Saturday, July 27, 2024

Latest Posts

ನಟಿ ಶರಣ್ಯ ವಿರುದ್ಧ ಕೊ*ಲೆ ಬೆದರಿಕೆ ಆರೋಪ: ಪ್ರಕರಣ ದಾಖಲು

- Advertisement -

Movie News: ದಿ ವಿಲನ್ ಸಿನಿಮಾದಲ್ಲಿ ಸುದೀಪ್ ತಾಯಿ ಪಾತ್ರದಲ್ಲಿ ನಟಿಸಿದ್ದ ಶರಮ್ಯ ವಿರುದ್ಧ ಕೊಲೆ ಬೆದರಿಕೆ ಪ್ರಕರಣ ದಾಖಲಾಗಿದೆ. ಚೆನ್ನೈನ ವಿರುಗಂಬಾಕ್ಕಂನ ಪದ್ಮಾವತಿ ನಗರದಲ್ಲಿ ನಟಿ ಶರಣ್ಯ ವಾಸವಾಗಿದ್ದಾರೆ. ಇವರ ಪಕ್ಕದ ಮನೆಯವರೇ ಶರಣ್ಯ ವಿರುದ್ಧ ಕೊಲೆ ಬೆದರಿಕೆ ಆರೋಪ ಮಾಡಿ, ದೂರು ದಾಖಲಿಸಿದ್ದಾರೆ.

ಶರಣ್ಯ ಪಕ್ಕದಮನೆಯ ಶ್ರೀದೇವಿ ಎಂಬುವವರು ಈ ಆರೋಪ ಮಾಡಿದ್ದು, ಶ್ರೀದೇವಿ ರಾತ್ರಿ ಹೊತ್ತು ಆಸ್ಪತ್ರೆಗೆ ಹೋಗಲು ಕಾರು ತೆಗೆದಿದ್ದಾರೆ. ಈ ಅವಸರದಲ್ಲಿ ಶ್ರೀದೇವಿಯವರ ಕಾರು, ಶರಣ್ಯರ ಕಾರಿಗೆ ಡಿಕ್ಕಿಯಾಗಿದೆ. ಕಾರು ಜಖಂ ಆಗಿದೆ. ಶರಣ್ಯ ಶ್ರೀದೇವಿ ಇಬ್ಬರ ನಡುವೆ ಜಗಳವಾಗಿದೆ. ಈ ಜಗಳವಾಗುವಾಗ ನಟಿ ಶರಣ್ಯ ಶ್ರೀದೇವಿ ಅವರಿಗೆ ಕೊಲೆ ಮಾಡುತ್ತೇನೆಂದು ಹೇಳಿದ್ದಾರಂತೆ. ಈ ಕಾರಣಕ್ಕೆ ಶ್ರೀದೇವಿ ಪೊಲೀಸರಿಗೆ ಶರಣ್ಯ ವಿರುದ್ಧ ಕೊಲೆ ಬೆದರಿಕೆ ಆರೋಪ ಮಾಡಿದ್ದು, ಜಗಳ ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ಫೂಟೇಜ್‌ಗಳನ್ನು ಸಹ ಒದಗಿಸಿದ್ದಾರೆ.

ಇನ್ನು ಶರಣ್ಯ ಮತ್ತು ಶ್ರೀದೇವಿ ನಡುವೆ ಆಗಾಗ ಕಾರು ಪಾರ್ಕಿಂಗ್ ಬಗ್ಗೆ ಜಗಳ ನಡೆಯುತ್ತಲೇ ಇತ್ತು. ಆದರೆ ನಿನ್ನೆಯ ಜಗಳ ತಾರಕಕ್ಕೇರಿದ್ದು, ಪ್ರಕರಣ ದಾಖಲಾಗುವ ಮಟ್ಟಿಗೆ ಹೋಗಿದೆ. ಇನ್ನು ಶರಣ್ಯ ನಟನೆ ನೋಡಿರುವ ಅವರ ಫ್ಯಾನ್ಸ್, ಬರೀ ಕರುಣಾಮಯಿ ತಾಯಿಯ ಪಾತ್ರ ಮಾಡುವ ಶರಣ್ಯ, ಈ ರೇಂಜಿಗೆಲ್ಲಾ ಜಗಳ ಮಾಡ್ತಾರಾ ಅಂತಾ ಶಾಕ್ ಆಗಿದ್ದಾರೆ.

ಇಸ್ರೇಲ್‌ನಲ್ಲಿ ಅಲ್ ಜಜೀರಾ ವಾಹಿನಿ ನಿಷೇಧ: ಬೆಂಜಮಿನ್ ನೆತನ್ಯಾಹು

ನಿಮ್ಮ ನಡೆಯೇ ನನ್ನದೂ ಆಗಿರಲಿದೆ. ಜೊತೆಯಾಗಿ ಮಂಡ್ಯವನ್ನು ಮತ್ತಷ್ಟು ಅಭಿವೃದ್ದಿ ಪಡಿಸೋಣ: ಸಂಸದೆ ಸುಮಲತಾ

ಅಡ್ಡದಾರಿಯಲ್ಲಿ ಚುನಾವಣೆ ಎದುರಿಸಲು ಹೋದರೆ, ಸೋಲು ಕಟ್ಟಿಟ್ಟ ಬುತ್ತಿ: ಅಮಿತ್ ಶಾ ವಿರುದ್ಧ ಸಿಎಂ ವಾಗ್ದಾಳಿ

- Advertisement -

Latest Posts

Don't Miss