Wednesday, October 15, 2025

Latest Posts

ಈ ನಿಯಮ ಅನುಸರಿಸಿ ಬಳಿಕ ಮಾವಿನ ಹಣ್ಣಿನ ಸೇವನೆ ಮಾಡಿದರೆ ಉತ್ತಮ..

- Advertisement -

Health Tips: ಬೇಸಿಗೆ ಮುಗಿದು ಮಳೆಗಾಲ ಶುರುವಾಗ ಸಮಯ ಬಂದಿದೆ. ಆದರೆ ಮಾವಿನ ಹಣ್ಣಿನ ಮಾರಾಟ ಮಾತ್ರ ನಿಂತಿಲ್ಲ. ಮಾವಿನ ಪ್ರಿಯರಂತೂ, ಪ್ರತಿದಿನ ಮಾವಿನ ಹಣ್ಣಿನ ಸೇವನೆ ಮಾಡ್ತಿರ್ತೀರಿ. ಸೀಸನ್ ಮುಗಿಯುವುದರೊಳಗಾಗಿ ಎಷ್ಟಾಗತ್ತೋ, ಅಷ್ಟು ಮಾವಿನ ಹಣ್ಣು ತಿನ್ನುವ ಆಸೆ ಹಲವರದ್ದು. ಆದರೆ ನೀವು ಮಾವಿನ ಹಣ್ಣು ತಿನ್ನುವ ಮುನ್ನ, ಕೆಲ ನಿಯಮವನ್ನ ಅನುಸರಿಸಬೇಕು. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಾದ್ರೆ ಯಾವುದು ಆ ನಿಯಮಗಳು ಅಂತಾ ತಿಳಿಯೋಣ ಬನ್ನಿ..

ಮೊದಲನೇಯ ನಿಯಮ, ಮಾವಿನ ಹಣ್ಣನ್ನು ತಿನ್ನುವ ಅರ್ಧ ಗಂಟೆ ಮುನ್ನ, ಆ ಹಣ್ಣುಗಳನ್ನು ನೀರಿನಲ್ಲಿ ನೆನೆಸಿಡಿ. ಏಕೆಂದರೆ, ಮಾವಿನ ಹಣ್ಣು ಉಷ್ಣ ಹೆಚ್ಚಾಗಿರುವ ಹಣ್ಣಾಗಿದ್ದು, ಇದರ ಸೇವನೆಯಿಂದ ದೇಹದಲ್ಲಿ ಉಷ್ಣತೆ ಹೆಚ್ಚುತ್ತದೆ. ಹಾಗೆ ಉಷ್ಣ ಹೆಚ್ಚಾಗದೇ, ನಿಮಗೆ ಪಿತ್ತ ಸಮಸ್ಯೆ ಬರಬಾರದು ಅಂದ್ರೆ, ನೀವು ಮಾವಿನ ಹಣ್ಣನ್ನ ನೀರಿನಲ್ಲಿ ಅರ್ಧ ಗಂಟೆ ನೆನೆಸಿಟ್ಟು ತಿನ್ನಬೇಕು. ಹೀಗೆ ಮಾಡುವುದರಿಂದ ಮಾವಿನ ಹಣ್ಣಿನಲ್ಲಿರುವ ಉಷ್ಣ ಕಡಿಮೆಯಾಗುತ್ತದೆ. ಹಾಗಾಗಿ ಮಾವಿನ ಹಣ್ಣನ್ನ ನೀರಿನಲ್ಲಿ ನೆನೆಸಿಟ್ಟು, ಅರ್ಧ ಗಂಟೆ ಬಳಿಕ ಸೇವಿಸಿ.

ಎರಡನೇಯ ನಿಯಮ ಮಾವಿನ ಹಣ್ಣನ್ನ ಕಟ್‌ ಮಾಡಿಯೇ ಸೇವಿಸಿ. ಮಾವಿನ ಹಣ್ಣು ಅಂತಲ್ಲ, ಎಲ್ಲ ಹಣ್ಣುಗಳನ್ನೂ ಕಟ್ ಮಾಡಿಕೊಂಡೇ ತಿನ್ನಬೇಕು. ಮಾವಿನ ಹಣ್ಣಿನ ಬಗ್ಗೆಯೇ ಹೇಳಲು ಕಾರಣವೇನಂದ್ರೆ, ಹಲವರು ಒಂದು ಇಡೀ ಮಾವಿನ ಹಣ್ಣನ್ನ ಚೀಪಿಕೊಂಡೇ ತಿನ್ನಲು ಇಷ್ಟಪಡುತ್ತಾರೆ. ಆದ್ರೆ ನೀವು ತಿನ್ನುವ ಮಾವು, ರುಚಿಯಾಗಿ, ಚೆನ್ನಾಗಿದ್ದರೆ ಅಡ್ಡಿಲ್ಲ. ಆದರೆ ನೀವು ತಿನ್ನುವ ಮಾವಿನಲ್ಲಿ ಹುಳವಿದ್ದರೆ.. ಅದು ಹಾಳಾಗಿದ್ದರೆ, ಆಗ ನಿಮ್ಮ ಆರೋಗ್ಯವೇ ಹಾಳಾಗಬಹುದು. ಹಾಗಾಗಿ ಮಾವಿನ ಹಣ್ಣನ್ನು ಕಟ್ ಮಾಡಿ ಸೇವಿಸುವುದು ಉತ್ತಮ.

ಮೂರನೇಯ ನಿಯಮ, ಫ್ರಿಜ್‌ನಲ್ಲಿರಿಸಿದ ಮಾವಿನ ಹಣ್ಣನ್ನ ತಕ್ಷಣ ತಿನ್ನಬೇಡಿ. ಯಾವುದೇ ಹಣ್ಣನ್ನು ಫ್ರಿಜ್‌ನಲ್ಲಿರಿಸಿ, ತಿನ್ನಬಾರದು. ಅದರಲ್ಲೂ ಮಾವಿನ ಹಣ್ಣನ್ನ ಫ್ರಿಜ್‌ನಲ್ಲಿರಿಸಿ ತಿನ್ನಬೇಡಿ. ಏಕೆಂದರೆ ಮಾವಿನ ಹಣ್ಣಿನ ಗುಣ ಉಷ್ಣ. ಫ್ರಿಜ್‌ನಲ್ಲಿರಿಸಿದಾಗ, ಇನ್ನೂ ಉಷ್ಣವಾಗುತ್ತದೆ. ಹಾಗಾಗಿ ಫ್ರಿಜ್‌ನಿಂದ ತೆಗೆದಿಟ್ಟು, ನಂತರ ನೀರಿನಲ್ಲಿ ನೆನೆಸಿಟ್ಟು, ಸೇವಿಸಿ.

ಇಂದಿನ ಊಟವನ್ನು ನಾಳೆ ಬಿಸಿ ಮಾಡಿಕೊಂಡು ತಿನ್ನುವುದು ಒಳ್ಳೇದಾ..? ಕೆಟ್ಟದ್ದಾ..?

ನೀವು ಮಾಡುವ ಈ ತಪ್ಪೇ, ನೀವು ಲೇಟಾಗಿ ಏಳಲು ಕಾರಣವಾಗುತ್ತದೆ.

ಸೌಂದರ್ಯ ಮತ್ತು ಆರೋಗ್ಯ ವೃದ್ಧಿಗಾಗಿ ಹೀಗೆ ಮಾಡಿ..

- Advertisement -

Latest Posts

Don't Miss