Tuesday, October 28, 2025

Latest Posts

ಈ ದೇವಸ್ಥಾನದಲ್ಲಿ ರಾಮನೊಂದಿಗೆ ಅವನ ಸಹೋದರನನ್ನೂ ಪೂಜಿಸುತ್ತಾರೆ..

- Advertisement -

Spiritual: ನೀವು ಹಲವು ಕಡೆ ರಾಮನ ದೇವಸ್ಥಾನಕ್ಕೆ ಹೋಗಿರುತ್ತೀರಿ. ಅಲ್ಲಿ ರಾಮ, ಲಕ್ಷ್ಮಣ, ಹನುಮ, ಸೀತೆಯನ್ನು ಜನ ಪೂಜಿಸುತ್ತಾರೆ. ಆದರೆ ಇಲ್ಲೊಂದು ದೇವಸ್ಥಾನದಲ್ಲಿ ರಾಮನೊಂದಿಗೆ ಅವನ ಮೂವರು ಸಹೋದರರನ್ನೂ ಪೂಜಿಸಲಾಗುತ್ತದೆ. ಹಾಗಾದರೆ ಆ ದೇವಸ್ಥಾನ ಇರುವುದು ಎಲ್ಲಿ..? ಇದರ ಪ್ರಾಮುಖ್ಯತೆ ಏನು ಅಂತಾ ತಿಳಿಯೋಣ ಬನ್ನಿ..

ಮೊದಲ ದೇವಸ್ಥಾನ ತ್ರಿಪ್ರಯಾರ್ ಶ್ರೀ ರಾಮಸ್ವಾಮಿ ದೇವಸ್ಥಾನ. ಇಲ್ಲಿ ಶ್ರೀರಾಮನನ್ನು ಪೂಜಿಸಲಾಗುತ್ತದೆ. ನಾಲಂಬಲಂ ಕ್ಷೇತ್ರದಲ್ಲಿರುವ ರಾಮನ ಸಹೋದರರ ದೇವಸ್ಥಾನದಲ್ಲಿ ಮೊದಲು ಎಲ್ಲರೂ ಭೇಟಿ ನೀಡುವ ದೇವಸ್ಥಾನವೆಂದರೆ, ಶ್ರೀರಾಮನ ದೇವಸ್ಥಾನಕ್ಕೆ. ಕೇರಳದ ತ್ರಿಶೂರಿನಲ್ಲಿ ಈ ದೇವಸ್ಥಾನವಿದೆ. ಇಲ್ಲಿ ಶ್ರೀರಾಮನ ಜೊತೆ ದಕ್ಷಿಣಾಮೂರ್ತಿ, ಗಣಪತಿ, ಕೃಷ್ಣ, ಧರ್ಮಶಾಸ್ತನನ್ನು ಕೂಡ ಪೂಜಿಸಲಾಗುತ್ತದೆ.

ಎರಡನೇಯ ದೇವಸ್ಥಾನ ಕೂಡಲ ಮಾಣಿಕ್ಯಂ ದೇವಸ್ಥಾನ. ಇಲ್ಲಿ ಭರತನನ್ನು ಪೂಜಿಸಲಾಗುತ್ತದೆ. ರಾಮನ ಜೊತೆ ಲಕ್ಷ್ಮಣನನ್ನು ಪೂಜಿಸಿದರೂ ಕೂಡ, ಭರತನನ್ನು ಎಲ್ಲಿಯೂ ಪೂಜಿಸುವುದಿಲ್ಲ. ಹಾಗಾಗಿ ಇದು ಭರತನನ್ನು ಪೂಜಿಸುವ ಭಾರತದ ಏಕೈಕ ದೇವಸ್ಥಾನವಾಗಿದೆ. ಇಲ್ಲಿ 6 ಅಡಿ ಎತ್ತರದ ಭರತನ ಮೂರ್ತಿ ಇದ್ದು, ಇದಕ್ಕೆ ಪ್ರತಿದಿನ ಪದ್ಧತಿ ಪ್ರಕಾರವಾಗಿ ಪೂಜೆ ಸಲ್ಲಿಸಲಾಗುತ್ತದೆ.

ಮೂರನೇಯ ದೇವಸ್ಥಾನ ಶ್ರೀ ಲಕ್ಷ್ಮಣ ಪೆರುಮಾಳ್ ದೇವಸ್ಥಾನ. ಇಲ್ಲಿ ಲಕ್ಷ್ಮಣನನ್ನು ಪೂಜಿಸಲಾಗುತ್ತದೆ. ರಾಮನ ಪ್ರಾಣವೇ ಆಗಿದ್ದ ಲಕ್ಷ್ಮಣನ ಮೂರ್ತಿಯನ್ನು ಇಲ್ಲಿ ಸ್ಥಾಪಿಸಲಾಗಿದೆ. ಇದು ಭಾರತದ ಪುರಾತನ ದೇವಸ್ಥಾನಗಳಲ್ಲಿ ಒಂದಾಗಿದೆ.

ನಾಲ್ಕನೇಯ ದೇವಸ್ಥಾನ ಪಯಮ್ಮಾಲ್ ಶತ್ರುಘ್ನ ದೇವಸ್ಥಾನ. ಇಲ್ಲಿ ಶತ್ರುಘ್ನನನ್ನು ಪೂಜಿಸಲಾಗುತ್ತದೆ. ಶತ್ರುಘ್ನ ಈ ಮೂವರು ಸಹೋದರರಿಗೂ ಸಣ್ಣ ತಮ್ಮ. ಹಾಗಾಗಿ ಈ ದೇವಸ್ಥಾನವೂ ಚಿಕ್ಕದು. ಇದರ ಮೂರ್ತಿಯೂ ಚಿಕ್ಕದು.

ಯಾವ ತಿಂಗಳಲ್ಲಿ ಜನಿಸಿದ ಹೆಣ್ಣು ಮಕ್ಕಳು ತುಂಬಾ ಅದೃಷ್ಟವಂತರು?..

ಈ ದೇವಸ್ಥಾನದಲ್ಲಿ ಪತಿ-ಪತ್ನಿ ಸೇರಿ ಪೂಜೆ ಮಾಡುವಂತಿಲ್ಲ..

ಮಂಗಳಮುಖಿಯರ ಬಗ್ಗೆ ನಿಮಗೆ ಗೊತ್ತಿರದ ಕುತೂಹಲಕಾರಿ ವಿಷಯಗಳು..

- Advertisement -

Latest Posts

Don't Miss