ಸಕ್ಕರೆ ಆರೋಗ್ಯಕ್ಕೆ ಹಾನಿಕಾರಕ ಅಂತಾ ಎಲ್ಲರಿಗೂ ಗೊತ್ತು. ಆದ್ರೂ ಕೂಡ ಕೆಲವರು ಸಕ್ಕರೆಯನ್ನೇ ಬಳಸುತ್ತಾರೆ. ಯಾಕಂದ್ರೆ ಅವರಿಗೆ ಸಕ್ಕರೆ ಬದಲು ಏನು ಬಳಸಬೇಕು ಅಂತಾ ಗೊತ್ತಿರುವುದಿಲ್ಲ. ಹಾಗಾಗಿ ನಾವಿಂದು ಸಕ್ಕರೆ ಬದಲು, ಸಿಹಿಗಾಗಿ ನೀವು ಏನನ್ನು ಬಳಸಬಹುದು ಅಂತಾ ಹೇಳಲಿದ್ದೇವೆ..
ಮೊದಲನೇಯ ವಸ್ತು, ಬೆಲ್ಲದ ಪುಡಿ ಅಥವಾ ಬೆಲ್ಲ. ಟೀ, ಕಾಫಿ, ಸ್ವೀಟ್ಸ್ ಮಾಡುವಾಗ ನೀವು ಬೆಲ್ಲದ ಪುಡಿ ಅಥವಾ ಬೆಲ್ಲವನ್ನು ಬಳಸಬಹುದು. ಆದ್ರೆ ಅದು ಕೆಮಿಕಲ್ ಇಲ್ಲದ ಬೆಲ್ಲವಾಗಿರಬೇಕು. ಹಾಗಿದ್ದಲ್ಲಿ ಮಾತ್ರ, ನೀವು ಬೆಲ್ಲ ಬಳಸಿ ಪ್ರಯೋಜನವಾಗುತ್ತದೆ. ಜೋನಿ ಬೆಲ್ಲವೂ ಬಳಸಬಹುದು. ಬೆಲ್ಲ ಆರೋಗ್ಯಕ್ಕೆ ತುಂಬಾ ಉತ್ತಮವಾದ ಆಹಾರ ಮತ್ತು ರುಚಿಕರವಾದ ಆಹಾರ.
ಎರಡನೇಯ ವಸ್ತು, ಹಸಿ ಖರ್ಜೂರ. ನಿಮಗೆ ಸಿಹಿ ತಿನ್ನುವ ಅಭ್ಯಾಸವಿದೆ. ಆದರೆ ಅದು ಆರೋಗ್ಯಕ್ಕೆ ಉತ್ತಮವಲ್ಲ ಎಂದು ಗೊತ್ತಿದೆ. ಹಾಗಿದ್ದಲ್ಲಿ ನೀವು ಹಸಿ ಖರ್ಜೂರವನ್ನು ತಿನ್ನಿ. ದಿನಕ್ಕೆ ನಾಲ್ಕು ಹಸಿ ಖರ್ಜೂರ ತಿನ್ನಬಹುದು. ಅದಕ್ಕಿಂತ ಹೆಚ್ಚು ತಿಂದರೆ, ಮಲಬದ್ಧತೆ ಸಮಸ್ಯೆ ಬರುತ್ತದೆ. ಅದರಲ್ಲೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಖರ್ಜೂರ ಮತ್ತು ಬಿಸಿ ಹಾಲು ಸೇವಿಸಿದ್ರೆ, ನಿಮಗೆ ಶಕ್ತಿಯೂ ಬರತ್ತೆ.
ಮೂರನೇಯ ವಸ್ತು, ಒಣ ದ್ರಾಕ್ಷಿ. ಒಣ ದ್ರಾಕ್ಷಿ ಆರೋಗ್ಯಕ್ಕೂ ಒಳ್ಳೆಯದು, ರುಚಿಯೂ ಉತ್ತಮವಾಗಿರತ್ತೆ. ನೀವು ಫ್ರೂಟ್ಸ್ ಮತ್ತು ಹಾಲಿನೊಂದಿಗೆ, ಒಣದ್ರಾಕ್ಷಿ ಮತ್ತು ಡ್ರೈಫ್ರೂಟ್ಸ್ ಸೇರಿಸಿ ತಿಂದ್ರೆ ಸಖತ್ ರುಚಿಯಾಗಿರತ್ತೆ. ನೀವು ಸಕ್ಕರೆ ಬದಲಿಗೆ ಒಣ ದ್ರಾಕ್ಷಿ ಬಳಸಬಹುದು.
ನಾಲ್ಕನೇಯ ವಸ್ತು, ಜೇನು ತುಪ್ಪ. ನಿಸರ್ಗದಿಂದ ಸಿಕ್ಕ ಕೊಡುಗೆಗಳಲ್ಲಿ ಜೇನುತುಪ್ಪ ಕೂಡ ಒಂದು. ಇದು ಉಷ್ಣ ಪದಾರ್ಥ. ಆದ್ರೆ ಆರೋಗ್ಯಕ್ಕೆ ಉತ್ತಮವಾಗಿದೆ. ನೀವು ಹಾಲಿಗೆ ಜೇನುತುಪ್ಪ ಹಾಕಿ ಕುಡಿಯಬಹುದು. ಹಣ್ಣಿಗೂ ಜೇನುತುಪ್ಪ ಹಾಕಿ, ಫ್ರೂಟ್ಸ್ ಸಲಾಡ್ ಮಾಡಿ ತಿನ್ನಬಹುದು. ಆದ್ರೆ ಅದು ಮಿತವಾಗಿರಲಿ ಅಷ್ಟೇ. ಜೇನುತುಪ್ಪ ಹೆಚ್ಚು ತಿಂದರೆ, ದೇಹದಲ್ಲಿ ಉಷ್ಣತೆ ಹೆಚ್ಚುತ್ತದೆ. ಮೂತ್ರ ವಿಸರ್ಜನೆ ಸರಿಯಾಗಿ ಆಗುವುದಿಲ್ಲ.
ಐದನೇಯ ವಸ್ತು, ಅಂಜೂರ. ನೀವು ಶುಗರ್ ಪೇಷಂಟ್ ಆಗಿದ್ದಲ್ಲಿ, ನಿಮಗೆ ಸಿಹಿ ತಿನ್ನಬೇಕು ಎನ್ನಿಸಿದ್ದಲ್ಲಿ, ಒಂದು ಅಂಜೂರವನ್ನು ತಿನ್ನಿ. ರಾತ್ರಿ ನೀರಿನಲ್ಲಿ ಅಂಜೂರ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ಇನ್ನೂ ಉತ್ತಮ.
ಯಾವುದರಿಂದ ಸ್ನಾನ ಮಾಡಿದ್ರೆ ಉತ್ತಮ..? ಆರೋಗ್ಯಕ್ಕೂ ಸ್ನಾನಕ್ಕೂ ಇದೆ ನಂಟು..