Political News: ಇಂದು ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆದ ಜೆಡಿಎಸ್- ಬಿಜೆಪಿ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಬಿ. ವೈ. ವಿಜಯೇಂದ್ರ, ಚುನಾವಣಾ ಸಂದರ್ಭದಲ್ಲಿ ನಡೀತಾ ಇರುವ ಸಮನ್ವಯ ಸಭೆ ಇದು. ಈ ಸಭೆ ಬಹಳ ಹಿಂದೆ ಆಗ್ಬೇಕಿತ್ತು. ಕಾರಣಾಂತರಗಳಿಂದ ಇದು ನಡೀತಾ ಇದೆ. ಇದು ಮಹತ್ವದ ಸಭೆ. ಬಿಜೆಪಿ ಜೆಡಿಎಸ್ ಸಮನ್ವಯ ಗೊಂಡ ಹಿನ್ನೆಲೆ ಸಭೆ ನಡೀತಾ ಇದೆ. ಒಗ್ಗಟ್ಟಾಗಿ ವೇದಿಕೆಗೆ ಬಂದಿದ್ದೇವೆ. ನನಗೆ ನಂಬಿಕೆ ಇದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಈ ಸಮ್ಮೀಳನ ರಾಜ್ಯ ರಾಜಕೀಯದಲ್ಲಿ ಸುವರ್ಣಾಕ್ಷರದಲ್ಲಿ ಬರೆಯೋ ಹಾಗೇ ಆಗುತ್ತೆ. ಇವತ್ತು ಒಂದು ವೇದಿಕೆಯಲ್ಲಿ ಸೇರಿದ್ದೇವೆ. ಮೋದಿ ಜೊತೆ ಜೊತೆಗೆ ದೇವೆಗೌಡ ಅವರು ಸಮ್ಮೀಳನಕ್ಕೆ ಆಶೀರ್ವಾದ ಮಾಡಿದ್ದಾರೆ. ಮುತ್ಸದ್ಧಿ ರಾಜಕಾರಣಿಯಾದ ದೇವೇಗೌಡರು ಮೋದಿ ಪ್ರಧಾನಿಯಾಗಬೇಕು ಎಂಬ ಸಂಕಲ್ಪ ದಿಂದ ಆಶೀರ್ವಾದ ಮಾಡಿದ್ದಾರೆ. ಇದರಿಂದ ಆನೆ ಬಲ ಬಂದಂತಾಗಿದೆ. ಹೆಚ್ ಡಿಕೆ ನೇತೃತ್ವದಲ್ಲಿ ಎರಡು ದಿನಾ ನಾನು ಮಂಡ್ಯ ಮೈಸೂರಿನಲ್ಲಿ ಪ್ರವಾಸ ಮಾಡಿದ್ದೇವೆ. ಇದರಿಂದ ಕಾರ್ಯಕರ್ತರಿಗೆ ಸ್ಪಷ್ಟ ಸಂದೇಶ ಸಿಕ್ಕಿದೆ. ಕರ್ನಾಟಕದಲ್ಲಿ ಹೊಂದಾಣಿಕೆ ರಾಜಕೀಯ ನಡೆದಿದೆ.ಇವತ್ತು ನಾವು ಬಗ್ಗಟ್ಟಾಗ್ಗಿದ್ದೇವೆ. ರಾಜ್ಯದ ಪ್ರಜ್ಞಾವಂತಮತದಾರರು ನಮ್ಮ ಕಡೆ ಇದ್ದಾರೆ. ತಳಹಂತದ ಕಾರ್ಯಕರ್ತರ ಒಗ್ಗಟ್ಟು ನೋಡೋದೇ ಖುಷಿ. ಕಾರ್ಯಕರ್ತರಲ್ಲಿ ಒಗ್ಗಟ್ಟಾಗಿ ದುಡಿಯುವ ವಾತಾವರಣ ನಿರ್ಮಾಣವಾಗಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಹೆಚ್ ಡಿಕೆ ಆಸ್ಪತ್ರೆಯಿಂದ ಬಿಡುಗಡೆಯಾದ ಮೂರೇ ದಿನಕ್ಕೆ ಪ್ರವಾಸ ಮಾಡಿದ್ದಾರೆ. ಮೋದಿ ಜನಪ್ರಿಯತೆ ಉತ್ತುಂಗಕ್ಕೆ ಹೋಗ್ತಾ ಇದೆ. ಕಾಂಗ್ರೆಸ್ ನ ಸಚಿವರು ಚುನಾವಣೆಯಲ್ಲಿ ಭಾಗವಹಿಸುವ ಎದೆಗಾರಿಕೆ ತೋರಿಸ್ತಾ ಇಲ್ಲಾ. ನಮ್ಮ ಅಭ್ಯರ್ಥಿಗಳು ವಿಜಯ ಪತಾಕೆ ಹಾರಿಸ್ತಾರೆ. ಕಾಂಗ್ರೆಸ್ ಭ್ರಮೆಯಲ್ಲಿದೆ. ಅಧಿಕಾರದ ಅಮಲಿನಲ್ಲಿ ತೇಲ್ತಾ ಇದಾರೆ. ತನ್ನ ಆಡಳಿತ ವೈಖರಿಯಿಂದ ಜನಾ ಬೇಸತ್ತಿದ್ದಾರೆ. ಬಡವ, ರೈತ ವಿರೋಧಿ ಸರ್ಕಾರ ಕಾಂಗ್ರೆಸ್ ಸರ್ಕಾರ. ಇದು ಅವರ ಬದ್ಧತೆ ತೋರಿಸುತ್ತದೆ. ಅಭಿವೃದ್ಧಿಗೆ ಒಂದೇ ಒಂದು ರೂಪಾಯಿ ಕೊಡ್ತಾ ಇಲ್ಲಾ. ಅಭಿವೃದ್ಧಿ ಶೂನ್ಯ ಸರ್ಕಾರ. ಈ ಸರ್ಕಾರದ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ. ಮೋದಿ ಜನಪ್ರಿಯತೆ ಹೆಚ್ಚಾಗ್ತಾ ಇದೆ. 400 ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ. ರಾಜ್ಯದ ಹಿತದೃಷ್ಟಿಯಿಂದ ಒಗ್ಗಟ್ಟಾಗಿ ಶ್ರಮಿಸೋಣ ಎಂದು ವಿಜಯೇಂದ್ರ ಕರೆ ನೀಡಿದ್ದಾರೆ.
ಗೂಂಡಾಪಡೆ ಕಟ್ಟಿರುವ ನಿಮ್ಮ ಪಕ್ಷದ ಇತಿಹಾಸ ಎಲ್ಲರಿಗೂ ತಿಳಿದಿದೆ: ಯತೀಂದ್ರಗೆ ಪ್ರೀತಂಗೌಡ ಟಾಂಗ್
ಅಣ್ಣ-ಅತ್ತಿಗೆ ಆಶೀರ್ವಾದ ಪಡೆದು ನಾಮಪತ್ರ ಸಲ್ಲಿಸಿದ ಸಂಸದ ಡಿ.ಕೆ.ಸುರೇಶ್