ಆಲೂ ಟಿಕ್ಕಿ ಚಾಟ್ ಕರ್ನಾಟದಲ್ಲಿ ಹೆಚ್ಚಾಗಿ ಸಿಗೋದಿಲ್ಲ. ಆದ್ರೆ ನೀವು ಇದನ್ನ ಮನೆಯಲ್ಲಿ ತಯಾರಿಸಿ ತಿನ್ನಬಹುದು. ಹಾಗಾಗಿ ನಾವಿಂದು ಮನೆಯಲ್ಲೇ ಆಲೂ ಟಿಕ್ಕಿ ಚಾಟನ್ನ ತಯಾರಿಸೋದು ಹೇಗೆ..? ಇದಕ್ಕೆ ಬೇಕಾಗಿರುವ ಸಾಮಗ್ರಿಗಳೇನು ಅನ್ನೋ ಬಗ್ಗೆ ಹೇಳಲಿದ್ದೇವೆ.
ಒಂದೇ ಬಜ್ಜಿ ಹಿಟ್ಟಿನಲ್ಲಿ ಎಷ್ಟೆಲ್ಲ ವೆರೈಟಿಯ ಬಜ್ಜಿ ತಯಾರಿಸಬಹುದು ಗೊತ್ತಾ..?
ಬೇಕಾಗುವ ಸಾಮಗ್ರಿ: ಎರಡರಿಂದ ಮೂರು ಬೇಯಿಸಿ, ಸ್ಮ್ಯಾಶ್ ಮಾಡಿದ ಆಲೂ, ಒಂದು ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಟೊಮೆಟೋ, ಎರಡು ಸ್ಪೂನ್ ಕಾರ್ನ್ ಫ್ಲೋರ್, ಅರ್ಧ ಸ್ಪೂನ್ ಖಾರದ ಪುಡಿ, ಧನಿಯಾಪುಡಿ, ಚಾಟ್ ಮಸಾಲಾ, ಗರಂ ಮಸಾಲೆ, ಜೀರಿಗೆ ಪುಡಿ, ಕೊಂಚ ಅರಿಶಿನ, ಒಂದು ಸ್ಪೂನ್ ಜಿಂಜರ್- ಗಾರ್ಲಿಕ್- ಹಸಿಮೆಣಸಿನ ಪೇಸ್ಟ್, ಗ್ರೀನ್ ಚಟ್ನಿ, ಸ್ವೀಟ್ ಚಟ್ನಿ, ನಾಲ್ಕು ಸ್ಪೂನ್ ಮೊಸರು, ಸೇವ್, ಖಾರಾ ಬೂಂದಿ, ಎರಡು ಸ್ಪೂನ್ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.
ರಾಯ್ತಾಗೆ ಸ್ಪೆಶಲ್ ಟೇಸ್ಟ್ ಬರಬೇಕು ಅಂದ್ರೆ ಈ 2 ವಸ್ತುವನ್ನ ಬಳಸಿ..
ಮಾಡುವ ವಿಧಾನ: ಬಟಾಟೆಗೆ, ಕಾರ್ನ್ ಫ್ಲೋರ್ ಪೇಸ್ಟ್, ಖಾರದ ಪುಡಿ, ಅರಿಶಿನ, ಚಾಟ್ ಮಸಾಲೆ, ಗರಂ ಮಸಾಲೆ, ಜೀರಿಗೆ ಪುಡಿ, ಧನಿಯಾ ಪುಡಿ, ಉಪ್ಪು, ಜಿಂಜರ್- ಗಾರ್ಲಿಕ್- ಹಸಿಮೆಣಸಿನ ಪೇಸ್ಟ್ ಹಾಕಿ ಎಲ್ಲವನ್ನೂ ಮಿಕ್ಸ್ ಮಾಡಿ, ಕಟ್ಲೇಟ್ ಶೇಪ್ ಕೊಡಿ. ಈಗ ಪ್ಯಾನ್ ಬಿಸಿ ಮಾಡಿ, ಅದಕ್ಕೆ ಕಟ್ಲೇಟ್ ಹಾಕಿ, ಎರಡು ಸ್ಪೂನ್ ಎಣ್ಣೆ ಜೊತೆ ಚೆನ್ನಾಗಿ ತವ್ವಾ ಫ್ರೈ ಮಾಡಿ. ಈಗ ಆಲೂ ಟಿಕ್ಕಿ ರೆಡಿ.
ಈಗ ಒಂದು ಪ್ಲೋಟ್‌ಗೆ ಟಿಕ್ಕಿ ಹಾಕಿ, ಅದರ ಮೇಲೆ ಮೊಸರು, ಗ್ರೀನ್ ಚಟ್ನಿ, ಸ್ವೀಟ್ ಚಟ್ನಿ, ಈರುಳ್ಳಿ ಮತ್ತು ಟೊಮೆಟೋ, ಸೇವ್, ಖಾರಾ ಬೂಂದಿ ಹಾಕಿದ್ರೆ, ಆಲೂ ಟಿಕ್ಕಿ ಚಾಟ್ ರೆಡಿ. ನಿಮಗೆ ಖಾರ ಮತ್ತು ರುಚಿ ಹೆಚ್ಚು ಬೇಕಾದ್ರೆ ಇದಕ್ಕೆ ಖಾರದ ಪುಡಿ, ಚಾಟ್ ಮಸಾಲೆ ಬಳಸಬಹುದು.
ಟೆಂಪಲ್ ಸ್ಟೈಲ್ ರಸಂ ತಯಾರಿಸಬೇಕಾ..? ಇಲ್ಲಿದೆ ನೋಡಿ ರೆಸಿಪಿ..