Tuesday, April 8, 2025

Latest Posts

ರಾಮಲಲ್ಲಾ ಪ್ರಾಣಪ್ರತಿಷ್ಠೆ ಅಂಗವಾಗಿ ತನ್ನ ಮನೆಯಲ್ಲಿ ಹೋಮ ನಡೆಸಿದ ನಟಿ ಊರ್ಫಿ ಜಾವೇದ್

- Advertisement -

Movie News: ನಟಿ ಊರ್ಫಿ ಜಾವೇದ್ ಹೆಸರು ಕೇಳಿದ ಕೂಡಲೇ ಹಲವರಿಗೆ ನೆನಪಿಗೆ ಬರುವುದೇ, ಆಕೆಯ ತುಂಡು ಉಡುಗೆ. ಚಿತ್ರ ವಿಚಿತ್ರ ಬಟ್ಟೆ ತೊಟ್ಟು, ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ಧಳಾಗಿರುವ ಊರ್ಫಿ ಜಾವೇದ್. ಕೆಲ ದಿನಗಳ ಹಿಂದೆ ಹೊಟೇಲ್‌ನಲ್ಲಿ ವೆಟ್ರೆಸ್‌ ಕೆಲಸ ಮಾಡಿ, ಅದರಿಂದ ಬಂದ ದುಡ್ಡನ್ನು ಬಡವರಿಗೆ ದಾನ ಮಾಡಿದ್ದರು. ಈ ಕಾರಣಕ್ಕೆ ಈಕೆ ಬಟ್ಟೆ ಸರಿಯಾಗಿ ಹಾಕಿಕೊಳ್ಳದಿದ್ದರೂ, ಈಕೆಯ ಮನಸ್ಸು ಒಳ್ಳೆಯದಿದೆ ಅಂತಾ ನೆಟ್ಟಿಗರು ಹೇಳಿದ್ದರು.

ಇದೀಗ ಊರ್ಫಿ ಇನ್ನೊಂದು ಕೆಲಸ ಮಾಡಿದ್ದು, ಇದಕ್ಕೆ ಕೆಲ ನೆಟ್ಟಿಗರು ಹೊಗಳಿದರೆ, ಇ್ನನು ಕೆಲವರು ತೆಗಳಿದ್ದಾರೆ. ಏಕೆಂದರೆ ಊರ್ಫಿ ಜಾವೇದ್ ಇಸ್ಲಾಂ ಆಗಿದ್ದು, ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಅಂಗವಾಗಿ, ತಮ್ಮ ಮನೆಯಲ್ಲಿ ಸಣ್ಣ ಹೋಮ ಮಾಡಿದ್ದಾರೆ. ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿ, ಆಕೆ ರಾಮಮಂದಿರಕ್ಕಾಗಿ ಎಲ್ಲರಿಗೂ ಅಭಿನಂದನೆ ತಿಳಿಸಿದ್ದಾರೆ.

ಇನ್ನು ಕೆಲ ತಿಂಗಳ ಹಿಂದೆ ಊರ್ಫಿ, ತನಗೆ ಇಸ್ಲಾಂನಲ್ಲಿ ನಂಬಿಕೆ ಇಲ್ಲ. ತಾನು ಹಿಂದೂ ಹುಡುಗನನ್ನೇ ವರಿಸುತ್ತೇನೆ. ಹಿಂದೂವಿನ ರೀತಿ ಜೀವಿಸುತ್ತಿದ್ದೇನೆ. ಭಗವದ್ಗೀತೆಯನ್ನು ನಾನು ಪ್‌ರತಿದಿನ ಓದುತ್ತೇನೆ ಎಂದು ಊರ್ಫಿ ಹೇಳಿದ್ದರು. ಇದೀಗ ಮನೆಯಲ್ಲಿ ರಾಮನಾಮ ಜಪ ಮಾಡಿ, ಹೋಮ ನಡೆಸುವ ವೀಡಿಯೋ ಅಪ್ಲೋಡ್ ಮಾಡಿದ್ದಾರೆ. ಈಕೆಯ ಈ ಕೆಲಸಕ್ಕೆ ಹಲವರು ಶ್ಲಾಘಿಸಿದ್ದಾರೆ.

ಅಯೋಧ್ಯೆ ಕಾರ್ಯಕ್ರಮಕ್ಕೂ ಮುನ್ನ ಹನುಮನ ದರ್ಶನ ಪಡೆದ ರಿಷಬ್ ದಂಪತಿ

ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ದಿನವೇ ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಕಾವ್ಯಾಗೌಡ

ಅಯೋಧ್ಯೆಯಲ್ಲಿ ಕೇಕ್ ಕತ್ತರಿಸಿ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ ನಟ ನಿಖಿಲ್ ಕುಮಾರ್

- Advertisement -

Latest Posts

Don't Miss