ಇನ್ನು ನಾನು ತಿರುಗಾಡಲು ಹೋದಾಗ, ಮಾಸ್ಕ್ ಹಾಕಿಕೊಂಡು, ಚುರುಮುರಿ ಹಿಡ್ಕೊಂಡು ನಿಂತಿದ್ದೆ. ಯಾರಿಗೂ ಅದು ನಾನಂತ ಗೊತ್ತಾಗಿಲ್ಲ ಅಂತ ತಿಳ್ಕೊಂಡಿದ್ದೆ. ಆದ್ರೆ ಮನೆಗೆ ಬಂದ ಬಳಿಕ, ಆಗಲೇ ಕಾಮೆಂಟ್ ಮಾಡಿ, ಮಾಸ್ಕ್ ಹಾಕೊಂಡು ಕೈಯಲ್ಲಿ ಚುರುಮುರಿ ಹಿಡಿದು ಏನ್ಮಾಡ್ತಿದ್ರಿ ಅಂತಾ ಹೇಳಿದ್ರು ಅಂತಾ ತಮ್ಮ ಅನುಭವ ಹೇಳಿಕೊಂಡಿದ್ದಾರೆ ಪಾಯಲ್.

ಇನ್ನು ನನಗೆ ಇಷ್ಟು ಪ್ರೀತಿ ಕೊಡುವ, ಸಪೋರ್ಟ್ ಮಾಡುವ ಜನರಿಗೆ ನಾನು ಧನ್ಯವಾದವನ್ನು ತಿಳಿಸ್ತೇನೆ. ಆದ್ರೆ ಎಲ್ಲ ಕಡೆಯೂ ಜನ ನನ್ನನ್ನು ಕಂಡು ಹಿಡಿದು ಮಾತನಾಡಿಸುವುದಿಲ್ಲ. ಅದು ಅವರ ತಪ್ಪಲ್ಲ, ನಾನು ಎಲ್ಲರಿಗೂ ಇಷ್ಟವಾಗಲೇಬೇಕು ಎಂದೆನಿಲ್ಲ. ಹಾಗಾಗಿ ನನ್ನನ್ನು ಇಷ್ಟಪಡುವವರಿಗೆ ನಾನು ಥ್ಯಾಂಕ್ಸ್ ಹೇಳ್ತೇನೆ ಎಂದಿದ್ದಾರೆ ಪಾಯಲ್.

- Advertisement -

Latest Posts

Don't Miss