ಅಮೃತಾಂಜನ್ ಅನ್ನೋ ಶಾರ್ಟ್ ಫಿಲ್ಮ್ ಮೂಲಕ ಕರ್ನಾಟಕದ ಮನೆ ಮಾತಾದ ಪಾಯಲ್ ಚಂಗಪ್ಪಾ, ಇನ್ನೂ ಹಲವು ಶಾರ್ಟ್ ಫಿಲ್ಮ್‌ನಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಪಾಯಲ್ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಾನು ಮದುವೆಯಾಗುವ ಹುಡುಗನಲ್ಲಿ ಯಾವ ರೀತಿಯ ಕ್ವಾಲಿಟೀಸ್ ಇರಬೇಕು ಅಂತಾ ಹೇಳಿದ್ದಾರೆ.
ನನ್ನನ್ನು ಮದುವೆಯಾಗುವ ಹುಡುಗ ಒಳ್ಳೆಯವನಾಗಿರ್ಬೇಕು. ನನಗೆ ಸ್ವಾತಂತ್ರ್ಯ ಕೊಡಬೇಕು. ಸಪೋರ್ಟ್ ಮಾಡ್ಬೇಕು. ನಾನು ಅವರಿಗೆ ಸಪೋರ್ಟ್ ಮಾಡ್ತೀನಿ. ಅವನಿಗೆ ಉತ್ತಮ ಗುಣ ಇರ್ಬೇಕು ಅಂತಾ ಹೇಳಿದ್ದಾರೆ. ಇನ್ನು ಪಾಯಲ್ ಚಂಗಪ್ಪಾಗೆ ಬಾಯ್ ಫ್ರೆಂಡ್ ಇದ್ದಾರಾ ಅಂತಾ ಕೇಳಿದಾಗ, ಪಾಯಲ್ ಇಲ್ಲಾ ಅಂತಾ ಹೇಳಿ, ಹಲವು ಹುಡುಗರ ಮನಸ್ಸಿಗೆ ಸಮಾಧಾನ ನೀಡಿದ್ದಾರೆ.
ಇನ್ನು ತಮ್ಮ ಶಾರ್ಟ್ ಮೂವಿ ಬಗ್ಗೆಯೂ ಮಾತನಾಡಿದ ಪಾಯಲ್, ಮೊದಲು ನಾನು ಮೇಕಪ್ ಇಲ್ಲದೇ ನನ್ನನ್ನು ತೋರಿಸ್ತಾರೆ ಅಂತಾ ಹೇಳಿದಾಗ, ಹೆದರಿದ್ದೆ. ಎಲ್ಲಿ ಜನ ನನ್ನನ್ನು ಬೈತಾರೋ ಅಂತಾ ತಿಳಿದಿದ್ದೆ. ಆದ್ರೆ ಹಾಗೇನಾಗಿಲ್ಲಾ. ಇದಕ್ಕಿಂತ ಮೊದಲು ಜಡೆ ಮೀಸೆ ಅನ್ನೋ ಶಾರ್ಟ್ ಫಿಲ್ಮ್ ಫೇಮಸ್ ಆಗಿದ್ದ ಕಾರಣ. ಈ ಸಿನಿಮಾನೂ ಫೇಮಸ್ ಆಗ್ಬಹುದು ಅಂತಾ ತಿಳ್ಕೊಂಡಿದ್ದೆ. ಅದು ನಿಜ ಆಯ್ತು ಅಂತಾರೆ ಪಾಯಲ್.
ಇನ್ನು ಪಾಯಲ್ ನಟನೆಯನ್ನ ಮೆಚ್ಚಿ ಸ್ಯಾಂಡಲ್‌ವುಡ್‌ನಿಂದಲೂ ಅವಕಾಶ ಒದಗಿ ಬಂದಿದೆ. ನಾಲ್ಕೈದು ಸಿನಿಮಾದಲ್ಲಿ ನಟಿಸಲು ಪಾಯಲ್‌ಗೆ ಅವಕಾಶ ಸಿಕ್ಕಿದ್ದು, ಒಂದು ಸಿನಿಮಾ ಶೂಟಿಂಗ್ ಪೂರ್ತಿಯಾಗಿದ್ದು, ಇನ್ನೊಂದು ಸಿನಿಮಾ ಶೂಟಿಂಗ್ ಅರ್ಧ ಮುಗಿದಿದೆ. ಇನ್ನುಳಿದ ಸಿನಿಮಾ ಶೂಟಿಂಗ್ ಆಗಸ್ಟ್, ಅಕ್ಟೋಬರ್‌ನಲ್ಲಿ ಶುರುವಾಗಲಿದೆ ಅಂದಿದ್ದಾರೆ ಪಾಯಲ್.